ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿನ ಭಾವನೆ ಹೊರ ಹಾಕಲು ಚಿತ್ರಕಲೆ ಸಹಕಾರಿ: ಶಂಕರಗೌಡ ಸೋಮನಾಳ

Last Updated 24 ನವೆಂಬರ್ 2020, 16:44 IST
ಅಕ್ಷರ ಗಾತ್ರ

ಯಾದಗಿರಿ: ಚಿತ್ರಕಲೆಯ ಮೂಲಕ ಮನಸ್ಸಿನ ಭಾವನೆ, ಸಮಾಜದ ಕಟ್ಟುಪಾಡುಗಳನ್ನು ಬಿಂಬಿಸಲು ಸಾಧ್ಯವಿದೆ ಎಂದು ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಅಭಿಪ್ರಾಯಪಟ್ಟರು.

ನಗರದ ಬಾಲಾಜಿ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈಚೆಗೆ ನಡೆದ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಪುಟಪಾಕ್ ಗ್ರಾಮದ ಚಿತ್ರಕಲಾವಿದ ನರಸಿಂಹಲು ಪಿ.ಬ್ಯಾಗೇರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿಯೂ ಪ್ರತಿಭಾವಂತರು ಎಲೆ ಮರೆಯಕಾಯಿಯಂತೆ ಇರುತ್ತಾರೆ. ಅವರಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಸರ್ಕಾರ ಚಿತ್ರಕಲಾವಿದರಿಗೆ ನೆರವು ನೀಡುವ ಮೂಲಕ ಇಂಥ ಕಾರ್ಯಕ್ರಮಗಳನ್ನು ನಡೆಸಲು ಸಹಕಾರ ನೀಡುತ್ತಿದೆ ಎಂದರು.

ನ್ಯೂ ಕನ್ನಡ ಪದವಿಪೂರ್ವ ಕಾಲೇಜು ಪ್ರಾಚಾರ್ಯ ರಘುನಾಥರೆಡ್ಡಿ ಪಾಟೀಲ ಮಾತನಾಡಿ, ಡಿಜಿಟಲ್ ವ್ಯವಸ್ಥೆ ಇಲ್ಲದೇ ಇರುವಾಗ ಕೌತುಕ, ಕುತೂಹಲ ಮೂಡಿಸುತ್ತಿದ್ದ ಚಿತ್ರಕಲೆ ಈಗ ತಾಂತ್ರಿಕತೆಯ ಅಬ್ಬರದಲ್ಲಿ ಮರೆಯಾದಂತೆ ತೋರಿದರೂ ಚಿತ್ರಕಲೆಯಲ್ಲಿರುವ ನೈಜತೆ ಇಂದಿಗೂ ತನ್ನತನ ಉಳಿಸಿಕೊಂಡಿದೆ. ಚಿತ್ರಕಲೆ ನೀಡುವ ಪ್ರೇರಣೆ, ಆನಂದದ ನೈಜತೆ ಇನ್ನೂ ಎಂದೆಂದಿಗೂ ಜೀವಂತವಾಗಿ ಇರುತ್ತದೆ ಎಂದರು.

ಕಲಬುರ್ಗಿಯ ಚಿತ್ರಕಲಾವಿದೆ ಪುಷ್ಪಾ ಬಿ.ಮೋಟ್ಗಿ ಮಾತನಾಡಿ, ಅತ್ಯುತ್ತಮ ಚಿತ್ರಗಳ ರಚಿಸುವ ಮೂಲಕ ರಾಜ್ಯ ರಾಷ್ಟ್ರಮಟ್ಟಕ್ಕೆ ಪ್ರದರ್ಶನ ನೀಡುವ ಕಲಾಭಿವ್ಯಕ್ತಿ ಹೊಂದಿರುವ ನರಸಿಂಹಲು ಅವರಿಗೆ ಸರ್ಕಾರದಿಂದ ನೆರವು ದೊರೆತಿರುವುದು ಇನ್ನು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಇದ್ದರು. ಕಲಾವಿದ ನರಸಿಂಹಲು ಬ್ಯಾಗೇರ್, ಜಿಲ್ಲೆಯ ಕಲಾವಿದರಾದ ಪ್ರಶಾಂತ ಗುಮಳಾಪುರಮಠ, ಶಿವಕುಮಾರ ಪಾಲ್ಕಿ, ಅಮಿನರೆಡ್ಡಿ ರಾಯಚೂರು, ಸುರೇಶ ಬ್ಯಾಗೇರ, ಹುಸೇನ್, ಅಬ್ದುಲ್ ಬಾಷಾ ನಾಯ್ಕಲ್, ಕಿಷನ್ ನಾಯಕ, ನರಸಪ್ಪ ಕುಂಟಿಮರಿ, ಪಂಚಮುಖಿ, ಕಾಲೇಜು ಪ್ರಾಚಾರ್ಯ ಭೀಮರಾಯ ಇದ್ದರು. ಕಲಾವಿದ ಹಣಮಂತ ಬಾಡದ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT