ಗುರುಮಠಕಲ್ ತಾಲ್ಲೂಕಿನ ಯದ್ಲಾಪುರ ಜೆಸ್ಕಾಂ ವತಿಯಿಂದ ಜಂಗಲ್ ಕಟಿಂಗ್
ಯಾದಗಿರಿ, ಗುರುಮಠಕಲ್ ವಿಭಾಗದಲ್ಲಿ ವಿದ್ಯುತ್ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕೊಳ್ಳಲಾಗಿದೆ. ಜಂಗಲ್ ಕಟಿಂಗ್, ಟಿಸಿ ಸುತ್ತ ಸ್ವಚ್ಛಗೊಳಿಸಲಾಗಿದೆ
ಡಿ.ರಾಘವೇಂದ್ರ ಯಾದಗಿರಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್
ಈಚೆಗೆ ನಡೆದ ಜಾಲಿಬೆಂಚಿ ಘಟನೆಯ ನಂತರ ಎಚ್ಚೆತ್ತುಕೊಂಡು ಎಲ್ಲ ಸ್ಟೇಷನ್‌ಗಳನ್ನು ಪರೀಕ್ಷೆ ಮಾಡಿ ವಿದ್ಯುತ್ ಹರಿಸಲಾಗುತ್ತಿದೆ
ರಾಜಶೇಖರ ಸುರಪುರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್
ನಿರ್ಲಕ್ಷ್ಯಕ್ಕೆ ಯುವಕ ಸಾವು?
ನಗರದ ಎಪಿಎಂಸಿ ಯಾರ್ಡ್ ಹಿಂದುಗಡೆ ಹೈವೋಲ್ಟೇಜ್‌ನ ಪವರ್ ವೈರ್ ಹಾದು ಹೋಗಿದ್ದು ಮೂರು ದಿನಗಳಿಂದ ತುಂಡಾಗಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರೂ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರೆ ಎನ್ನುವ ಪ್ರಶ್ನೆ ಎದ್ದಿದೆ. ವಿದ್ಯುತ್ ತಂತಿ ಏಕಾಏಕಿ ಹರಿದು ಯುವಕ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದ್ದು ಅಧಿಕಾರಿಗಳ ಬೇಜಾಬ್ದಾರಿ ತೋರಿಸುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 110 ಕೆವಿ ತಂತಿ ಯುವಕನ ಬೆನ್ನಿನ ಮೇಲೆ ಹಾದು ಹೋಗಿದ್ದು ಯುವಕ ಬೈಕ್ ಮೇಲೆಯೇ ಒರಗಿ ಪ್ರಾಣ ಬಿಟ್ಟಿದ್ದಾನೆ. ಇದರಿಂದ ಯುವಕನ ಬೆನ್ನಿನ ಭಾಗ ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಲೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಅಲ್ಲದೇ ಸ್ಥಳಕ್ಕೆ ಭೇಟಿ ನೀಡಿದ್ದ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರಿಗೆ ಜೆಸ್ಕಾಂ ವಿರುದ್ದ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಯಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.