ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ: ಮುಂಗಾರು ಬಿತ್ತನೆ ಚುರುಕು

Last Updated 8 ಜೂನ್ 2021, 14:26 IST
ಅಕ್ಷರ ಗಾತ್ರ

ಯರಗೋಳ: ಮುಂಗಾರು ಮಳೆಯು ನಿಗದಿತ ಅವಧಿಯ ಮೊದಲೆ ಆಗಮಿಸಿರುವುದರಿಂದ ಹತ್ತಿಕುಣಿ ಹೋಬಳಿಯ ವ್ಯಾಪ್ತಿಯ ಗ್ರಾಮಗಳಲ್ಲಿ ರೈತರು ಉತ್ಸಹದಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದ ಸಾಲಿನಲ್ಲಿ ಅತಿವೃಷ್ಟಿ ಪರಿಣಾಮ, ಹೆಸರು, ತೊಗರಿ, ಹತ್ತಿ ಬೆಳೆಗಳು ಕೊಳೆತು ಭೂಮಿಯ ಪಾಲಾಗಿ, ಭತ್ತ ನೆಲ ಕಚ್ಚಿತ್ತು. ರೈತರು ಕಣ್ಣೀರು ಸುರಿಸುವಂತಾಗಿತ್ತು.

ಈ ವರ್ಷ ಮಿರಗ (ಮೃಗಶಿರ) ಮಳೆಗಿಂತ ಮೊದಲೆ ಮಳೆ ಸುರಿದ ಪರಿಣಾಮ, ಹಲವು ಹಳ್ಳಿಗಳಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಇನ್ನು ಕೆಲವು ಹಳ್ಳಿಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ಹತ್ತಿಕುಣಿ, ಯರಗೋಳ ಸರ್ಕಾರಿ ಕೃಷಿ ಕೇಂದ್ರಗಳಲ್ಲಿ ಇಲ್ಲಿಯವರೆಗೆ 30 ಕ್ವಿಂಟಲ್ ಹೆಸರು ಬಿತ್ತನೆ ಬೀಜ ಮಾರಾಟವಾಗಿದೆ ಎಂದು 'ಪ್ರಜಾವಾಣಿ' ಗೆ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.

ಕಂಚಗಾರಳ್ಳಿ, ಮಲಕಪ್ಪನಳ್ಳಿ, ಅಲ್ಲಿಪುರ, ವಡ್ನಳ್ಳಿ, ಕ್ಯಾಸಪ್ಪನಳ್ಳಿ, ಬಸವಂತಪುರ, ಖಾನಳ್ಳಿ, ಹೆಡಗಿಮದ್ರ, ಅಬ್ಬೆತುಮಕೂರು, ಮುದ್ನಾಳ, ಯಡ್ಡಳ್ಳಿ, ಬಂದಳ್ಳಿ, ಚಾಮನಳ್ಳಿ, ಹೊನಗೇರಾ, ಬೆಳಗೇರಾ, ಮೋಟ್ನಳ್ಳಿ, ಹೊಸಳ್ಳಿ, ಕೋಟಗೇರಾ ಗ್ರಾಮದಲ್ಲಿ ಬಿತ್ತನೆ ಮುಂದುವರೆದಿದೆ.

ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿಯಂತೆ, ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ 2 ಸಾವಿರ ಎಕರೆ ಬಿತ್ತನೆಯಾಗಿದ್ದು, ಒಟ್ಟು 6 ಸಾವಿರ ಎಕರೆ ಬಿತ್ತನೆಯ ಗುರಿ ಇದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೀಜಗಳು ಬಿತ್ತನೆ ಮಾಡಿದ್ದಾರೆ ಎಂದರು.

ರಾಜ್ಯ ಸರ್ಕಾರ ಕೋವಿಡ್ ನಿಯಮಾವಳಿಗಳಲ್ಲಿ ಕೃಷಿ ಚಟುವಟಿಕೆಗೆ ಸಡಿಲಿಕೆ ನೀಡಿರುವುದರಿಂದ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜಗಳ ಖರೀದಿಗೆ, ಇನ್ನಿತರ ಕೃಷಿ ಸಂಬಂಧಿಸಿದ ಚಟುವಟಿಕೆಗೆ ತೊಂದರೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT