ಶನಿವಾರ, ಜನವರಿ 29, 2022
22 °C

‘ಜ. 10 ರಂದು ಪ್ರತಿಭಟನೆಗೆ ನಿರ್ಧಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ:  ‘ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ದಲಿತ ಪರ ಸಾಮೂಹಿಕ ಸಂಘಟನೆಗಳ ಒಕ್ಕೂಟದಿಂದ ಜ. 10 ರಂದು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಪರಿಶಿಷ್ಟ ಮುಖಂಡ ನಾಗಣ್ಣ ಕಲ್ಲದೇವನಳ್ಳಿ ಅವರು ತಿಳಿಸಿದರು.

ನಗರದ ಬುದ್ದ ವಿಹಾರದಲ್ಲಿ ಶುಕ್ರವಾರ ನಡೆದ ದಲಿತ ಪರ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಅವರು ಮಾತನಾಡಿ, ‘ಕೆಲ ಜನಾಂಗದವರಿಗೆ ಕಂದಾಯ ಇಲಾಖೆಯಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಕೊಡುತ್ತಿರುವ ಕೆಲಸ ತೆರೆಮರೆಯಲ್ಲಿ ನಡೆದಿದೆ. ಇದನ್ನು ಖಂಡಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ರಾಹುಲ್ ಹುಲಿಮನಿ, ವೆಂಕೋಬ ದೊರೆ, ದೇವಿಂದ್ರಪ್ಪ ಪತ್ತಾರ, ವೆಂಕಟೇಶ ಬೇಟೆಗಾರ ಹಾಗೂ ನಿಂಗಣ್ಣ ಗೋನಾಲ ಸಲಹೆ ನೀಡಿದರು.

ರಮೇಶ ದೊರೆ, ಶಿವಶಂಕರ ಬೊಮ್ಮನಳ್ಳಿ, ಮಾಳಪ್ಪ ಕಿರದಳ್ಳಿ, ರಮೇಶ ಅರಿಕೇರಿ, ರಾಜು ಬಡಿಗೇರ, ಮಲ್ಲು ಮುಷ್ಠಳ್ಳಿ, ಚಂದಪ್ಪ ಪಂಚಮ, ಶರಣು ಚಂದ್ಲಾಪುರ, ಹಣಮಂತ ರತ್ತಾಳ, ಶರಣು ಕೃಷ್ಣಾಪುರ, ಮಾನಪ್ಪ ಝಂಡದಕೇರಿ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.