ಸೋಮವಾರ, ಜೂನ್ 27, 2022
21 °C
ಕೋವಿಡ್‌ ಸಂಕಷ್ಟ ಕಾಲದಲ್ಲಿ ಆಮ್ಲಜನಕ ಮಹತ್ವ ಅರಿಯಲು ಸಲಹೆ

ವಿವಿಧೆಡೆ ಪರಿಸರ ದಿನ ಆಚರಣೆ; ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಾದ್ಯಂತ ಶನಿವಾರ ಪರಿಸರ ದಿನವನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು.

ಕೋವಿಡ್‌ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ತಿಳಿದುಕೊ ಳ್ಳುವಂತೆ ಆಗಿದೆ. ಪ್ರತಿಯೊಬ್ಬರು ಸಸಿ ನೆಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದು ಗಣ್ಯರು ಅಭಿಪ್ರಾಯ ಪಟ್ಟರು.

ಸಸಿ ನೆಡುವುದು ದೊಡ್ಡ ವಿಷಯವಲ್ಲ. ಅದನ್ನು ಉಳಿಸಿ, ಬೆಳೆಸಿ ಗಿಡ, ಮರವನ್ನಾಗಿ ಮಾಡಬೇಕು ಎಂದು ಗಣ್ಯರು ಸಲಹೆ ನೀಡಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರ ಹೊರವಲಯದ ಜಿಲ್ಲಾ ಕೋವಿಡ್ ಆಸ್ಪತ್ರೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಸ್ಥಾನಿಕ ವೈದ್ಯಾಧಿಕಾರಿ ಡಾ. ನೀಲಮ್ಮ ಎಸ್ ರೆಡ್ಡಿ, ಪ್ರಸಕ್ತ ದಿನಗಳಲ್ಲಿ ನಾವು ಪರಿಸರದ ಮಹತ್ವ ತಿಳಿದು, ಸಕಾಲಕ್ಕೆ ಉಳಿಸಿ, ಬೆಳೆಸುವುದು ಅವಶ್ಯಕವಾಗಿದೆ. ಜೊತೆಗೆ ನಿಸರ್ಗದೊಂದಿಗೆ ದೂರದೃಷ್ಟಿಯಿಂದ ಎಚ್ಚರಿಕೆಯಿಂದ ಹೊಂದಾಣಿಕೆಯಾಗಿ ಜೀವನ ಸಾಗಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಡಾ. ಶ್ರೀನಿವಾಸ ಪ್ರಸಾದ್, ಡಾ. ಸುನೀಲ ಪಾಟೀಲ್, ಪ್ರಸಾದ ಕುಲಕರ್ಣಿ, ಗೋವಿಂದ್‍ಮೂರ್ತಿ ಇದ್ದರು.

ಬಿಜೆಪಿ ಯುವ ಮೋರ್ಚಾ: ಗುರುಮಠಕಲ್‌ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಭೂಪಾಲರಡ್ಡಿ ಚಾಲನೆ ನೀಡಿದರು.

ಶರಣಭೂಪಾಲರಡ್ಡಿ ಮಾತನಾಡಿ, ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ಅತಿ ಅಗತ್ಯ. ಅದಕ್ಕಾಗಿ ನಾವು ಮರ ಗಿಡಗಳನ್ನು ಹೆಚ್ಚಾಗಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಹೆಚ್ಚುತ್ತಿರುವ ಭೂಮಿಯ ತಾಪಮಾನ ಕಡಿಮೆ ಮಾಡಲು ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿಯನ್ನು ಪಡೆಯಲು ಪ್ರತಿಯೊಬ್ಬರು ಸಸಿ ನೆಟ್ಟು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದರು.

ಜಿಲ್ಲಾ ಸಹ ವಕ್ತಾರರಾದ ವೀರಪ್ಪ ಪ್ಯಾಟಿ, ಬಸವರಾಜ ನೆಲೋಗಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಹೊನಿಗೇರಿ, ಮಂಡಲ ಪ್ರಧಾನ ಕಾರ್ಯದರ್ಶಿ ಜಗದೀಶ್ ಮೆಂಜಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಲ್ಲು ಕೋಲಿವಾಡ, ನರೇಶ್ ಗೊಂಗ್ಲೆ, ಪ್ರವೀಣ ಜೋಶಿ ಕಾಕಲವಾರ, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಮುಖ್ ಕತ್ತಲಪ್ಪ ನಾಯ್ಕೋಡಿ ಇದ್ದರು.

ಲಕ್ಷ್ಮಿ ದೇವಸ್ಥಾನ: ನಗರದ ಲಕ್ಷ್ಮಿ ದೇವಸ್ಥಾನ ಹತ್ತಿರ ಸಸಿ ನೆಡಲಾಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತೂಮಕೂರ ಮಾತನಾಡಿದರು.

ನಗರಸಭೆ ಸದಸ್ಯ ಹಣಮಂತ ಇಟಗಿ, ಶಂಕ್ರಪ್ಪಗೌಡ ಬೆಳಗುಂದಿ, ರಾಮಲಿಂಗಪ್ಪ ಮತ್ತು ಪ್ರಜ್ವಲ್ ಇದ್ದರು.

ಶ್ರೀಸಾಯಿ ಯೋಗ ಶಾಲೆ: ನಗರದ ವಾರ್ಡ್‌ ನಂ 30ರ ಚಿರಂಜೀವಿ ನಗರದ ಶ್ರೀಸಾಯಿ ಯೋಗ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಬಿಜೆಪಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಲಲಿತಾ ಅನಪುರ ಚಾಲನೆ ನೀಡಿದರು.

ಈ ವೇಳೆ ಸಂಗೀತಾ ಗೌಳಿ, ಅಶೋಕ ಗೌಳಿ, ನಾಗರಾಜ ನಾಯಕ, ಸಂಜಯ ಚಲುವಾದಿ, ಮಹಾರಾಜ ಕಾಲೇಜು ಪ್ರಾಚಾರ್ಯ ಅಶೋಕ ಜಾಧವ, ನರಸಪ್ಪ ಬೆಟ್ಟದ, ಪ್ರಭು ಗುತ್ತೇದಾರ, ರೂಪಾ ನಾಯಕ, ಕಾವ್ಯಾ, ಗಣೇಶ, ಕ್ರಿಷ್ಣಪ್ಪ, ಖಾಲಿದಾ ಬೇಗಂ ಇದ್ದರು.

‘ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ’

ವಡಗೇರಾ: ಅರಣ್ಯ ಸಂಪತ್ತು ಕಡಿಮೆಯಾಗುತ್ತಿರುವುದರಿಂದ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಪರಿಸರ ರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದೆ ಎಂದು ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ತಿಳಿಸಿದರು.

ತಾಲ್ಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಶನಿವಾರ ನಡೆದ ಕೋವಿಡ್ ಲಸಿಕೆ ಜಾಗೃತಿ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಸಿಕೆ ಹಾಕಿಸಿಕೊಳ್ಳುವುದರಿಂದ ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇಂಥ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬಾದು. ಎಲ್ಲರೂ ಧೈರ್ಯದಿಂದ ಲಸಿಕೆ ಪಡೆದುಕೊಳ್ಳಬೇಕು ಎಂದರು.

ಗುಂಡಗುರ್ತಿ ಮತ್ತು ಟಿ.ವಡಗೇರಾ ಗ್ರಾಮದಲ್ಲಿ ಮಾಸ್ಕ್ ವಿತರಣೆ ಮಾಡಿದರು. ನಂತರ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಚಂಡ್ರಿಕಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ ಮೂರ್ತಿ, ಎಪಿಎಂಸಿ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಸಾಹುಕಾರ್, ಸಿದ್ದಣ್ಣಗೌಡ ಕಾಡಂನೋರ್, ಪಿಎಸ್‍ಐ ಸಿದ್ದರಾಯ ಬಳೂರ್ಗಿ, ಪಿಡಿಒ ಸ್ಮಿತಾ, ಡಾ.ಮರಿಯಪ್ಪ ನಾಟೆಕಾರ್, ಪರಶುರಾಮ ಕುರಕುಂದಿ ಮತ್ತು ಪ್ರಮುಖರು ಇದ್ದರು.

 ***

‘ವನಸಂಪತ್ತು ಹೆಚ್ಚಿಸಲು ಶ್ರಮ ವಹಿಸಿ’

ಕೊಡೇಕಲ್ಲ(ಹುಣಸಗಿ): ಲಭ್ಯವಿರುವ ಸ್ಥಳದಲ್ಲಿ ಪ್ರತಿಯೊಬ್ಬರೂ ಮರಗಿಡಗಳನ್ನು ನೆಟ್ಟು ಪೋಷಿಸು ವುದರಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಸಾಧ್ಯ ಎಂದು ಶಾಸಕ ರಾಜೂಗೌಡ ತಿಳಿಸಿದರು.

ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ನಿವಾಸದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಅವರು ಮಾತನಾಡಿದರು.

ವನಸಂಪತ್ತನ್ನು ಹೆಚ್ಚಿಸಿದಾಗ ಸ್ವಚ್ಛ ಗಾಳಿ, ನೀರು ಹಾಗೂ ಆಹ್ಲಾದಕರ ವಾತಾವರಣ ಸಿಗಲು ಸಾಧ್ಯ. ಇಂದು ಅನೇಕ ರೋಗಗಳು ಹುಟ್ಟಿಕೊಳ್ಳಲು ವಾತಾವರಣದ ವೈಪರಿತ್ಯವೇ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಒಂದು ಸಸಿ ನೆಟ್ಟು ಅದನ್ನು 3 ವರ್ಷಗಳ ಕಾಲ ಪೋಷಣೆ ಮಾಡಿದರೇ ಮುಂದಿನ ಪೀಳಿಗೆಗೆ ನೆಮ್ಮದಿಯ ದಿನಗಳು ಬರಲಿವೆ ಎಂದರು.

ನೀಲಕಂಠಸ್ವಾಮಿ ವಿರಕ್ತಮಠ, ಡಾ.ಬಿ.ಎಂ.ಹಳ್ಳಿಕೋಟೆ, ರಂಗನಾಥ ದೊರೆ, ತಾ.ಪಂ ಮಾಜಿ ಸದಸ್ಯ ಮೋಹನ ಪಾಟೀಲ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಮೇಲಪ್ಪ ಗುಳಗಿ, ದೇವು ಗೋಪಾಳೆ, ಪಿಎಸ್ಐ ಬಾಶುಮೀಯ ಕೊಂಚೂರು, ಬಸವರಾಜ ಭದ್ರಗೋಳ, ಬಸವಂತಭಟ್ ಜೋಷಿ, ಬಿ.ಎಂ.ಅಂಗಡಿ, ಸದಾಶಿವ ನಾಶಿ, ವೀರೇಶ ಮುತ್ತಗಿ ಇದ್ದರು.

ವಜ್ಜಲ: ಗ್ರಾಮ ಪಂಚಾಯಿತಿ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಗ್ರಾಪಂ ಸದಸ್ಯ ಸಣ್ಣ ಅಪ್ಪುಗೌಡ ಪಾಟೀಲ, ಕಾರ್ಯದರ್ಶಿ ಬಸವರಾಜ ರಾಮದುರ್ಗ, ಸದಸ್ಯರಾದ ಮಲ್ಲಣ್ಣ ನಾಗರಾಳ, ನಿಂಗಣ್ಣ, ಮಲಿಕಾರ್ಜುನ ದೊಡ್ಡಮನಿ, ಭೀಮಣ್ಣ ದೊರಿ, ಮಲ್ಲಿಕಾರ್ಜುನ ಗೌಂಡಿ, ಬಸವರಾಜ ಮೇಟಿ ಇದ್ದರು.

ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಚಾರ್ಯ ಅಶೋಕ ರಾಜನಕೋಳೂರ ಸಸಿ ನೆಟ್ಟು ಆಚರಿಸಿದರು. ಪಟ್ಟಣದಲ್ಲಿ ಗೆಳೆಯರ ಬಳಗದ ವತಿಯಿಂದ ಶಾಲಾ ಆವರಣ, ರಸ್ತೆ ಬದಿ ಸಸಿ ನೆಡಲಾಯಿತು.

***

ಕಳೆದ ವರ್ಷ ಲಾಕ್‌ಡೌನ್‌ ವೇಳೆ ಜಿಲ್ಲೆಯಲ್ಲಿ ಶುದ್ಧ ಆಮ್ಲಜನಕ ಪ್ರಮಾಣ ಹೆಚ್ಚಿರುವ ಕುರಿತು ಸುದ್ದಿಯಾಗಿತ್ತು. ಅದನ್ನು ಉಳಿಸಲು ಮರಗಿಡಗಳನ್ನು ಬೆಳೆಸುವ ಕಾರ್ಯ ಮಾಡಬೇಕಿದೆ

- ಡಾ.ಶರಣಭೂಪಾಲರೆಡ್ಡಿ ನಾಯ್ಕಲ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು