ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಸೊಪ್ಪು, ಬಹುತೇಕ ತರಕಾರಿ ದರ ಸ್ಥಿರ

ಆವಕ ಕುಸಿತ: ಹಸಿಮೆಣಸಿನಕಾಯಿ, ದೊಣ್ಣೆಮೆಣಸಿನಕಾಯಿಗೆ ಬೇಡಿಕೆ, ಬೆಲೆ ಏರಿಕೆ
Last Updated 17 ಏಪ್ರಿಲ್ 2022, 6:08 IST
ಅಕ್ಷರ ಗಾತ್ರ

ಯಾದಗಿರಿ: ನಗರದ ವಿವಿಧ ತರಕಾರಿ ಮಾರುಕಟ್ಟೆಗಳಲ್ಲಿ ಬಹುತೇಕ ತರಕಾರಿಗಳ ಬೆಲೆ ಕಡಿಮೆ ಇದ್ದರೂ ಹಸಿ ಮೆಣಸಿಕಾಯಿ ಮತ್ತು ದೊಣ್ಣೆ ಮೆಣಸಿನಕಾಯಿ ಬೆಲೆ ಮಾತ್ರ ಹೆಚ್ಚಿದೆ.

ಬೇಸಿಗೆ ಇರುವ ಕಾರಣ ಈ ಎರಡು ತರಕಾರಿಗಳ ಬೆಲೆ ಮಾತ್ರ ಜಾಸ್ತಿ ಇದೆ. ಉಳಿದಂತೆ ಎಲ್ಲ ತರಕಾರಿಗಳ ಬೆಲೆ ₹60ರೊಳಗೆ ಇದೆ.

ಪ್ರತಿವರ್ಷವೂ ಹಸಿ ಮೆಣಸಿನಕಾಯಿ ದರ ಏರಿಕೆಯಾಗುತ್ತಿದೆ. ತಿಂಗಳ ಹಿಂದೆ ಒಂದು ಕೆಜಿ ಮೆಣಸಿಕಾಯಿ ಬೆಲೆ ₹100ಕ್ಕೆ ಏರಿಕೆಯಾಗಿತ್ತು. ಈಗ ದರ ಇಳಿಕೆಯಾಗಿದೆ. ಆದರೆ, ಎಲ್ಲ ತರಕಾರಿಗಳಿಗಿಂತಲೂ ಅಧಿಕ ದರ ಇದೆ.

ನಗರಕ್ಕೆ ಶಹಾಪುರ ತಾಲ್ಲೂಕಿನಿಂದ ಮೆಣಸಿನಕಾಯಿ ಪೂರೈಕೆಯಾಗುತ್ತಿದೆ. ಕಾಲುವೆ ಜಾಲದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ಆದ್ದರಿಂದ ಬೇಸಿಗೆಯಲ್ಲಿ ಕಾಲುವೆ ನೀರು ಕಡಿಮೆಯಾದರೆ ದರ ಹೆಚ್ಚಳವಾಗುವುದು ಸಾಮಾನ್ಯವಾಗಿ ಬಿಟ್ಟಿದೆ.

ಕಳೆದ ವರ್ಷದ ಅತಿವೃಷ್ಟಿ ಕಾರಣ ಮೆಣನಕಾಯಿ ಬಿಳಿ ಬಣಕ್ಕೆ ತಿರುಗಿದೆ. ಇದು ಕೂಡ ದರ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ದೊಣ್ಣೆಮೆಣಸಿನಕಾಯಿ ಬೆಲೆ ಒಂದು ಕೆಜಿಗೆ ₹50–60, ಹಸಿಮೆಣಸಿನಕಾಯಿ ₹60ರಿಂದ 70, ಹಸಿ ಶುಂಠಿ ₹50 ರಿಂದ 60 ಇದೆ. ಬೆಳ್ಳುಳ್ಳಿ ₹100, ಕರಿಬೇವು ₹80, ಹೂಕೋಸು ₹40–50, ಬೀನ್ಸ್ ₹50–60, ಗಜ್ಜರಿ ₹50-60, ಹೀರೆಕಾಯಿ ಕೆಜಿಗೆ ₹50-60 ಇದೆ.

ಇವು ಹೆಚ್ಚು ದರ ಇರುವ ತರಕಾರಿಗಳಾಗಿವೆ. ಉಳಿದ ತರಕಾರಿಗಳಿಗೆ ಹೆಚ್ಚಿನ ದರವಿಲ್ಲ.

ಸೊಪ್ಪುಗಳ ದರ: ಸೊಪ್ಪು ಅಗ್ಗವಾಗಿದ್ದು, ಎಲ್ಲ ವಿದಧ ಸೊಪ್ಪುಗಳು ₹5ಕ್ಕೆ ಒಂದು ಕಟ್ಟು ಸಿಗುತ್ತಿದೆ.

ಸ್ಥಳೀಯವಾಗಿ ಸೊಪ್ಪುಗಳ ಆವಕವಾಗುತ್ತಿದೆ. ದೊಡ್ಡ ಗಾತ್ರಕ್ಕೆ ಮಾತ್ರ ₹10 ದರವಿದೆ.

ಮೆಂತ್ಯೆ ಸೊಪ್ಪು ₹10ಕ್ಕೆ ಒಂದು ಕಟ್ಟು ಸಿಗುತ್ತಿದೆ. ಪಾಲಕ್‌ ಸೊಪ್ಪು ₹5ಕ್ಕೆ ಒಂದು ಕಟ್ಟು, ಪುಂಡಿಪಲ್ಯೆ ₹20ಕ್ಕೆ 5 ಕಟ್ಟು, ರಾಜಗಿರಿ ಸೊಪ್ಪು ₹20ಕ್ಕೆ 5 ಕಟ್ಟು, ಸಬ್ಬಸಿಗಿ (ಚಿಕ್ಕ ಗಾತ್ರ) ₹5, ದೊಡ್ಡ ಗಾತ್ರ ₹10 ಒಂದು ಇದೆ. ಕೊತಂಬರಿ ಮತ್ತು ಪುದೀನಾ ಸೊಪ್ಪು ಒಂದು ಕಟ್ಟಿಗೆ ₹10ರಿಂದ ₹15 ದರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT