ಸೋಮವಾರ, ಜನವರಿ 18, 2021
23 °C

ಟಾಸ್‌ನಲ್ಲಿ ಸೋತು ಗೆದ್ದ ನಾಗಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ತಾಲ್ಲೂಕಿನ ಕಕ್ಕಸಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲ್ದಾಳ ಗ್ರಾಮದಲ್ಲಿ ಇಬ್ಬರು ಅಭ್ಯರ್ಥಿಗಳು ಸಮಮತ ಪಡೆದು ಚೀಟಿ ಎತ್ತುವುದಕ್ಕೆ ನಿರ್ಣ ಯಿಸಿದ್ದರು. ಆದರೆ, ಚೀಟಿ ಮೊದಲು ಯಾರು ಎತ್ತಬೇಕು ಎನ್ನುವುದಕ್ಕೂ ಟಾಸ್‌ ಮಾಡುವ ಅನಿವಾರ್ಯತೆ ಎದುರಾದ ಘಟನೆ ಬುಧವಾರ ಮತ ಎಣಿಕೆಯಲ್ಲಿ ನಡೆಯಿತು.

ಆಲ್ದಾಳ ಗ್ರಾಮದ ವಾರ್ಡ್ ಸಂಖ್ಯೆ 2ರಲ್ಲಿ ನಾಗಪ್ಪ 489 ಮತ ಹಾಗೂ ರಂಗಪ್ಪ 489 ಮತಗಳನ್ನು ಪಡೆದು ಸಮಬಲ ಸಾಧಿಸಿದರು. ಅಭ್ಯರ್ಥಿ ಆಯ್ಕೆಯ ಕಗ್ಗಂಟು ಮುಂದುವರೆದಾಗ ಚೀಟಿ ಎತ್ತುವುದಕ್ಕೆ ಇಬ್ಬರು ಸದಸ್ಯರು ಸಹಮತ ವ್ಯಕ್ತಪಡಿಸಿದರು. ಆಗ ಮತ್ತೊಂದು ತೊಡುಕು ಎದುರಾಯಿತು. ಮೊದಲು ಚೀಟಿ ಯಾರು ಎತ್ತಬೇಕು ಎಂಬ ಪ್ರಶ್ನೆ ಉದ್ಭವಿಸಿತು. ಆಗ ಟಾಸ್‌ ಮಾಡಲು ಮುಂದಾದರು. ರಂಗಪ್ಪ ಟಾಸ್‌ ಪಡೆಯುವಲ್ಲಿ ಯಶಸ್ವಿಯಾದರು. ಆದರೆ, ಚೀಟಿ ಎತ್ತಿದಾಗ ಅವರ ಅದೃಷ್ಟ ಕೈಕೊಟ್ಟಿತು. ನಾಗಪ್ಪ ಗೆಲುವಿನ ನಗೆ ಬೀರಿದರು. ಚುನಾವಣೆ ಅಧಿಕಾರಿ ನಾಗಪ್ಪ ಗೆಲುವು ಸಾಧಸಿದ್ದಾರೆ ಎಂದು ಫಲಿತಾಂಶ ಪ್ರಕಟಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು