ಶನಿವಾರ, ಜುಲೈ 31, 2021
28 °C
ಹೆಸರು ಬೆಳೆಗೆ ಆಸರೆಯಾದ ತುಂತುರು ಮಳೆ

ಯಾದಗಿರಿ ಜಿಲ್ಲೆಯಲ್ಲಿ ಸಾಧಾರಣ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ನಗರದಲ್ಲಿ ಸಂಜೆ ವೇಳೆ ಸಾಧಾರಣ ಸುರಿಯಿತು. ಜಿಲ್ಲೆಯ ವಿವಿಧೆಡೆ ತುಂತುರು ಮಳೆಯಾಗಿದೆ.  

ವಡಗೇರಾ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಹುಣಸಗಿಯಲ್ಲಿ 15 ನಿಮಿಷ ಸಾಧಾರಣ ಮಳೆಯಾಗಿದೆ. ಯರಗೋಳ ಗ್ರಾಮದಲ್ಲಿ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಸಂಜೆ ವೇಳೆಗೆ  ತುಂತುರು ಮಳೆ ಸುರಿದಿದೆ. ಕೆಂಭಾವಿ, ಕಕ್ಕೇರಾದಲ್ಲಿಯೂ ಸಾಧಾರಣ ಮಳೆಯಾಗಿದೆ. 

ಸುರಪುರದಲ್ಲಿ ಮಧ್ಯಾಹ್ನ  ಮಳೆ ಸಾಧಾರಣ ಮಳೆಯಾಗಿದ್ದು, ಗುರುಮಠಕಲ್‌ನಲ್ಲಿ ಅಲ್ಪ ಮಳೆ ಸುರಿದಿದೆ. ಸೈದಾಪುರದಲ್ಲಿ ತುಂತುರು ಮಳೆಯಾಗಿದೆ. ಶಹಾಪುರದಲ್ಲಿ ಬೆಳಿಗ್ಗೆ ತುಂತುರು ಮಳೆಯಾಗಿದೆ. 

ಗ್ರಾ.ಪಂ. ವಾರು ಮಾಹಿತಿ: ಶಿರವಾಳ 4 ಮಿ.ಮೀ, ಮೂಡಬೂಳ 2, ಠಾಣಗುಂಡಿ 2, ಅರಕೇರಾ (ಬಿ) 4, ಗಾಜರಕೋಟ 10, ಹೋತಪೇಟ 4, ಕಂದಕೂರ 2, ಚಪೇಟ್ಲಾ 8, ಕಾಕಲವಾರ 8, ಚಂಡರಕಿ 12, ಇಬ್ರಾಹಿಂಪುರ 14, ಆಣಬಿ 1, ಮದ್ರಕಿ 6, ಉಕ್ಕಿನಾಳ 7, ಮಲ್ಲಾ (ಬಿ) 2, ಹುರಸಗುಂಡಗಿ 10 ಮಿ.ಮೀ ಮಳೆಯಾಗಿದೆ. 

ಕಳೆದ ವಾರದ ಹಿಂದೆ ಬಿತ್ತಿದ ಹೆಸರು ಬೆಳೆಗೆ ಮಳೆ ಅವಶ್ಯವಿತ್ತು. ಈಗ ಅಲ್ಲಲ್ಲಿ ತುಂತುರು ಮಳೆಯಾಗಿದ್ದು, ಮೊಳಕೆ ಬರಲು ಆಸರೆಯಾದಂತೆ ಆಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಆರಂಭವಾಗಿದ್ದು, ಉದ್ದು, ಹತ್ತಿ ಬಿತ್ತನೆಗೆ ಸಿದ್ಧತೆ ನಡೆದಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.