ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತಿಯಿಂದ ಸಾಮಾಜಿಕ ಜವಾಬ್ದಾರಿ ನಿರ್ವಹಣೆ’

Published 16 ಜನವರಿ 2024, 15:41 IST
Last Updated 16 ಜನವರಿ 2024, 15:41 IST
ಅಕ್ಷರ ಗಾತ್ರ

ಹುಣಸಗಿ: ಸಾಹಿತಿ ಎಂದಿಗೂ ಒಂದೇ ವಿಷಯಕ್ಕೆ ಮಾತ್ರ ಸೀಮಿತವಾಗದೇ ತನ್ನ ಸುತ್ತಮುತ್ತಲಿನ ಎಲ್ಲ ವಿಷಯವನ್ನು ಗಮನಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯಾಗಿ ಕಾರ್ಯ ನಿರ್ವಹಿಸುತ್ತಾನೆ ಎಂದು ಸಾಹಿತಿ ಯಂಕನಗೌಡ ಅರಕೇರಿ ಹೇಳಿದರು.

ಹುಣಸಗಿ ಪಟ್ಟಣದ ಹೊರವಲಯದ ಖೊಜ್ಜಾಪುರ ಸಮುದಾಯ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಹುಣಸಗಿ ತಾಲ್ಲೂಕು ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಹಿತ್ಯ ಎಂಬುದು ಚಲನಶೀಲವಾಗಿದ್ದು, ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸಮಾಜದಲ್ಲಿನ ನಾಡಿ ಮಿಡಿತವನ್ನು ತನ್ನದೇ ಭಾಷೆ ಹಾಗೂ ಭಾವನೆಯ ಮೂಲಕ ವ್ಯಕ್ತವಾಗುತ್ತದೆ. ಅದು ಆ ಕಾಲಮಾನದ ಸಮನ್ವಯತೆಯನ್ನು ಸೂಚಿಸುತ್ತಾ ಇರುತ್ತದೆ ಎಂದರು.

ಸಾನಿಧ್ಯ ವಹಿಸಿದ್ದ ಬಲಶೆಟ್ಟಿಹಾಳ ಗ್ರಾಮದ ಬಸಲಿಂಗ ಮಠದ ಸಿದ್ದಲಿಂಗ ಶಾಸ್ತ್ರಿ ಮಾತನಾಡಿ, ಇಂದು ಸಮಾಜದ ಪ್ರಗತಿಯ ಹಾಗೂ ದೂರದೃಷ್ಟಿಯ ಸಾಹಿತ್ಯ ರಚನೆಯಾಗಬೇಕಿದೆ. ಈ ನಿಟ್ಟಿನಲ್ಲಿ ಈ ಭಾಗದ ಸಾಹಿತಿಗಳು ಸಕ್ರಿಯರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ ಸಂಘದ ರಾಜ್ಯಪ್ರಮುಖ ರಾಘವೇಂದ್ರ ಕಾಮನಟಗಿ ಮಾತನಾಡಿ,  ಸಗರ ನಾಡಿನಲ್ಲಿ ಅನೇಕ ಹಿರಿಯ ಸಾಹಿತಿಗಳು ಹಾಗೂ ಶರಣರು ಆಗಿ ಹೋಗಿದ್ದಾರೆ. ಆದರೆ ಅವರ ಕೊಡುಗೆ ನಮ್ಮ ಯುವ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಅಖಿಲ ಭಾರತ ಸಾಹಿತ್ಯ ಪರಿಷದ್ ಮಾಡಲಿದೆ ಎಂದು ಹೇಳಿದರು.

ಪ್ರಾಂತ ಸಹ ಕಾರ್ಯದರ್ಶಿ ಶಿವಶರಣಪ್ಪ ಗೊಡ್ರಾಳ ಮಾತನಾಡಿದರು.

ತಾಲ್ಲೂಕು ಪದಾಧಿಕಾರಿಗಳನ್ನು ಘೋಷಣೆ ಮಾಡಲಾಯಿತು. ಯಂಕನಗೌಡ ಅರಕೇರಿ, (ಅಧ್ಯಕ್ಷ) ನಿಂಗಣ್ಣ ಯಣ್ಣಿವಡಗೇರಿ (ಕಾರ್ಯದರ್ಶಿ), ಶ್ರೀನಿವಾಸ ಶ್ರೇಷ್ಠಿ (ಖಜಾಂಚಿ)  ಆಗಿ ಘೋಷಿಸಲಾಯಿತು.

ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಮೋನಪ್ಪ ಶಿರವಾಳ ವಹಿಸಿದ್ದರು.

ಕವಿಗಳಾದ ನಿಂಗನಗೌಡ ದೇಸಾಯಿ, ವೀರಣ್ಣ ಕಲಕೇರಿ, ಶಿವಲೀಲಾ ಹಾದಿಮನಿ, ಶಿವಕುಮಾರ ಬಂಡೋಳಿ, ವಿದ್ಯಾಧರ ಬಡಿಗೇರ, ಬಸಣ್ಣ ಗೊಡ್ರಿ ಸೇರಿ ಇತರರು ತಮ್ಮ ಸ್ವರಚಿತ ಕವನಗಳನ್ನು ವಾಚನ ಮಾಡಿದರು.

ಹಿರಿಯರಾದ ಬಸವರಾಜಸ್ವಾಮಿ ಸ್ಥಾವರಮಠ, ವೀರಬದ್ರಗೌಡ ಹೊಸಮನಿ, ಬಸವರಾಜ ಮೇಲಿಮನಿ, ನಾಗನಗೌಡ ಪಾಟೀಲ, ಪಾಟೀಲ ಬಸನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT