ವಡಗೇರಾ: ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ. ಈ ಕುರಿತು ಅನೇಕ ದೂರುಗಳು ಬಂದಿವೆ. ನೀವು ಏನು ಕೆಲಸ ಮಾಡುತ್ತೀರಿ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ ಅಧಿಕಾಗಳಿಗೆ ಪ್ರಶ್ನಿಸಿದರು.

ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡಿ ಯಾವ ಊರಿನಲ್ಲಿ ಆರ್.ಓ ಪ್ಲಾಂಟ್ ಆರಂಭವಾಗಿವೆ. ಎಲ್ಲಿ ಇಲ್ಲ ಎಂಬ ಮಾಹಿತಿಯನ್ನು 15 ದಿನದೊಳಗೆ ಮಾಹಿತಿ ನೀಡಬೇಕು. ಸರಿಯಾಗಿ ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರಿಗೆ 6 ತಿಂಗಳ ಕಾಲ ಯಾವುದೇ ಕಾಮಗಾರಿ ನೀಡಬಾರದು ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿ ರಾಜಕುಮಾರ ಅವರಿಗೆ ಎಚ್ಚರ ನೀಡಿದರು.

ಎಸ್ಸೆಸ್ಸೆಲ್ಸಿ ತರಗತಿಯ ಪರೀಕ್ಷೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದಕ್ಕಾಗಿ ಬೆಳಿಗ್ಗೆ 8 ರಿಂದ ಸಂಜೆ 6 ವರೆಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಮಾಹಿತಿ ನೀಡಿದರು.

ಶಿಶು ಅಭಿವೃದ್ದಿ ಅಧಿಕಾರಿಗಳಿಗೆ, ಹಾಲು ಮೊಟ್ಟೆಗಳನ್ನು ಸರಿಯಾಗಿ ಹಂಚಿಕೆ ಯಾಗುತ್ತಿದ್ದೇಯಾ ಎಂದು ವಿಚಾರಿಸಿ. ಪೋಷಕರಲ್ಲಿ ಮಕ್ಕಳಿಗೆ ಕೊಡುವ ಪೌಡರ್ ಹಾಲಿನ ಬಗ್ಗೆ ತಪ್ಪು ತಿಳುವಳಿಕೆ ಇದೆ. ಇದರ ಕುರಿತು ಅವರಲ್ಲಿ ಜಾಗೃತಿ ಮಾಡಿಸಬೇಕು. ಎಂದು ತಿಳಿಸಿದರು.

ವಸತಿ ನಿಲಯದ ವಿಚಾರವಾಗಿ ಸಮಾಜಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ರಾಹುತಪ್ಪ ಅವರಿಗೆ ತರಾಟೆಗೆ ತೆಗೆದುಕೊಂಡರು. ಖಾಸಗಿ ವಸತಿ ನಿಲಯಕ್ಕೆ ಅನುದಾನ ನೀಡಿ ವಸತಿ ನಿಲಯ ಚಾಲ್ತಿಯಲ್ಲಿರುವುದಾಗಿ ಹೇಳಿದಾಗ ಸ್ಥಳೀಯರೇ ಇಲ್ಲ ಅಂತ ಹೇಳಿದರು. ನೀವು ಒಪ್ಪುತ್ತಿಲ್ಲವಲ್ಲ, ನಿಲಯಕ್ಕೆ ಭೇಟಿ ನೀಡೊಣ ಆರಂಭದಲ್ಲಿ ಇಲ್ಲದಿದ್ದರೆ ನಿಮ್ಮಿಂದ ತಪ್ಪೊಪ್ಪಿಗೆ ಪತ್ರ ತೆಗೆದುಕೊಂಡು ಕೆಲಸದಿಂದ ಅಮಾನತ್ತು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ 14ನೇ ಹಣಕಾಸು ಯೋಜನೆಯ ಬಜೆಟ್ನಲ್ಲಿ ಜಿಲ್ಲೆಗೆ ಅನ್ಯಾಯ ಮಾಡಿದ್ದು, ಶಹಾಪೂರ ಮತ ಕ್ಷೇತ್ರಕ್ಕೆ ₹20 ಲಕ್ಷ ಹೆಚ್ಚಿನ ಹಣ ನೀಡುವ ಮೂಲಕ ತಾರತಮ್ಯ ಮಾಡಿದ್ದೀರಿ. ಈ ಬಗ್ಗೆ ನಾನು ಸಚಿವರ ಗಮನಕ್ಕೆ ತರುತ್ತೇನೆ ಎಂದು ಶಾಸಕ ಮುದ್ನಾಳ ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾಗಣ್ಣ ಶಿವಮೂರ್ತೆಪ್ಪ ಪೂಜಾರಿ, ತಾಪಂ. ಉಪಾಧ್ಯಕ್ಷೆ ಲಕ್ಷ್ಮಿ ನಾಗರಾಜ ಮಡ್ಡಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಗೌಡ ಗೋನಾಲ, ತಾಪಂ ಸದಸ್ಯ ಪರಶುರಾಮ ಕುರುಕುಂದಾ, ವಡಗೇರಾ ತಹಶೀಲ್ದಾರ್ ಸುರೇಶ್ ಅಂಬಲಗಿ, ಜಗನ್ನಾಥ ಮೂರ್ತಿ,ವಿವಿಧ ಅಧಿಕಾರಿಗಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.