ಮೈಲಾರನ ಬೆಟ್ಟದಲ್ಲಿ ಯುಗಾದಿ ಸಂಭ್ರಮದ

ಶನಿವಾರ, ಏಪ್ರಿಲ್ 20, 2019
29 °C
ಅಮಾವಾಸ್ಯೆ ಅಂಗವಾಗಿ ಹೊನ್ನಕೆರೆಯಲ್ಲಿ ಮಿಂದು ಪೂಜೆ ಸಲ್ಲಿಸಿ ಹರಕೆ ತೀರಿಸಿದ ಭಕ್ತರು

ಮೈಲಾರನ ಬೆಟ್ಟದಲ್ಲಿ ಯುಗಾದಿ ಸಂಭ್ರಮದ

Published:
Updated:
Prajavani

ಯಾದಗಿರಿ: ಇಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೈಲಾಪುರದಲ್ಲಿ ಶುಕ್ರವಾರ ಯುಗಾದಿ ಅಮಾವಾಸ್ಯೆ ಅಂಗವಾಗಿ ಸಾವಿರಾರು ಭಕ್ತರು ಬೆಟ್ಟ ಏರಿ ಮೈಲಾರಲಿಂಗ ದೇವರ ದರ್ಶನ ಪಡೆದು ಪುನೀತರಾದರು.

ಪ್ರತಿ ತಿಂಗಳ ಅಮಾವಾಸ್ಯೆ ಮೈಲಾರಲಿಂಗನ ಬೆಟ್ಟದಲ್ಲಿ ವಿಶೇಷ ಪೂಜೆ ಜರುಗುತ್ತದೆ. ಆದರೆ, ಹೊಸವರ್ಷದ ಮೊದಲ ಅಮಾವಾಸ್ಯೆ ಪೂಜೆ ಶ್ರೇಷ್ಠ ಎಂಬುದು ಭಕ್ತರ ನಂಬಿಕೆಯಾಗಿದೆ. ಯುಗಾಗಿ ಅಮಾವಾಸ್ಯೆ ದಿನದಂದು ದೇವರ ದರ್ಶನ ಪಡೆದರೆ ಇಡೀ ವರ್ಷ ಬದುಕಿನಲ್ಲಿ ಸಮಸ್ಯೆ, ಸವಾಲು, ಸಂಕಷ್ಟಗಳು ಸುಳಿಯುವುದಿಲ್ಲ ಎನ್ನುವ ನಂಬಿಕೆಯಿಂದ ವರ್ಷದ ಪ್ರಥಮ ಅಮಾವಾಸ್ಯೆ ಇಲ್ಲಿ ಪ್ರಾಮುಖ್ಯತೆ ಪಡೆದಿದೆ. ಈ ಕಾರಣಕ್ಕಾಗಿಯೇ ಶುಕ್ರವಾರ ಮೈಲಾಪುರದಲ್ಲಿ ಜಾತ್ರಾ ಸಂಭ್ರಮ ಕಂಡುಬಂತು.

ಮೈಲಾರಲಿಂಗನ ಬೆಟ್ಟದ ಬುಡದಿಂದ ನೆತ್ತಿಯ ಗರ್ಭಗುಡಿಯವರೆಗೂ ಭಕ್ತರು ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಈ ಸಲ ಬೆಟ್ಟದ ಮೇಲಿನ ದೇಗುಲದ ಆವರಣ ಹಾಗೂ ಮೆಟ್ಟಿಲುಗಳ ಮೇಲೆ ನೆರಳಿನ ವ್ಯವಸ್ಥೆ ಕಲ್ಪಿಸಿದ್ದರಿಂದ ಬಿಸಿಲಿನ ಬೇಗೆ ಭಕ್ತರಿಗೆ ತಟ್ಟಲಿಲ್ಲ.

ತುಂಗಿ ಮಾಳಮ್ಮ ಹಾಗೂ ಗಂಗಿ ಮಾಳಮ್ಮ ದೇಗುಲಗಳಿಗೂ ಭೇಟಿ ನೀಡುತ್ತಿದ್ದ ಭಕ್ತರು ಹರಕೆ, ಪೂಜೆ ಸಲ್ಲಿಸಿದರು. ಕೆಲವು ಭಕ್ತರು ವೈಯಕ್ತಿಕವಾಗಿ ದೇಗುಲದಲ್ಲಿ ಅನ್ನದಾಸೋಹ ಏರ್ಪಡಿಸಿದ್ದರು. ಹೊನ್ನಕೆರೆಯಲ್ಲಿ ಮಿಂದುಬಂದ ಭಕ್ತರು ದೇಗುಲದ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

‘ಈ ಬಾರಿ ಯುಗಾದಿ ಅಮಾವಾಸ್ಯೆಯಲ್ಲಿ ಬಿಸಿಲಿನ ಧಗೆ ಹೆಚ್ಚಿದೆ. ಮಳೆ ಕೊರತೆ ಕಾರಣ ಕೆರೆಯಲ್ಲೂ ನೀರಿನ ಸಂಗ್ರಹ ಇಲ್ಲ. ಕೊಳವೆ ಬಾವಿಗಳಲ್ಲೂ ನೀರಿನ ಒರತೆ ಕಡಿಮೆಯಾಗುತ್ತಿದೆ. ಆದರೆಮ ಗರ್ಭಗುಡಿಯ ಬಳಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ದೇಗುಲದ ಪ್ರಧಾನ ಅರ್ಚಕ ಬಸವರಾಜಪ್ಪ ಪೂಜಾರಿ ಪ್ರಜಾವಾಣಿ ಗೆ ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !