ಸೋಮವಾರ, ಅಕ್ಟೋಬರ್ 18, 2021
25 °C

ಅಧಿಕಾರ ಶಾಶ್ವತವಲ್ಲ, ಮಾಡುವ ಕೆಲಸ ಶಾಶ್ವತ: ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿದ್ದಾಗ ಮಾಡುವ ಕೆಲಸ ಕಾರ್ಯಗಳು ಶಾಶ್ವತವಾಗಿರುತ್ತದೆ. ಕಾರಣ ಜನಪ್ರತಿನಿಧಿಗಳು ನಿಮ್ಮ ನಗರದ ಮತ್ತು ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಆಗತೀರ್ಥದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ತಿಳಿಸಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ಪ್ರದೇಶ ಕುರುಬರ ಸಂಘ ಮತ್ತು ಯುವ ಘಟಕ ವತಿಯಿಂದ ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಕಠಿಣ ಪರಿಶ್ರಮದಿಂದ ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಉನ್ನತ ಸ್ಥಾನಕ್ಕೆ ಹೋಗಬಹುದು’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಮಾತನಾಡಿ, ‘ಕುರುಬ ಸಮಾಜ ಸಂಘಟಿತರಾಗಬೇಕು. ಇದರಿಂದ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುನ್ನಲೆಗೆ ಬರಲು ಸಾಧ್ಯ’ ಎಂದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಪಡೆದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಜನರಿಗೆ ಸನ್ಮಾನಿಸಲಾಯಿತು.

ತಿಂಥಣಿಯ ಕನಕ ಗುರುಪೀಠದ ಶ್ರೀಲಿಂಗ ಬೀರದೇವರು, ಬಂಡೆಪ್ಪನಹಳ್ಳಿಯ ನಿಂಗಯ್ಯ ಮುತ್ಯಾ, ಕಕ್ಕೇರಿಯ ನಂದಣ್ಣಪ್ಪ ಮುತ್ಯಾ, ಮಾಲಹಳ್ಳಿ ಕೆಂಚಪ್ಪ ಪೂಜಾರಿ ಸಾನಿಧ್ಯ ವಹಿಸಿದ್ದರು.

ಭೀಮರಾಯ ಮಾಲಿಪಾಟೀಲ, ಬೀರಲಿಂಗ ಮಗ್ಗದ, ಸಂಘದ ತಾಲ್ಲೂಕು ಘಟಕದ ಕಾಳಪ್ಪ ಕವಾತಿ, ವಿಶ್ವನಾಥ ನೀಲಹಳ್ಳಿ, ಸಿದ್ದನಗೌಡ ಕಾಡಮಗೇರಾ, ಮಲ್ಲು ದಂಡಿನ್, ಪರಶುರಾಮ ಚೌದ್ರಿ, ಹೊನ್ನಪ್ಪ ಮುಷ್ಟೂರ, ರಾಘವೇಂದ್ರ ಮಾಚಗುಂಡಾಳ, ಕೃಷ್ಣಾ ಹಾವಿನ, ಎಸ್.ಎಸ್.ರಾಮಪುರೆ, ನಿಂಗನಗೌಡ ಮಾಲಿಪಾಟೀಲ, ಶಿವರಾಯ ಕಾಡ್ಲೂರು, ಸಿದ್ರಾಮ ಎಲಿಗಾರ, ವಾಸು ಕವಡಿಮಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು