ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನದ ಕೊಡುಗೆ ಅನನ್ಯ’

Last Updated 8 ಡಿಸೆಂಬರ್ 2019, 3:12 IST
ಅಕ್ಷರ ಗಾತ್ರ

ಯಾದಗಿರಿ: ‘ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನ ನೀಡಿದ ಕೊಡುಗೆ ಅನನ್ಯವಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಅವರು ಜಾತ್ಯತೀತ ಮನೋಭಾವದವರಾಗಿದ್ದರು’ ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮು ನಾಯಕ ಹೇಳಿದರು.

ನಗರದ ಕರವೇ ಕಚೇರಿಯಲ್ಲಿ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್ ನಮ್ಮನ್ನು ಸಮಾನತೆಯ ದೃಷ್ಠಿಯಲ್ಲಿ ಬದುಕಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಎಲ್ಲರೂ ಸಮಾನರೆಂದು ಜೀವಿಸೋಣ’ ಎಂದರು.

ಈ ವೇಳೆ ಹತ್ತಿಕುಣಿ ಗ್ರಾಮದ ವಿವಿಧ ಸಂಘಟನೆಯ 40ಕ್ಕೂ ಹೆಚ್ಚು ಯುವಕರು ಕರವೇ ಸಂಘಟನೆಗೆ ಸೇರ್ಪಡೆಯಾದರು.

ಸಿದ್ದು ನಾಯಕ, ಮಲ್ಲು ಮಾಳಿಕೇರಿ, ವಿಶ್ವರಾಧ್ಯ ದಿಮ್ಮೆ, ಸಾಹೇಬಗೌಡ ನಾಯಕ, ರಿಯಾಜ್ ಪಟೇಲ್, ದೀಪಕ್ ಒಡೆಯರ್, ಮಲ್ಲು ದೇವಕರ್, ಸಿದ್ದಪ್ಪ ಕ್ಯಾಸಪನಳ್ಳಿ, ಮಲ್ಲು ಹಾಲಗೇರಾ, ಭೀಮು ಬಸವಂತಪುರ, ನಾಗು ತಾಂಡೂರಕರ್, ಭೀಮು ಕೂಯಿಲೂರ, ನಾಗಪ್ಪ ಗೋಪಾಳಪುರ ಹಾಗೂ ವಿಜಯ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT