ಬುಧವಾರ, ಫೆಬ್ರವರಿ 26, 2020
19 °C
ಶುದ್ಧ ಕುಡಿಯುವ ನೀರಿಲ್ಲ; ಜನಪ್ರತಿನಿಧಿಗಳ ನಿರ್ಲಕ್ಷ್ಯ, ಕಷ್ಟ ಕೇಳುವವರಿಲ್ಲ...

ಸಮಸ್ಯೆಗಳ ಸುಳಿಯಲ್ಲಿ ಆನೂರು(ಬಿ)ಗ್ರಾಮ

ಮಲ್ಲಿಕಾರ್ಜುನ.ಬಿ.ಅರಿಕೇರಕರ್ Updated:

ಅಕ್ಷರ ಗಾತ್ರ : | |

Prajavani

ಸೈದಾಪುರ:  ಸಮೀಪದ ಆನೂರು (ಬಿ) ಗ್ರಾಮದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಜನಪ್ರತಿ
ನಿಧಿಗಳು ಗಾಢನಿದ್ರೆಯಲ್ಲಿರುವಂತೆ ಕಾಣುತ್ತಿದೆ. ಗ್ರಾಮದಲ್ಲಿ 700 ರಿಂದ 800 ಜನಸಂಖ್ಯೆ ಇದ್ದು ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣಿಸುತ್ತಿದೆ.

2018ರಲ್ಲಿ ನಿರ್ಮಾಣವಾದ ಶುದ್ಧ ನೀರಿನ ಘಟಕವು ಪ್ರಾರಂಭವಾದ ಕೇವಲ ಒಂದು ವರ್ಷದಲ್ಲಿ ಸ್ಥಗಿತಗೊಂಡಿದೆ. ಇದಕ್ಕೆಸಮರ್ಪಕವಾದ ವಿದ್ಯುತ್ ಪೂರೈಕೆ ವ್ಯವಸ್ಥೆ ಇಲ್ಲ. ಹಾಗೆಯೇ ಇದಕ್ಕೆ ಸೀಮಿತವಾದ ನೀರಿನ ಕೊಳವೆ ಬಾವಿ ಇಲ್ಲ.

ನೀರು ಶುದ್ಧೀಕರಿಸುವ ಯಂತ್ರೋಪಕರಣಗಳು ಕಳಪೆಯಾಗಿವೆ. ಒಂದು ವರ್ಷದಲ್ಲಿ ಹಾಳಾಗಿವೆ. ಇದನ್ನು ಸರಿಪಡಿಸಲು ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಮುತುವರ್ಜಿ ವಹಿಸಿಲ್ಲ. ಜನರು ದೂರದ ಕೊಳವೆ ಬಾವಿಯ ನೀರನ್ನು ಕುಡಿಯಲು ಮತ್ತು ಬಳಸಲು ಅವಲಂಬಿಸಿದ್ದಾರೆ.

ಸರ್ಕಾರಿ ಶಾಲೆಗೆ ಸ್ಥಳದ ಕೊರತೆ: ಗ್ರಾಮದ  ಸರ್ಕಾರಿ ಶಾಲೆಯಲ್ಲಿ  ಮಕ್ಕಳ ಹಾಜರಾತಿ ಉತ್ತಮವಾಗಿ ಇದೆ. ಆದರೆ ಮಕ್ಕಳು ಸರಿಯಾದ ಆಟದ ಮೈದಾನ, ತರಗತಿ ಕೋಣೆಗಳ ಕೊರತೆ ಅನುಭವಿಸುತ್ತಿದ್ದಾರೆ. ಅದ್ದರಿಂದ ಸರ್ಕಾರ ಬೇರೆ ಕಡೆ ಸ್ಥಳ ಗುರುತಿಸಿ ಹೊಸ ಶಾಲೆ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಚರಂಡಿ ಸಮಸ್ಯೆ: ಸರಿಯಾದ ಚರಂಡಿ ಇಲ್ಲದೆ ಇರುವುದರಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿದು, ಮನೆಯ ಮುಂದಿನ ಅಂಗಳಗಲ್ಲಿ ಕೊಳಚೆ ನೀರು ತುಂಬಿ ಕೆಟ್ಟ ವಾಸನೆ ಬೀರುತ್ತಿದೆ. ಆರೋಗ್ಯದ ಮೇಲೆ ತೀವ್ರವಾದ ದುಷ್ಪರಿಣಾಮ ಬೀರುತ್ತಿದೆ.

ಹದಗೆಟ್ಟ ರಸ್ತೆ ಸಂಚಾರ ವ್ಯವಸ್ಥೆ:  ಗ್ರಾಮದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ವಾಹನಸಂಚಾರಕ್ಕೆ ಸುರಕ್ಷಿತವಾಗಿಲ್ಲ. ವಾಹನ ಸವಾರರು ಹರಸಾಹಸ ಪಡುತ್ತ , ಹಿಡಿಶಾಪ ಹಾಕುತ್ತ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು