ಶುಕ್ರವಾರ, ಆಗಸ್ಟ್ 19, 2022
27 °C
ಸೆಲ್ಫಿ ವಿಡಿಯೊ ಮಾಡಿ ಪೋಷಕರ ಕ್ಷಮೆಯಾಚನೆ

ಪ್ರೀತಿಗೆ ಪೋಷಕರ ಅಡ್ಡಿ: ಪ್ರೇಮಿಗಳು ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಪ್ರೀತಿಗೆ ಪೋಷಕರು ಅಡ್ಡಿ ವ್ಯಕ್ತಪಡಿಸಿದ್ದರಿಂದ ತಾಲ್ಲೂಕಿನ ಗೊಂದಡಗಿ ಗ್ರಾಮದ ಪ್ರೇಮಿಗಳಿಬ್ಬರು ಸೆಲ್ಫಿ ವಿಡಿಯೊದ ಮೂಲಕ ಪೋಷಕರ ಕ್ಷಮೆಯಾಚಿಸಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೊಂದಡಗಿ ಗ್ರಾಮದ ಹನುಮಂತ (25) ಮತ್ತು ಮಹಾದೇವಿ (17) ಆತ್ಮಹತ್ಯೆ ಮಾಡಿಕೊಂಡವರು. ಆಟೊ ಚಾಲಕನಾಗಿದ್ದ ಹನುಮಂತ ಮತ್ತು ಮಹಾದೇವಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅನ್ಯ ಜಾತಿಯವರಾಗಿದ್ದ ಕಾರಣ ಪೋಷಕರು ಅಡ್ಡಿಪಡಿಸಿದ್ದರು ಎನ್ನಲಾಗಿದೆ.

‘ವಾರದ ಹಿಂದೆ ಪ್ರೀತಿಯ ವಿಷಯ ಮಹಾದೇವಿಯ ಮನೆಯವರಿಗೆ ತಿಳಿದಿತ್ತು. ಹನುಮಂತನನ್ನು ಮರೆತುಬಿಡುವಂತೆ ಮಹಾದೇವಿಯನ್ನು ಒತ್ತಾಯಿಸಿದ್ದರು. ನಂತರ ಸೋದರ ಮಾವನ ಜೊತೆಗೆ ವಿವಾಹ ಮಾಡಲು ತೀರ್ಮಾನಿಸಲಾಗಿತ್ತು. ಹೀಗಾಗಿ ಈ ಪ್ರೇಮಿಗಳು ಸೆಪ್ಟೆಂಬರ್ 8ರಂದು ಮಂಗಳವಾರ ಮನೆ ಬಿಟ್ಟು ತೆರಳಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರ ಮೃತದೇಹ ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಗುರುವಾರ ಪತ್ತೆಯಾಗಿವೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಇವರು ಮಾಡಿದ ಸೆಲ್ಫಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.