ಶಹಾಪುರ: ಡಾ.ಅಂಬೇಡ್ಕರ್ ಆದರ್ಶಗಳು ಯುವಕರಿಗೆ ದಿಕ್ಸೂಚಿಯಾಗಲಿ. ಅವರ ತತ್ವ ಆದರ್ಶಗಳನ್ನು ಸಾಹಿತ್ಯದ ಮೂಲಕ ತಿಳಿದು ಜಾಗೃತರಾಗಬೇಕು ಎಂದು ಸಹಕಾರ ಸಂಘಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ವಿಶ್ವನಾಥರಡ್ಡಿ ಪಾಟೀಲ ದರ್ಶನಾಪುರ ತಿಳಿಸಿದರು.

ನಗರದ ವೈಷ್ಣವಿ ಸಭಾಂಗಣದಲ್ಲಿ ಶನಿವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಸ್ವಾಭಿಮಾನಿ ಬಳಗದ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ದಲಿತಪರ ಚಿಂತಕ ತಿಮ್ಮಯ್ಯ ಪುರ್ಲೆ ಮಾತನಾಡಿ, ‘ಶೋಷಿತ ಸಮಾಜದ ಬದಲಾವಣೆ ಶಕ್ತಿ ಕುಂದುತ್ತಿದ್ದು, ಇಂದಿನ ದಿನದಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಬೇಕಾಗಿದೆ. ಅಂದಿನ ಕಾಲಘಟ್ಟದಲ್ಲಿ ಕವಿಗಳು ರಾಜಾಶ್ರಯದಲ್ಲಿದ್ದು, ವರ್ಣನೆಗೆ, ಹೊಗಳಿಕೆಗೆ ಮಾತ್ರ ಸಾಹಿತ್ಯ, ನೃತ್ಯ, ಸಂಗೀತಗಳು ಸೀಮಿತವಾಗಿದ್ದವು. ಇಂದು ದಲಿತ ಹೋರಾಟದ ಜ್ವಾಲೆ ಬಂಡಾಯ ಸಾಹಿತ್ಯದ ಮುಖಾಂತರ ಹೋರಾಟವು ನಡೆಯುತ್ತಿದೆ. ದಲಿತ ಚಳವಳಿಗೆ ಬಂಡಾಯ ಸಾಹಿತ್ಯದ ತಳಹದಿಯಾಗಿದೆ’ ಎಂದರು.

ಬೌದ್ಧಬಿಕ್ಕು ಭಂತೆ ಮೇತಪಾಲ್ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ದಲಿತಪರ ಚಿಂತಕರಾದ ಭೀಮಣ್ಣ ಮೇಟಿ, ಆರ್.ಚೆನ್ನಬಸ್ಸು ವನದುರ್ಗ, ಸಾಲೋಮನ್ ಅಲ್ಫ್ರೇಡ್, ಶ್ರೀಶೈಲ್ ಹೊಸಮನಿ, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ರಸ್ತಾಪುರ, ಗಾಳೆಪ್ಪ ಪೂಜಾರಿ, ರವೀಂದ್ರನಾಥ ಹೊಸಮನಿ, ಅಂಬ್ಲಯ್ಯ ಸೈದಾಪುರ, ದೇವಿಂದ್ರಪ್ಪ ಹಡಪದ, ಚಂದ್ರು ಜಾದವ, ಸಿ.ಎಸ್.ಭೀಮರಾಂ, ಮಹಾದೇವ ದಿಗ್ಗಿ, ಹೊನ್ನಪ್ಪ ಗಂಗನಾಳ, ಸಾಯಿಬಣ್ಣ ಪುರ್ಲೆ, ಮಹೇಂದ್ರ ದಿಗ್ಗಿ, ಡಾ.ಮರೆಪ್ಪ, ಪರಮೇಶ್ವರ, ರಂಗನಾಥ ಹುಲ್ಕಲ್, ಶ್ರೀಶೈಲ ಬಿರಾದಾರ, ವೀರೇಶ ಕೊಂಕಲ್, ಸೋಫಿಸಾಬ್, ಮರೆಪ್ಪ ಇನಾಮದಾರ, ಗೊಳ್ಳಾಳಪ್ಪ ಪೂಜಾರಿ ಭಾಗವಹಿಸಿದ್ದರು. 52ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.