ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | 200 ಜನರಿಗೆ ಕೋವಿಡ್‌ ದೃಢ

ಸೋಂಕಿತರ ಸಂಖ್ಯೆ 2,970ಕ್ಕೆ ಏರಿಕೆ, ಇಬ್ಬರು ಸಾವು
Last Updated 8 ಆಗಸ್ಟ್ 2020, 16:52 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಶನಿವಾರ ಕೊರೊನಾ ಸೋಂಕಿತರ ಸಂಖ್ಯೆ ದ್ವಿಶತಕ ಬಾರಿಸಿದೆ. ಸೋಂಕಿತರ ಸಂಖ್ಯೆ 2,970ಕ್ಕೆ ಏರಿಕೆಯಾಗಿದೆ.25 ಜನರು ಗುಣಮುಖರಾಗಿದ್ದಾರೆ. ಒಟ್ಟಾರೆ 2,088 ಜನರು ಚೇತರಿಕೆಯಾಗಿದ್ದಾರೆ.

70 ವರ್ಷದ ಪುರುಷ, 65 ವರ್ಷದ ಪುರುಷಆಗಸ್ಟ್ 7ರಂದು ಮೃತಪಟ್ಟಿದ್ದಾರೆ. ಇದರಿಂದ 16ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ.ಯಾದಗಿರಿ ನಗರ, ತಾಲ್ಲೂಕಿನಲ್ಲಿ 90 ಪ್ರಕರಣಗಳು ಪತ್ತೆಯಾಗಿವೆ. ಗುರುಮಠಕಲ್‌ ತಾಲ್ಲೂಕಿನಲ್ಲಿ 6, ಶಹಾಪುರ ತಾಲ್ಲೂಕಿನಲ್ಲಿ 60, ವಡಗೇರಾ ತಾಲ್ಲೂಕಿನಲ್ಲಿ 8, ಸುರಪುರ ತಾಲ್ಲೂಕಿನಲ್ಲಿ 27, ಹುಣಸಗಿ ತಾಲ್ಲೂಕಿನಲ್ಲಿ 9 ಜನ ಸೋಂಕಿತರು ಪತ್ತೆಯಾಗಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ 12 ಜನ, ಶಹಾಪುರ ತಾಲ್ಲೂಕಿನಲ್ಲಿ 8, ಸುರಪುರ ತಾಲ್ಲೂಕಿನಲ್ಲಿ 5ಜನ ಗುಣಮುಖರಾಗಿದ್ದಾರೆ. ಯಾದಗಿರಿ ತಾಲ್ಲೂಕಿನಲ್ಲಿ ಅತಿಹೆಚ್ಚು 1,240 ಜನರಿಗೆ ಕೋವಿಡ್‌ ದೃಢಪಟ್ಟಿದ್ದು, ಅದರಲ್ಲಿ 1,036 ಜನರು ಗುಣಮುಖರಾಗಿದ್ದಾರೆ. ನಂತರದ ಸ್ಥಾನದಲ್ಲಿ 658 ಶಹಾಪುರ ತಾಲ್ಲೂಕಿನವರು ಕೋವಿಡ್‌ ಸೋಂಕಿತರಾಗಿದ್ದಾರೆ. 421 ಜನರು ಗುಣಮುಖರಾಗಿದ್ದಾರೆ. ವಡಗೇರಾ ತಾಲ್ಲೂಕಿನಲ್ಲಿ 64 ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ 23 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ ಅಂಕಿ-ಅಂಶ
ಜಿಲ್ಲೆಯಲ್ಲಿ ಒಟ್ಟು; 2,970
ದಿನದ ಏರಿಕೆ;
200
ಗುಣಮುಖ; 25
ಸಕ್ರಿಯ; 866
ಸಾವು;16

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT