ಯಾದಗಿರಿ: ಅಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ನೌಕರರ ಒಕ್ಕೂಟ ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಗುರುವಾರ ಮತ್ತು ಶುಕ್ರವಾರ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ನೌಕರರು ನಗರದ ಹೊಸಳ್ಳಿ ಕ್ರಾಸ್ ಸಮೀಪದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಎದುರು ಮುಷ್ಕರ ನಡೆಸಿ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ದಿನಗೂಲಿ ಕೆಲಸಗಾರರನ್ನು ಕಾಯಂಗೊಳಿಸಬೇಕು. ವೈಜ್ಞಾನಿಕ ಮಾನವ ಶಕ್ತಿ ಯೋಜನೆ ಜಾರಿಯಾಗಬೇಕು. ಅನುಕಂಪ ಆಧಾರಿತ ನೇಮಕಾತಿ ಜಾರಿಯಾಗಬೇಕು. ಎಲ್ಲಾ ಭತ್ಯೆಗಳನ್ನು ನೀಡಬೇಕು. ಹೀಗೆ ಹಲವು ಬೇಡಿಕೆಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ಮುಷ್ಕರ ಹಮ್ಮಿಕೊಂಡಿದ್ದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಅಧಿಕಾರಿಗಳ ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸ್, ರಾಜ್ಯ ಸಮಿತಿ ಸದಸ್ಯರಾದ ವರುಣಕುಮಾರ, ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿದ್ದಣ್ಣಗೌಡ ಅಬ್ಬೆತುಮಕೂರ, ಬಿ.ಪಿ.ಸುಬೇದಾರ್, ವೀರಣ್ಣ ಗುಡಿ, ಸಂಜೀವ್ ಕುಮಾರ, ಸುರೇಶ ತೋಮಲ, ನೌಕರರ ಸಂಘದ ಉಪಾಧ್ಯಕ್ಷ ನರೇಶ ಸಂಕ್ಲಪುರ, ಎಸ್.ವಿ.ಪಾಟೀಲ, ಬಾಲದಂಡಪ್ಪ, ಭೀಮಾಶಂಕರ ವನದುರ್ಗ ಶರಬಸ್ಸಪ್ಪ ಶಹಾಪುರ, ಬಸವರಾಜ್ ಹತ್ತಿಕುಣಿ, ಮಂಜುನಾಥ ಘನಾತೆ, ಸಿದ್ದಾರ್ಥ ಮುಷ್ಟೂರು, ಪ್ರಭು ಬೆಂಡೆಬೆಂಬಳಿ ಹಾಗೂ ಜಿಲ್ಲೆಯ ವಿವಿಧ ವಿವಿಧ ಶಾಖೆಗಳಿಂದ ಜಂಟಿ ಸಂಘದ ಸದಸ್ಯರು, ಸಿಬ್ಬಂದಿ ವರ್ಗ ನೂರಾರು ಜನ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.