ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಪುರ: ₹5.40 ಲಕ್ಷ ಮೌಲ್ಯದ ಗಾಂಜಾ ವಶ

Last Updated 18 ಡಿಸೆಂಬರ್ 2019, 19:42 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ವಿವಿಧೆಡೆ ಬುಧವಾರ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ₹5.40 ಲಕ್ಷ ಮೌಲ್ಯದ ಗಾಂಜಾ ಬೆಳೆ ವಶಕ್ಕೆ ಪಡೆಯಲಾಗಿದೆ.

ತಾಲ್ಲೂಕಿನ ಹದನೂರ– ಯಾಳಗಿ ಮಾರ್ಗ ಮಧ್ಯೆ ಹೊಲದಲ್ಲಿ ಬೆಳೆದಿದ್ದ 33 ಗಾಂಜಾ ಗಿಡಗಳನ್ನು (50 ಕೆ.ಜಿ) ಮತ್ತು ಇನ್ನೊಂದೆಡೆ ಜಮೀನಿನಲ್ಲಿ ಬೆಳೆದಿದ್ದ 20 ಗಾಂಜಾ ಗಿಡಗಳನ್ನು (40 ಕೆ.ಜಿ) ಜಪ್ತಿ ಮಾಡಲಾಗಿದೆ.

ಸುರಪುರ ಅಬಕಾರಿ ನಿರೀಕ್ಷಕ ಶ್ರೀಶೈಲ್ ಒಡೆಯರ್, ಅಬಕಾರಿ ಉಪ ಆಯುಕ್ತರ ಕಚೇರಿಯ ಕೇದರನಾಥ್ ಎಸ್.ಟಿ. ಅವರು ಎರಡು ಕಡೆಗಳಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಪತ್ತೆಗೆ ಜಾಲ ಬೀಸಲಾಗಿದೆ. ಅಬಕಾರಿ ನಿರೀಕ್ಷಕರಾದ ಪ್ರಕಾಶ ಮಾಕೊಂಡ, ಉಪ ನಿರೀಕ್ಷಕರಾದ ಶಬ್ಬೀರ್ ಬಿರಾದಾರ್, ಸೋಮಪ್ಪ ನಾಯಕ, ಪೂಜಾ ಖರ್ಗೆ, ಅಬಕಾರಿ ರಕ್ಷಕರಾದ ಜಂಬುನಾಥ ಪುಜಾರಿ, ಲಕ್ಷ್ಮಣ, ಮಹೇಂದ್ರ, ಸಂದೀಪನಾಯಕ, ಲಾಲಸಾಹೇಬ, ಯಮನಪ್ಪ, ಸಂಪತ ಕುಮಾರ, ಪ್ರವೀಣಕುಮಾರ, ಮೊಹ್ಮದ್ ರಫಿ, ವಾಹನ ಚಾಲಕರಾದ ಮರೆಪ್ಪ ತೇಲ್ಕರ್, ಗೋಪಾಲ ದೇವಿಕೇರಿ ದಾಳಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT