ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಮಳೆಗೆ ಜನಜೀವನ ಅಸ್ತವ್ಯಸ್ತ

ಕೊಚ್ಚಿ ಹೋದ ಭತ್ತದ ಗದ್ದೆ, ಟೊಮೆಟೊ ತೋಟ ಹಾಳು
Last Updated 15 ಜುಲೈ 2020, 17:14 IST
ಅಕ್ಷರ ಗಾತ್ರ

ಯಾದಗಿರಿ:ಬುಧವಾರ ಮಧ್ಯಾಹ್ನ 12 ಗಂಟೆಯಿಂದ ಸತತ 4 ಗಂಟೆ ಕಾಲ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ತಗ್ಗು ಪ್ರದೇಶದ ಹೊಲ, ಗದ್ದೆ ತೋಟಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.

ನಗರ ಪ್ರದೇಶದಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನಿವಾಸಿಗಳು ಸಮಸ್ಯೆ ಅನುಭವಿಸಿದರು. ತಾಲ್ಲೂಕು ಪ್ರದೇಶದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆರೆಗಳಿಗೆ ನೀರು ಹರಿದು ಬಂದಿವೆ.

ವ್ಯಾಪಾರಿಗಳಿಗೆ ನಷ್ಟ: ಬುಧವಾರ ರಾತ್ರಿ 8 ಗಂಟೆಯಿಂದಲಾಕ್‌ಡೌನ್‌ ಜಾರಿಗೆ ತರಲಾಗಿದ್ದರಿಂದ ವ್ಯಾಪಾರ ಚೆನ್ನಾಗಿ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಮಳೆಯಿಂದ ವ್ಯಾಪಾರಿಗಳಿಗೆ ಸಮಸ್ಯೆ ಉಂಟಾಯಿತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಳ್ಳಿಗಳಿಂದ ಸಾರ್ವಜನಿಕರು ಅವಶ್ಯಕ ವಸ್ತುಗಳನ್ನು ಖರೀದಿಸಲು ಪಟ್ಟಣಕ್ಕೆ ಬಂದಿದ್ದರು.

ಅಂಬೇಡ್ಕರ್ ನಗರದ ತಗ್ಗು ಪ್ರದೇಶದಲ್ಲಿನ 8 ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನಿವಾಸಿಗಳು ತೊಂದರೆ ಪಡುವಂತೆ ಆಗಿತ್ತು.ಚಿತ್ತಾಪುರ ರಸ್ತೆ, ಸ್ಟೇಷನ್ ರಸ್ತೆ, ಗಾಂಧಿ ವೃತ್ತದ ಬಳಿ ಜಲಾವೃತವಾಗಿದ್ದು, ವ್ಯಾಪಾರಿಗಳ ಅಂಗಡಿಗಳಲ್ಲಿ ನೀರು ನುಗ್ಗಿ ಹಾನಿಯಾಗಿದೆ. ರಸ್ತೆಯಲ್ಲಿ ಮೊಣಕಾಲು ಉದ್ದದ ನೀರಿನಲ್ಲಿಯೇ ಹರಸಾಹಸಪಟ್ಟು ವಾಹನ ಸವಾರರು ತೆರಳಿದರು.

ಇನ್ನುಳಿದಂತೆ ಜಿಲ್ಲೆಯ ಶಹಾಪುರ, ಸುರಪುರ, ಕೆಂಭಾವಿ, ಸೈದಾಪುರ, ಗುರುಮಠಕಲ್‌ ಸೇರೆದಂತೆ ವಿವಿಧೆಡೆಯೂ ಮಳೆಯಾಗಿದೆ.

ಹೆಸರು ಬೆಳೆಗೆ ರೋಗ ಬಾಧೆ: ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಸತತ ಮಳೆಯಿಂದ ಹೆಸರು ಬೆಳೆಗೆ ರೋಗ ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೆಚ್ಚಿನ ತೇವಾಂಶ ಇದ್ದರೆ ಬೆಳೆ ಕೊಳೆತು ಹೋಗಿ ಫಸಲು ಕೈಗೆ ಬರದಂತೆ ಆಗುತ್ತದೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ನಿಂತು ಬೆಳೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಟೊಮೆಟೊ ಬೆಳೆಗೆ ಹಾನಿ: ಗುರುಮಠಕಲ್‌ ತಾಲ್ಲೂಕಿನ ಗೋಪಾಳಪುರ ಗ್ರಾಮದ ಟೊಮೆಟೊತೋಟ ಮಳೆಯಿಂದಾಗಿ ಜಲಾವೃತ್ತವಾಗಿದ್ದು, ರೈತರು ಚಿಂತಾಕ್ರಾಂತರಾಗಿದ್ದಾರೆ. ಟೊಮೆಟೊ ಬೆಳೆಗಾರ ಮೊಗುಲಪ್ಪ ತಮ್ಮ 2 ಎಕರೆಯಲ್ಲಿ ಟೊಮೆಟೊ ತೋಟ ಮಾಡಿದ್ದರು. ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಇನ್ನೂ ಒಂದು ತಿಂಗಳು ಕಳೆದರೆ ಫಸಲು ಕೈಗೆ ಬರುತ್ತಿತ್ತು. ಆದರೆ, ಸತತ ಮಳೆಯಿಂದ ನಷ್ಟವುಂಟಾಗಿದೆ ಎಂದು ನೋವು ತೋಡಿಕೊಂಡರು.

ನೀರಾವರಿ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಚುರುಕುಕೊಂಡಿವೆ. ಹುಣಸಗಿ, ಶಹಾಪುರ, ಸುರಪುರದಲ್ಲಿ ಭತ್ತ ನಾಟಿ ಮಾಡಲು ಸಿದ್ಧತೆ ನಡೆದಿದೆ. ಉತ್ತಮ ಮಳೆಯಿಂದ ರೈತರು ಹರ್ಷಗೊಂಡಿದ್ದಾರೆ.

ಅಂಗನವಾಡಿಗೆ ನುಗ್ಗಿದ ನೀರು:

ತಾಲ್ಲೂಕಿನ ಮುದ್ನಾಳ ದೊಡ್ಡ ತಾಂಡಾ ಅಂಗನವಾಡಿ ಕೇಂದ್ರ ಸಂಪೂರ್ಣ ಜಲಾವೃತ್ತವಾಗಿದ್ದು, ಕೇಂದ್ರದೊಳಗಿದ್ದ ಅಡುಗೆ ಸಮಾನುಗಳು, ದವಸ ಧಾನ್ಯಗಳು ನೀರು ಪಾಲಾಗಿವೆ.ಕಳೆದ ವರ್ಷ ಪ್ರಾಥಮಿಕ ಶಾಲೆಗೆ ಹೊಸ ಕಟ್ಟಡ ನಿರ್ಮಾಣಗೊಂಡಿದ್ದರಿಂದ ಅದನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಿ ಹಳೆ ಶಾಲೆಯ ಕಟ್ಟಡವನ್ನು ಅಂಗನವಾಡಿಗೆ ಹಸ್ತಾಂತರಿಸಲಾಗಿತ್ತು.

ಯಾದಗಿರಿ ಸಮೀಪದ ಪಗಲಾಪುರ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಲಿ ಕೆಲಸಕ್ಕೆ ತೆರಳಿದ್ದ ಮಹಿಳೆಯರು ಗುಂಪಾಗಿ ಹಳ್ಳದಾಟುವಾಗ ಮಹಿಳೆ ನೀರಿನಲ್ಲಿಕೊಚ್ಚಿಕೊಂಡು ಹೋಗಿದ್ದರು.ಆಗ ಸ್ಥಳೀಯರು ಮಹಿಳೆಯನ್ನು ಕಾಪಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT