ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೂ ಸಾಧಾರಣ ಮಳೆಯಾಗಿದೆ.
ಸೋಮವಾರ ತುಂತುರು ಮಳೆಯಾಗಿದ್ದು, ತಡರಾತ್ರಿಯಿಂದ ಸಾಧಾರಣ ಮಳೆ ಸುರಿದಿದೆ.
ಮಲಕೆಯಿಂದ ನಗರದ ರಸ್ತೆಗಳು ಗುಂಡಿ ಬಿದ್ದು ನೀರು ನಿಂತಿವೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.
ಹುಣಸಗಿ ತಾಲ್ಲೂಕಿನ ನಾರಾಯಣಪುರದಲ್ಲಿ ಉತ್ತಮ ಮಳೆಯಾಗಿದೆ.
ಭೀಮಾ ನದಿಗೂ ನೀರು
ಭೀಮಾ ಜಲಾನಯನದಲ್ಲಿ ಉತ್ತಮ ಮಳೆಯಾಗಿದ್ದು, ಭೀಮಾ ನದಿಯ ಒಳಹರಿವು ಹೆಚ್ಚಿದೆ.
ಚಿತ್ತಾಪುರ ತಾಲ್ಲೂಕಿನ ಸನ್ನತಿ ಬ್ರಿಜ್ ಕಂ ಬ್ಯಾರೇಜ್ ನಿಂದ ಭೀಮಾ ನದಿಗೆ 7 ಸಾವಿರ ಒಳಹರಿವಿದ್ದರೆ, ಅಷ್ಟೆ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಜಲಾಶಯದ ಮಟ್ಟ
ನಾರಾಯಣಪುರ ಜಲಾಶಯದ ಮಟ್ಟ (ಜುಲೈ 25)
ಜಲಾಶಯ; ಗರಿಷ್ಠ ಮಟ್ಟ; ಮಂಗಳವಾರದ ಮಟ್ಟ; ಒಳಹರಿವು (ಕ್ಯುಸೆಕ್‌ಗಳಲ್ಲಿ); ಹೊರಹರಿವು
ನಾರಾಯಣಪುರ; 492.25 ಮೀ; 487.82 ಮೀ; 13,681 ;00
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.