ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ | ಜೋಡು ಪಲ್ಲಕ್ಕಿ, ಗಂಗಾಸ್ನಾನಕ್ಕೆ ಅವಕಾಶ ಕೊಡಿ; ಶಾಸಕ ಮನವಿ

Last Updated 11 ಜನವರಿ 2022, 7:20 IST
ಅಕ್ಷರ ಗಾತ್ರ

ಶಹಾಪುರ: ಸಂಕ್ರಾಂತಿ ಹಬ್ಬದ ಅಂಗವಾಗಿ ನಡೆಯುವ ಬಲಭೀಮೇಶ್ವರ ಹಾಗೂ ಸಂಗಮೇಶ್ವರ ದೇವರುಗಳ ಜೋಡು ಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆಯನ್ನು ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಪಡಿಸಿದೆ. ಆದರೆ ಭಕ್ತರ ಮನದಾಸೆಯಂತೆ ಜೋಡು ಪಲ್ಲಕ್ಕಿ ಗಂಗಾಸ್ನಾನಕ್ಕೆ ಅವಕಾಶ ನೀಡಿ ಎಂದು ಜನತೆಯ ಪರವಾಗಿ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಸಂಕ್ರಾಂತಿ ಹಬ್ಬದ ಜೋಡು ಪಲ್ಲಕ್ಕಿ ಉತ್ಸವ ರದ್ದುಗೊಳಿಸಿದ್ದಾರೆ. ಕೊನೆ ಪಕ್ಷ ಗಂಗಾಸ್ನಾನಕ್ಕೆ ಅವಕಾಶ ನೀಡಬೇಕು ಎಂದು ಸೋಮವಾರ ಭಕ್ತರ ಸಮೂಹ ಶಾಸಕರನ್ನು ಭೇಟಿಯಾಗಿ ಮನವಿ ಮಾಡಿದಾಗ ಅವರು ಸಕರಾತ್ಮಕವಾಗಿ ಸ್ಪಂದಿಸಿ ಅವರು ಮಾತನಾಡಿದರು.

ಕೋವಿಡ್ ಹಾಗೂ ಓಮೈಕ್ರಾನ್ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿರುವುದು ಸಾರ್ವಜನಿಕ ಹಿತದೃಷ್ಟಿಯಿಂದ ಆಗಿದೆ. ನಾವೆಲ್ಲರೂ ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಪಾಲಿಸಬೇಕು. ಇಂತವ ವಿಷಮ ವಾತಾವರಣದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಕೋವಿಡ್ ನಿಯಂತ್ರಿಸಬಹುದಾಗಿದೆ ಎಂದರು.

ದಿಗ್ಗಿ ಸಂಗಮೇಶ್ವರ ದೇವಸ್ಥಾನದ ಅರ್ಚಕ ದೇವಯ್ಯ ಸ್ವಾಮಿ, ಸಣ್ಣನಿಂಗಣ್ಣ ನಾಯ್ಕೋಡಿ, ಮಹಾದೇವಪ್ಪ ಸಾಲಿಮನಿ, ನಾಗಪ್ಪ ತಹಶೀಲ್ದಾರ್, ಮಲ್ಲೇಶಿ ಮಂದಾಪುರ, ದೇವರಾಜ್ ಗುತ್ತಿಪೇಠ, ಹೆಡಗಿಮದ್ರಿ, ಮರೆಪ್ಪ ದೊಡ್ಮನಿ, ಹಣಮಂತ ಹೈಯಾಳಕರ್, ಬಸವರಾಜ ನಾಯ್ಕಲ್, ವಿಜಯಕುಮಾರ ಎದುರುಮನಿ, ಕಾಶಪ್ಪ ಬೋನೆರ, ಮಹಾದೇವಪ್ಪಗೌಡ ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT