ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಕರ ವೈಚಾರಿಕ ಚಿಂತನೆ ದಾರಿ ದೀಪ’

ಜಿಲ್ಲೆಯಲ್ಲಿ ಹಲವೆಡೆ ಸರಳವಾಗಿ ಕನಕದಾಸ ಜಯಂತಿ ಆಚರಣೆ; ಭಾವಚಿತ್ರಕ್ಕೆ ಪುಷ್ಪ ನಮನ
Last Updated 3 ಡಿಸೆಂಬರ್ 2020, 16:26 IST
ಅಕ್ಷರ ಗಾತ್ರ

ಯಾದಗಿರಿ: ಸಂತಶ್ರೇಷ್ಠ ಕನಕದಾಸರ ಜೀವನ ಮೌಲ್ಯಗಳು, ಅವರ ವೈಚಾರಿಕ ಚಿಂತನೆಗಳು ಎಲ್ಲರಿಗೂ ದಾರಿ ದೀಪವಾಗಲಿ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕನಕದಾಸರ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ, ನಗರಸಭೆ ಅಧ್ಯಕ್ಷ ವಿಲಾಸ ಬಿ. ಪಾಟೀಲ, ವಿಶ್ವನಾಥ ನೀಲಹಳ್ಳಿ, ಹೊನ್ನಪ್ಪ ಮುಷ್ಟೂರು, ಚನ್ನಕೇಶಗೌಡ, ಮಲ್ಲಯ್ಯ, ಮಂಜುನಾಥ, ಫಕೀರಪ್ಪ ರಾಮಸಮುದ್ರ ಇದ್ದರು.

‘ದಾಸ ಸಾಹಿತ್ಯ ಶ್ರೀಮಂತ’

ಹುಣಸಗಿ: ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರವಾಗಿದ್ದು, ಅವರ ಕೀರ್ತನೆಗಳಲ್ಲಿ ಭಕ್ತಿಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸಿದ್ದಾರೆ ಎಂದು ಹುಣಸಗಿ ತಹಶೀಲ್ದಾರ್ ವಿನಯ ಕುಮಾರ ಪಾಟೀಲ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಯಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಶಿಕ್ಷಕ ಶಿವಾನಂದ ತೊಟದ್ ಮಾತನಾಡಿದರು. ಉಪ ತಹಶಿಲ್ದಾರ್ ಮಾಹದೇವಪ್ಪಗೌಡ ಬಿರಾದಾರ ಶ್ರೀಧರ ಪವಾರ, ಗುರುಲಿಂಗಯ್ಯ ಬಸವರಾಜ ಬಿರಾದಾರ ಸೇರಿದಂತೆ ಇತರರು ಇದ್ದರು.

ದಾಸರ ಕೀರ್ತನೆಗಳ ಸಾರ: ವಜ್ಜಲ: ಇಂದಿನ ಯುವಜನತೆ ದುಶ್ಚಟಗಳಿಗೆ ಬಲಿಯಾಗದೇ, ದಾಸರ ಕೀರ್ತನೆಗಳ ಸಾರ ತಿಳಿದುಕೊಂಡು ಜೀವನ ನಡೆಸಬೇಕು ಎಂದು ತಾಲ್ಲೂಕು ರೆಡ್ಡಿ ಸಮಾಜದ ಅಧ್ಯಕ್ಷ ಸಂಗನಗೌಡ ಪಾಟೀಲ ನುಡಿದರು.

ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಯಂಕನಗೌಡ ಪಾಟೀಲ, ಚಂದಪ್ಪ ಗಿಂಡಿ, ಚಂದ್ರಶೇಖರ ಬೊರಮಗುಂಡ, ಚಂದ್ರಶೇಖರ ಪಟ್ಟಣಶೆಟ್ಟಿ, ಸಂತೋಷ ಹುಂಡೇಕಾರ, ರೇವಣಸಿದ್ದಪ್ಪ
ಹೊರಟ್ಟಿ, ಬೀರಪ್ಪ, ಬೂಮಣ್ಣ, ಸಿದ್ರಾಮಪ್ಪ ಗಿಂಡಿ, ನಿಂಗಪ್ಪ ಬೋಯಿ, ಸಾಬಣ್ಣ ಗಿಂಡಿ, ಸಿದ್ದು ಅಬ್ಯಾಳಿ, ಶ್ರೀಶೈಲ ದೇವತ್ಕಲ್, ಕರೆಪ್ಪ ದೊಡಮನಿ, ಪರಮಾನಂದ ಗಿಂಡಿ, ಮಾಳಿಂಗರಾಯ, ಇದ್ದರು.

‘ಸಮಾಜ ತಿದ್ದಿದ ಸಂತ’

ಕೆಂಭಾವಿ: 16ನೇ ಶತಮಾನದಲ್ಲಿ ಸಮಾಜದ ಅಂಕುಡೊಂಕುಗಳನ್ನು ತಮ್ಮ ದಾಸ ಸಾಹಿತ್ಯದ ಮೂಲಕ ಬದಲಾವಣೆಗೆ ಪ್ರಯತ್ನಿಸಿದ ಕನಕದಾಸರ ವಿಚಾರಗಳು ಇಂದಿಗೂ ಪ್ರಸ್ತುತ. ಅವರ ವಿಚಾರಧಾರೆಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಖಂಡಪ್ಪ ತಾತ ಹೇಳಿದರು.

ಸಮೀಪದ ನಗನೂರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಣಮಂತ್ರಾಯ ಮಾಣಸುಣಗಿ, ಪ್ರದಾನೆಪ್ಪ ದಿಡ್ಡಿ, ನಿಂಗಪ್ಪ ದಿಡ್ಡಿ, ಗುರಣ್ಣ ತಿಪ್ಪಶೆಟ್ಟಿ, ಹಣಮಂತ್ರಾಯ ಘಂಟಿ, ಶಂಕರ ಬುಸರೆಡ್ಡಿ, ಬಸಣ್ಣ ಗೊರಾನೋರ, ದೇವಣ್ಣ ಮುಸರಿ, ನಿಂಗಪ್ಪ ಅಂಬಳೇರ, ರೇವಣಸಿದ್ದಪ್ಪ ಗೊರಾನೋರ, ಸದಾಶಿವ ಗೊರುರ, ದೇವಪ್ಪ ದೊಡಮನಿ, ನಗರಪ್ಪ ದಿಡ್ಡಿ, ಜಟ್ಟೆಪ್ಪ ದೊಡಮನಿ, ಶರಣು ದೊಡಮನಿ, ಮಲ್ಲಣ್ಣ ಸಂಗಾನೊರ ಸೇರಿದಂತೆ ಇತರರಿದ್ದರು.

ಭಾವಚಿತ್ರಕ್ಕೆ ನಮನ

ಕನಕದಾಸರ ಕೀರ್ತನೆಗಳು, ತತ್ವಗಳನ್ನು ಅರಿಯುವುದರ ಮೂಲಕ ಸಮಾಜದಲ್ಲಿ ಎಲ್ಲ ಸಮುದಾಯಗಳ ಜನರು ಶಾಂತಿ ಸಹಬಾಳ್ವೆಯಿಂದ ಬಾಳಲು ಸಾಧ್ಯವಿದೆ ಎಂದು ಪಿಕೆಪಿಎಸ್-2 ರ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ಹೇಳಿದರು.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-2 ರಲ್ಲಿ ಸಂತ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಉಪಾಧ್ಯಕ್ಷ ತಿಪ್ಪಣ್ಣ ಯಾಳಗಿ, ಮಹಿಪಾಲರೆಡ್ಡಿ ದಿಗ್ಗಾವಿ, ರಹೀಮಾನ್ ಪಟೇಲ್, ರಂಗಪ್ಪ ವಡ್ಡರ್, ಸೋಮಲಿಂಗಪ್ಪ ದೊಡ್ಡಮನಿ, ಶಿವಶಂಕರ ಖಾನಾಪುರ, ಭಾಗಪ್ಪ ಮ್ಯಾಗೇರಿ, ಶರಣು ಅರಕೇರಾ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT