ಮಂಗಳವಾರ, ಜನವರಿ 25, 2022
25 °C

ಸಾಮಾಜಿಕ ಬದುಕಿನ ಬಗ್ಗೆ ಅರಿವು ಮೂಡಿಸುವ ಎನ್‌ಎಸ್‌ಎಸ್: ಶಿಕ್ಷಕ ಭೀಮರಾಯ ಚಟ್ನಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಂಥಣಿ (ಸುರಪುರ): ‘ರಾಷ್ಟೀಯ ಸೇವಾ ಯೋಜನೆಯು ಪ್ರತಿಯೊಬ್ಬ ಶಿಬಿರಾರ್ಥಿಗೆ ಸಾಮಾಜಿಕ ಬದುಕಿನ ಬಗ್ಗೆ ಅರಿವನ್ನು ಮೂಡಿಸುತ್ತದೆ. ಎಲ್ಲರೂ ಕೇವಲ ಪದವೀಧರರಾಗಿ ಹೊರಬರುವುದಕ್ಕಿಂತ ಅರಿವುದಾರರಾಗಿ ಹೊರಬರುವಂತೆ ಮಾಡುತ್ತದೆ’ ಎಂದು ತಿಂಥಣಿಯ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಭೀಮರಾಯ ಚಟ್ನಳ್ಳಿ ಹೇಳಿದರು.

ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಸಂಜುಕುಮಾರ ನಾಯಕ ಮಾತನಾಡಿ, ‘ಇಂದಿನ ಯುವ ಪೀಳಿಗೆ ದೇಶಕ್ಕೆ ಮಾರಕವಾಗದೆ ದೇಶದ ಭದ್ರ ಬುನಾದಿಗೆ ಅಮೂಲ್ಯವಾದ ಸೇವೆಯನ್ನು ಸಲ್ಲಿಸುವ ಅವಶ್ಯಕತೆ ಇದೆ. ಇದರ ಆಶಯವನ್ನು ರಾಷ್ಟ್ರೀಯ ಸೇವಾ ಯೋಜನೆ ಸಾಕಾರಗೊಳಿಸುತ್ತದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯತ ಸದಸ್ಯ ಬೈರಣ್ಣ ಅಂಬಿಗೇರ, ಡಾ. ಮಲ್ಲಿಕಾರ್ಜುನ ಕಮತಗಿ, ಕಾರ್ಯಕ್ರಮ ಅಧಿಕಾರಿ ಡಾ. ಆದಿಶೇಷ ನೀಲಗಾರ, ಬೀರೇಶ ಕೊಡೇಸೂರ ಇದ್ದರು. ಪ್ರಾಂಶುಪಾಲರಾದ ಬಸವರಾಜೇಶ್ವರಿ ಘಂಟಿ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕರಾದ ಸುವರ್ಣ ಅಂಟೋಳಿ, ವೆಂಕಟೇಶ ಜಾಲಗಾರ, ತಿರುಪತಿ ಕೆಂಭಾವಿ, ಅಂಬ್ರೇಶ ಚಿಲ್ಲಾಳ, ಮಹೇಶಕುಮಾರ ಗಂಜಿ, ಚಂದ್ರಶೇಖರ ನಾಯಕ, ನಬಿಸಾಬ್, ಮರೆಮ್ಮ ಕಟ್ಟಿಮನಿ, ಶ್ರೀದೇವಿ ನಾಯಕ, ಶೃತಿ, ಹುಲಗಮ್ಮ ಭಾಗವಹಿಸಿದ್ದರು.

ಶ್ರೀದೇವಿ ಮತ್ತು ಸೈಜಾದಬಿ ನಿರೂಪಿಸಿದರು. ಪ್ರಿಯಾಂಕ ಸ್ವಾಗತಿಸಿದರು. ಸುಪ್ರಿಯಾ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.