ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಕೇರಾ: ಭಕ್ತ ಸಾಗರದ ಅದ್ದೂರಿ ಮೌನೇಶ್ವರ ರಥೋತ್ಸವ

Published 23 ಫೆಬ್ರುವರಿ 2024, 16:30 IST
Last Updated 23 ಫೆಬ್ರುವರಿ 2024, 16:30 IST
ಅಕ್ಷರ ಗಾತ್ರ

ಕಕ್ಕೇರಾ: ಹಿಂದೂ–ಮುಸ್ಲಿಂ ಭಾವೈಕ್ಯದ ತಿಂಥಣಿಯ ಮೌನೇಶ್ವರ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಜಯಘೋಷಗಳ ಹಾಗೂ ವಾದ್ಯಮೇಳಗಳ ಮಧ್ಯೆ ಅದ್ದೂರಿಯಾಗಿ ನೆರವೇರಿತು.

ಎಕ್‌ ಲಾಕ್ ಐಸಿ ಹಜಾರ್ ಪಾಚೋಪೀರ್‌ ಪೈಗಂಬರ್, ಜೀತ್‌ ಪೈಗಂಬರ್ ಮೌನೋದ್ದೀನ್, ಕಾಶೀಪತಿ ಗಂಗಾಧರ ಹರಹರ ಮಹಾದೇವ...ಎಂಬ ಮಂತ್ರಘೋಷಗಳು ಮೊಳಗಿದವು.

ಭಾವೈಕ್ಯದ ಸಂಕೇತ ಸಾರುವ ಕೇಸರಿ ಮತ್ತು ಹಸಿರು ಸಂಕೇತದ ಧ್ವಜಗಳನ್ನು ಹೊತ್ತ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ತೂರಿ ಭಕ್ತಿಯ ಪರಾಕಾಷ್ಠೆ ಮೆರೆದರು. ಬೆಟ್ಟ-ಗುಡ್ಡಗಳ ಮೇಲೆ ನಿಂತು ದೂರದಿಂದಲೇ ರಥೋತ್ಸವವನ್ನು ಕಣ್ಣು ತುಂಬಿಕೊಂಡ ಭಕ್ತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ರಥವು ಸುಗಮವಾಗಿ ಪಾದಗಟ್ಟಿ ತಲುಪಿ ಸ್ವಸ್ಥಳಕ್ಕೆ ಬಂದು ತಲುಪಿತು. ರಥೋತ್ಸವ ನಂತರ ಸಂಜೆ ಪಲ್ಲಕ್ಕಿ ಮಹಾಸೇವೆ ವಿಜೃಂಭಣೆಯಿಂದ ಜರುಗಿತು.

ಸುರಪುರ ಅರಸು ಸಂಸ್ಥಾನದ ಕೃಷ್ಣಪ್ಪನಾಯಕ, ದೇವಸ್ಥಾನದ ಮೌನೇಶ್ವರ ಸ್ವಾಮೀಜಿ, ತಹಶೀಲ್ದಾರ್‌ ಕೆ. ವಿಜಯಕುಮಾರ್‌, ಉಪತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ, ತಿಂಥಣಿ ಗ್ರಾ.ಪಂ.ಅಧ್ಯಕ್ಷ ಹಣಮಂತ ದೊಡ್ಮನಿ, ಭೀಮಣ್ಣ ಹವಾಲ್ದಾರ್, ಚಿನ್ನಪ್ಪ ಗುಡಗುಂಟಿ, ಭೈರಣ್ಣ ಅಂಬಿಗೇರ, ಬಸವರಾಜ ದೊಡ್ಮನಿ, ಮಾನಯ್ಯಗೌಡ ದಳಪತಿ, ಭೀಮಣ್ಣ ಕವಲ್ದಾರ್, ದೇವಿಂದ್ರಪ್ಪ ಅಂಬಿಗೇರ, ತಿಪ್ಪಣ್ಣ ಕುರ್ಲಿ, ಸಂಜೀವನಾಯಕ ಕವಲ್ದಾರ, ಗಂಗಾಧರನಾಯಕ, ದೇವಿಂದ್ರಪ್ಪ, ಮೌನೇಶ ಬೋವಿ, ಫಕ್ರುದ್ಧೀನ್, ಪ್ರವೀಣಕುಮಾರ, ಬಸವರಾಜ ಶೆಟ್ಟಿ, ಅಲ್ಲಾಭಕ್ಷ, ಮದನಸಾಬ ಸೇರಿ ದೇವಾಲಯದ ಮೇಲ್ವಿಚಾರಕ ಹಾಜರಿದ್ದರು. ದೇವಸ್ಥಾನ ಸಮಿತಿ ಸದಸ್ಯರು, ಗ್ರಾಪಂ ಸದಸ್ಯರು, ಗ್ರಾಮದ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ಜಿಲ್ಲಾ ವರಿಷ್ಠಾಧಿಕಾರಿ ಸಂಗೀತಾ, ಡಿವೈಎಸ್ಪಿ ಜಾವೀದ್ ಇನಾಂದಾರ್ ನೇತೃತ್ವದಲ್ಲಿ ಪೊಲೀಸ್‌ ಬಿಗಿಬಂದೋಬಸ್ತ್‌ ಕಲ್ಪಿಸಲಾಗಿತ್ತು. ನದಿತೀರ ಹಾಗೂ ದೇವಸ್ಥಾನದ ಹೊರ ಮತ್ತು ಒಳಗೆ ಸೇರಿದಂತೆ ಪ್ರಮುಖ ಆಯಾಕಟ್ಟಿನ ಸ್ಥಳಗಳಲ್ಲಿ 16 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಗುರುವಾರ ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಗೂ ಕಕ್ಕೇರಾ ಪಟ್ಟಣದ ಸೋಮನಾಥ ಸಂಗೀತ ಪಾಠಶಾಲೆ ವತಿಯಿಂದ ಸಂಗೀತ ಕಾರ್ಯಕ್ರಮ ಜರುಗಿದವು.

ಇಂದು ಧೂಳಗಾಯಿ, ಗುಹಾಪ್ರವೇಶ: ಶನಿವಾರ (ಫೆ.24) ಬೆಳಿಗ್ಗೆಯಿಂದ ಸಂಜೆವರೆಗೆ ಭಕ್ತರಿಂದ ಧೂಳಗಾಯಿ ಸಮರ್ಪಣೆ ನಡೆಯಲಿದೆ. ನಂತರ ಸಂಜೆ ಮೌನೇಶ್ವರರು ಗುಹಾಪ್ರವೇಶಗೊಳ್ಳುವ ಮೂಲಕ ಜಾತ್ರೆ ಸಂಪನ್ನವಾಗಲಿದೆ.

ಧೂಳಗಾಯಿ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರು ತಂಡೋಪತಂಡವಾಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಕ್ಕೇರಾ ಸಮೀಪದ ತಿಂಥಣಿಯಲ್ಲಿ ಶುಕ್ರವಾರ ಮೌನೇಶ್ವರ ರಥೋತ್ಸವವು ಭಕ್ತರ ಜಯಘೋಷಗಳ ಮಧ್ಯೆ  ವಿಜೃಂಭಣೆಯಿಂದ ಜರುಗಿತು
ಕಕ್ಕೇರಾ ಸಮೀಪದ ತಿಂಥಣಿಯಲ್ಲಿ ಶುಕ್ರವಾರ ಮೌನೇಶ್ವರ ರಥೋತ್ಸವವು ಭಕ್ತರ ಜಯಘೋಷಗಳ ಮಧ್ಯೆ  ವಿಜೃಂಭಣೆಯಿಂದ ಜರುಗಿತು
23ಕೆಕೆಆರ್01: ತಿಂಥಣಿಯಲ್ಲಿ ಮೌನೇಶ್ವರ ರಥವು ಭಕ್ತರ ಜಯಘೋಷಗಳ ಮದ್ಯೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
23ಕೆಕೆಆರ್01: ತಿಂಥಣಿಯಲ್ಲಿ ಮೌನೇಶ್ವರ ರಥವು ಭಕ್ತರ ಜಯಘೋಷಗಳ ಮದ್ಯೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಕುಡಿಯುವ ನೀರಿಗೆ ಪರದಾಟ
ಕೃಷ್ಣಾ ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದ ಹಿನ್ನೆಲೆಯಲ್ಲಿ ಮೌನೇಶ್ವರ ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಕುಡಿಯುವ ನೀರಿಗೆ ಕೊರತೆ ಉಂಟಾಗಿ ಪರಿತಪಿಸುವಂತಾಯಿತು. ಜಿಲ್ಲಾ ಆಡಳಿತವು ಭಕ್ತರಿಗೆ ಟ್ಯಾಂಕರ್‌ಗಳ ಮೂಲಕ ಸಮರ್ಪಕ ಕುಡಿಯವ ನೀರಿನ ವ್ಯವಸ್ಥೆ ನೀರಿನ ಮಾಡಬೇಕಿತ್ತು ಎಂದು ಭಕ್ತರು ಬೇಸರ ವ್ಯಕ್ತಪಡಿಸಿದರು. ಸಂಚಾರ ದಟ್ಟಣೆ: ರಥೋತ್ಸವದ ಮುಗಿದ ಬಳಿಕ ಸುರಪುರ ರಸ್ತೆ ಮತ್ತು ಶಾಂತಪುರ ರಸ್ತೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಮುಂದುವರಿದ ಅಕ್ರಮ ಮದ್ಯ ಮಾರಾಟ: ಜಾತ್ರೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಮೊದಲ ದಿನ ತಹಶೀಲ್ದಾರ್‌ ಕೆ.ವಿಜಯಕುಮಾರ್‌ ನೇತೃತ್ವದಲ್ಲಿ ಕಡಿವಾಣ ಹಾಕಲಾಗಿತ್ತು. ಆದರೂ ಶುಕ್ರವಾರ ಎಂದಿನಂತೆ ರಾಜಾರೋಷವಾಗಿ ಮದ್ಯ ಮಾರಾಟ ಕಂಡು ಬಂದಿತು. ‘ಅಕ್ರಮ ಮದ್ಯ ಮಾರಾಟ ತಡೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರೂ ಅಬಕಾರಿ ಇಲಾಖೆ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಭೈರಣ್ಣ ಅಂಬಿಗರ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT