ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಗ್ರಾ.ಪಂ ಚುನಾವಣೆಗೆ ಸಕಲ ಸಿದ್ಧತೆ

ಬಿರುಸುಗೊಂಡ ಅಭ್ಯರ್ಥಿಗಳ ಮತಯಾಚನೆ
Last Updated 24 ಡಿಸೆಂಬರ್ 2020, 3:55 IST
ಅಕ್ಷರ ಗಾತ್ರ

ಗುರುಮಠಕಲ್: ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಘೋಷಣೆ ಆದಾಗಿನಿಂದ ಮಾತುಕತೆಗೆ ಸೀಮಿತವಾಗಿದ್ದ ತಾಲ್ಲೂಕಿನ ಗ್ರಾಮಗಳಲ್ಲಿ ಚುನಾವಣೆ ರಂಗೇರಿದೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಅಭ್ಯರ್ಥಿಗಳು, ಬೆಂಬಲಿಗರು ಮತಬೇಟೆಗೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.

ತಾಲ್ಲೂಕಿನ ಎಲ್ಲಾ 17 ಗ್ರಾಮ ಪಂಚಾಯತಿಗಳ 233 ಸ್ಥಾನಗಳಿಗೆ ಶಾಂತಿಯುತ ಹಾಗೂ ಉತ್ತಮ ಮತದಾನ ಜರುಗಿಸಲು ಸಿದ್ಧತೆಗಳು ನಡೆದಿವೆ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯವನ್ನು ಸ್ಟ್ರಾಂಗ್ ರೂಮ್ ಆಗಿ ಬಳಕೆ ಮಾಡಿಕೊಳ್ಳುವುದು ಹಾಗೂ ಮತ ಎಣಿಕೆ ಕೇಂದ್ರವಾಗಿ ಬಳಕೆ ಮಾಡಿಕೊಳ್ಳಲು ಗುರುತಿಸಲಾಗಿದೆ.

ಎಲ್ಲಾ ಮತಗಟ್ಟೆಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಗುರುತುಗಳನ್ನು ಹಾಕುವುದು, ವಿದ್ಯುತ್, ಬೆಳಕು, ರ‍್ಯಾಂಪ್, ಗಾಲಿಕುರ್ಚಿ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಮತಗಟ್ಟೆಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಮುತುವರ್ಜಿ ವಹಿಸುತ್ತಿದೆ.

ತಾಲ್ಲೂಕಿನ ಒಟ್ಟು 18 ಗ್ರಾಮ ಪಂಚಾಯತಿಗಳಲ್ಲಿ ಅನಪುರ ಪಂಚಾಯತಿಯ ಅವಧಿ ಮುಗಿಯದ ಕಾರಣ 17 ಪಂಚಾಯತಿಗಳ 302 ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದ್ದು, 68 ಜನ ಅವಿರೋಧ ಆಯ್ಕೆ, ಗಾಜರಕೋಟದ ಸಾಮಾನ್ಯ ಸ್ಥಾನದಲ್ಲಿ ಯಾರೂ ನಾಮಪತ್ರ ಸಲ್ಲಿಸದಿರುವುದರಿಂದಾಗಿ 233 ಸ್ಥಾನಗಳಿಗೆ ಚುನಾವಣೆ ನಡೆಸಲು ಸಿದ್ಧತೆ ನಡೆದಿದೆ.

ಯಂಪಾಡ 2, ವಂಕಸಂಬರ 2, ನಜರಾಪುರ 1, ಕಣೇಕಲ್ 1, ಬದ್ದೇಪಲ್ಲಿ 4, ಜೈಗ್ರಾಮ 1, ಕೊಂಕಲ್ 4, ಯಲ್ಹೇರಿ 5, ಚಿನ್ನಾಕಾರ 3, ಚಪೆಟ್ಲಾ 2, ಗಾಜರಕೋಟ 1 ಸೇರಿ ತಾಲ್ಲೂಕಿನಲ್ಲಿ ಒಟ್ಟು 26 ನಾಮಪತ್ರಗಳು ತಿರಸ್ಕೃತಗೊಂಡಿವೆ. 68 ಜನ ಅಭ್ಯರ್ಥಿಗಳ ಅವಿರೋಧ ಆಯ್ಕೆಯ ನಂತರ ಉಳಿದ 581 ನಾಮಪತ್ರಗಳು ಕ್ರಮಬದ್ಧವಾಗಿದ್ದು. ಚುನಾವಣಾ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT