ಕಕ್ಕೇರಾ: ‘ಸಂಗೀತ ಆಲಿಸುವುದರಿಂದ ಮನ ಉಲ್ಲಾಸಗೊಳ್ಳುತ್ತದೆ’ ಎಂದು ಆಕಾಶವಾಣಿ ಕಲಾವಿದ ಮಲ್ಲಿಕಾರ್ಜುನ ಭಜಂತ್ರಿ ಕಲಬುರಗಿ ಹೇಳಿದರು.

ತಾಲ್ಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸೋಮನಾಥ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ರಾತ್ರಿ ಜರುಗಿದ ಗವಾಯಿ ಬಸಣ್ಣ ಗುರಿಕಾರ ಹಾಗೂ ವಿ. ದೀಪಾ ವಜ್ಜಲ್ ಶ್ಯಾಸ್ತ್ರೀ ಸಂಗೀತ, ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ‘ಸಂಸಾರದ ಜಂಜಾಟದ ಬೇಸತ್ತ ಮನಗಳು ಸಂಗೀತ ಆಲಿಸುವುದರಿಂದ ಮನಸ್ಸುಉಲ್ಲಾಸಗೊಳ್ಳುತ್ತದೆ. ಮನಸ್ಸು ಶುದ್ದೀಕರಿಸಲು ಸಂಗೀತ ಆಲಿಸಬೇಕು’ ಎಂದು ಹೇಳಿದರು.

ಖ್ಯಾತ ಗಾಯಕರಾದ ಬಸಣ್ಣ ಗುರಿಕಾರ ಗವಾಯಿ ಹಾಗೂ ವಿ. ದೀಪಾ ವಜ್ಜಲ್ ರಸಂಗೀತ ಪ್ರಸ್ತುತ ಪಡಿಸಿದರು. ನಂತರ ಅನೇಕ ಕಲಾವಿಧರು ಆಹೋರಾತ್ರಿ ಕಾರ್ಯಕ್ರಮ ಜರುಗಿತು.

ನಂದಣ್ಣಪ್ಪ ಫುಜಾರಿ ಶ್ರೀ, ಚಕ್ರಪ್ಪ ಪೂಜಾರಿ, ಈಶ್ವರ ಬಡಿಗೇರ, ಅಶೋಕ ರಾಜನಕೋಳೂರು, ಕಸಾಪ ಅಧ್ಯಕ್ಷ ಗವಿಸಿದ್ದೇಶ ಹೊಗರಿ, ಪ್ರವೀಣ ಪತ್ತಾರ್, ಮಹಾಂತೇಶ ಶಹಾಪುರಕರ್, ಸೂಗಮ್ಮ, ಶಾಂತಪ್ಪ ಡೊಳ್ಳಿನ, ದೇವಮ್ಮ, ಸ್ನೇಹಾ, ಜುಮ್ಮಣ್ಣ ಜಂಪಾ, ನಂದಪ್ಪ ದ್ಯಾಸ್, ಮಲ್ಲಪ್ಪ ದಂಡಿನ್, ಸೋಮಣ್ಣ ದಂಡಿನ್, ಸೇರಿದಂತೆ ಹಲವು ಸಂಗೀತಾಸಕ್ತರಿದ್ದರು.