ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲಾಪುರ: ಮಳೆಗಾಗಿ ದೇವಿಗೆ ಮಹಾರುದ್ರಾಭಿಷೇಕ

Published 20 ಮೇ 2024, 14:31 IST
Last Updated 20 ಮೇ 2024, 14:31 IST
ಅಕ್ಷರ ಗಾತ್ರ

ಕಮಲಾಪುರ: ಮುಂಗಾರು ಬಿತ್ತನೆಗೆ ಸಕಾಲಕ್ಕೆ ಮಳೆಯಾಗಲೆಂದು ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಗ್ರಾಮದೇವತೆ ಡೊಂಗರಾದೇವಿಗೆ ಮೇ 24ರಂದು ಬೆಳಿಗ್ಗೆ 6ಕ್ಕೆ ಮಹಾರುದ್ರಾಭಿಷೇಕ ಆಯೋಜಿಸಲಾಗಿದೆ.

ಪ್ರತಿ ವರ್ಷ ಮುಂಗಾರು ಆರಂಭದ ಸಮಯದಲ್ಲಿ ಮಹಾರುದ್ರಾಭಿಷೇಕ ಮಾಡಲಾಗುತ್ತದೆ. ಈ ವರ್ಷವು ನಡೆಯಲಿದೆ. ಮಹಿಳೆಯರ ಕುಂಭಕಳಶ ಮೆರವಣಿಗೆ, ಭಜನೆ ಕಾರ್ಯಕ್ರಮ ನಡೆಯಲಿದೆ. ರೈತರು ಬೆಳೆಯುವ ಬೆಳೆ, ದವಸ, ಧಾನ್ಯಗಳು ಇಳುವರಿ ಹೆಚ್ಚಾಗಲೆಂದು, ರೋಗ ಕೀಟಬಾಧೆ ತಗುಲದಿರಲೆಂದು ಸಮಸ್ತ ನಾಡಿನ ಜನರು ಸುಖ–ಶಾಂತಿ, ಆರೋಗ್ಯ–ಐಶ್ವರ್ಯ ನೀಡಲೆಂದು ಮಹಾರುದ್ರಾಭಿಷೇಕ ಹಮ್ಮಿಕೊಳ್ಳಲಾಗಿದೆ ಎಂದು ರಾಜಶೇಖರ ರಾಜೇಶ್ವರ, ಶಿವಾನಂದ ಇಟಗಿ, ಮಾಣಿಕಪ್ಪ ಜನಕಟ್ಟಿ, ಅಂಬರಾಯ ಲಗಶೆಟ್ಟಿ, ಭೋಜಪ್ಪ ರಾಜೇಶ್ವರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT