ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ನೆರವಿಗೆ ಸರ್ಕಾರ ಸದಾ ಬದ್ಧ’

ಜಾನುವಾರಗಳ ಮಾಲೀಕರಿಗೆ ಪರಿಹಾರ ಚೆಕ್ ವಿತರಣೆ
Last Updated 25 ಮೇ 2022, 4:00 IST
ಅಕ್ಷರ ಗಾತ್ರ

ಸುರಪುರ: ಸಿಡಿಲು ಬಡಿದು ಅಸುನೀಗಿದ ಜಾನುವಾರುಗಳ ಮಾಲೀಕರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಶಾಸಕ ರಾಜೂಗೌಡ ಸೋಮವಾರ ಪರಿಹಾರದ ಚೆಕ್ ವಿತರಿಸಿದರು.

ಈಚೆಗೆ ಸುರಿದ ಅಕಾಲಿಕ ಮಳೆಯಲ್ಲಿ ಸಿಡಿಲು ಬಡಿದು ಕಕ್ಕೇರಾ ಗ್ರಾಮದಲ್ಲಿ 2 ಎತ್ತುಗಳು, ಶೆಳ್ಳಗಿ ಗ್ರಾಮದಲ್ಲಿ 1 ಹಸು, ಮತ್ತು ಗುಡಿಹಾಳ ಜೆ.ಗ್ರಾಮದಲ್ಲಿ 4 ಕುರಿಗಳು ಅಸುನೀಗಿದ್ದವು.

ಎತ್ತುಗಳ ಮಾಲೀಕ ಭೀಮಣ್ಣ ನಿಂಗಪ್ಪ ಕಕ್ಕೇರಾ ಅವರಿಗೆ ₹50 ಸಾವಿರ, ಹಸುವಿನ ಮಾಲೀಕ ನಾಗಪ್ಪ ಸೋಮನಿಂಗಪ್ಪ ಅವರಿಗೆ ₹30 ಸಾವಿರ ಮತ್ತು ಕುರಿಗಳ ಮಾಲೀಕ ನಿಂಗಪ್ಪ ಗುಡಿಹಾಳ ಅವರಿಗೆ ₹12 ಸಾವಿರ ಪರಿಹಾರ ಚೆಕ್ ನೀಡಿದರು.

ರಾಜೂಗೌಡ ಮಾತನಾಡಿ, ‘ನಮೆಲ್ಲರಿಗೂ ಅನ್ನ ನೀಡುವ ರೈತ ದೇಶದ ಬೆನ್ನೆಲುಬು. ಜಾನುವಾರು ಆತನ ಸಂಗಾತಿ. ಘಟನೆಯಲ್ಲಿ ಎತ್ತುಗಳು ಅಸುನೀಗಿರುವುದು ದುರ್ದೈವ. ಜಾನುವಾರು ಕಳೆದುಕೊಂಡ ರೈತರಿಗೆ ಪುನಃ ಬದುಕು ಕಟ್ಟಿಕೊಳ್ಳಲು ಸರ್ಕಾರ ಪರಿಹಾರ ನೀಡುತ್ತದೆ’ ಎಂದರು.

‘ಸಿಡಿಲು, ಮಳೆ, ಗಾಳಿ, ಪ್ರವಾಹ ಅವಘಡಗಳಿಗೆ ಸಿಲುಕಿ ಜಾನುವಾರುಗಳು ಮೃತಪಟ್ಟಲ್ಲಿ ರೈತರು ಚಿಂತಿಸುವ ಅಗತ್ಯವಿಲ್ಲ. ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ತಕ್ಷಣವೇ ಪರಿಹಾರ ನೀಡಲು ಪಶು ಸಂಗೋಪನಾ ಸಚಿವಾಲಯ ಆದೇಶಿಸಿದೆ. ಅಧಿಕಾರಿಗಳು ಸಕಾಲಕ್ಕೆ ಸಂಪರ್ಕಕ್ಕೆ ಸಿಗದಿದ್ದಲ್ಲಿ ರೈತರು ಮೊ: 8277100200 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ. ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ದೊರಕಿಸುವ ಕೆಲಸ ಮಾಡುತ್ತಾರೆ’ ಎಂದರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ, ಗ್ರಾಮ ಲೇಖಕ ದುಶ್ಯಂತ, ಮುಖಂಡರಾದ ಭೀಮಣ್ಣ ಬೇವಿನಾಳ, ದೇವರಾಜ ಮಕಾಶಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT