ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಪುರಾತನ ಪುಷ್ಕರಣಿ, 365 ಲಿಂಗಗಳು!

ಕಾಮಗಾರಿ ವೇಳೆ ಪತ್ತೆಯಾದ ಕಲ್ಯಾಣಿ, 5 ದಿಕ್ಕುಗಳಲ್ಲೂ ಶಿವಲಿಂಗ
Last Updated 26 ಜೂನ್ 2022, 5:35 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ಶಿರವಾಳ ದಕ್ಷಿಣ ವಾರಣಾಸಿ ಎಂದೇ ಪ್ರಸಿದ್ದಿಯಾಗಿದೆ. ಗ್ರಾಮದಲ್ಲಿ ಎಡವಿರೂ ದೇವಳ, ಲಿಂಗಗಳು ಸಿಗುತ್ತಿವೆ. ಈಚೆಗೆ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿರ್ವಹಿಸುವಾಗ ತೀರ್ಥಮಠದ ಬಳಿ ಪುಷ್ಕರಣಿ ಪುನರ್ಜಿವನಗೊಳಿಸಿದ್ದಾರೆ. ಒಂದೇ ಗ್ರಾಮದಲ್ಲಿ 365 ಲಿಂಗಗಳು ಇವೆ.

ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ₹4ಲಕ್ಷ ವೆಚ್ಚದಲ್ಲಿ ಬಾವಿ ಹೂಳೆತ್ತುವ ಸಮಯದಲ್ಲಿ ವಿಶಾಲವಾದ ಪುಷ್ಕರಣಿಯು ಪತ್ತೆಯಾಗಿದೆ. ಅದರ ಸುತ್ತಲಿನ ಮಣ್ಣು, ಕಸ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಿದಾಗ ನೀರಿನ ಬುಗ್ಗೆಯಂತೆ ಹೊರ ಬರಲು ಆರಂಭಿಸಿತು. ಬಳಿಕ ಯಂತ್ರದ ಮೂಲಕ ನೀರು ಹೊರ ಹಾಕಿದಾಗ ಸುಸಜ್ಜಿತ ಕಟ್ಟಡ ಕಂಡುಬಂತು.

ನಾಲ್ಕು ಕಡೆ ಲಿಂಗ ಸ್ಥಾಪಿಸಿದ್ದು, ಮಧ್ಯದಲ್ಲೂ ಒಂದು ಬೃಹತ್‌ ಲಿಂಗವಿದೆ. ಹಿಂದೆ ಇದೇ ಪುಷ್ಕರಣಿಯ ನೀರಿನಿಂದ ಉಳಿದ ದೇವಾಲಯಗಳಲ್ಲೂ ಪೂಜೆ ನೆರವೇರುತ್ತಿತ್ತು ಅದಕ್ಕಾಗಿ ತೀರ್ಥ ಪುಷ್ಕರಣಿ ಎನ್ನುತ್ತಾರೆಶಿರವಾಳ ಶಿಲಾ ಶಾಸನಗಳ ಸಂಶೋಧಕ ಡಾ.ಮೋನಪ್ಪಶಿರವಾಳ.

ಶಿರವಾಳ ಗ್ರಾಮ ಸೇರಿದಂತೆ ಅದರ ಸುತ್ತಮುತ್ತಲು ದೇಗುಲ ಬಾವಿ ಆವರಿಸಿಕೊಂಡಿವೆ. ಅದರಲ್ಲಿ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ಕ್ರಿ.ಶ 10ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಕಾಲಾವಧಿಯಲ್ಲಿ ನಿರ್ಮಿಸಲಾಗಿದ್ದು ಇಂದಿಗೂ ಸುಸಜ್ಜಿತವಾಗಿದೆ.

ಗ್ರಾಮದ ಪಶ್ಚಿಮ ದಿಕ್ಕಿನಲ್ಲಿರುವ ನಾಗಯ್ಯ ದೇವಾಲಯವನ್ನು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಿರಬಹುದು. ಸೂಕ್ತ ರಕ್ಷಣೆ ಇಲ್ಲದೆ ಸಂಪೂರ್ಣವಾಗಿ ನಾಶವಾಗಿದೆ. ಗ್ರಾಮದಲ್ಲಿ ಹಲವಾರು ದೇಗುಲಗಳು ಮುಚ್ಚಿ ಹೋಗಿವೆ. ದನದ ಕೊಟ್ಟಿಗೆ ನಿರ್ಮಿಸಿದ್ದಾರೆ, ಶೌಚಾಲದ ಕಟ್ಟಡ ತಲೆ ಎತ್ತಿವೆ. ಅಲ್ಲಲ್ಲಿ ಪಾಳು ಬಿದ್ದು ಜಾಲಿ ಗಿಡ ಬೆಳೆದು ನಿಂತಿವೆ. ಅವೆಲ್ಲವುಗಳಿಗೆ ಸೂಕ್ತ ಸಂರಕ್ಷಣೆ ಅಗತ್ಯವಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ ಮರೆಪ್ಪಪ್ಯಾಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT