ಶುಕ್ರವಾರ, ಜನವರಿ 21, 2022
30 °C

ಬಾಬುಗೌಡ ಪಾಟೀಲ ಗಡಿಪಾರು ಮಾಡಿ: ಕರ್ನಾಟಕ ಪ್ರದೇಶ ಕುರುಬರ ಸಂಘ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಹುಣಸಗಿ ತಾಲ್ಲೂಕಿನ ಅಗತೀರ್ಥ ಗ್ರಾಮದ ಬಾಬುಗೌಡ ಗುಂಡಾಗಿರಿ, ದಬ್ಬಾಳಿಕೆಯಲ್ಲಿ ತೊಡಗಿದ್ದು, ಅವರನ್ನು ಗಡಿಪಾರು ಮಾಡಬೇಕು’ ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಬಳಿ ಶನಿವಾರ ಜಮಾಯಿಸಿದ ಕಾರ್ಯಕರ್ತರು ಬಾಬುಗೌಡ ವಿರುದ್ಧ ಘೋಷಣೆ ಕೂಗಿದರು.

ಹುಣಸಗಿ ತಾಲ್ಲೂಕಿನ ಅಗತೀರ್ಥ ಗ್ರಾಮದಲ್ಲಿ ಬಾಬುಗೌಡ ಗುಂಡಾಗಿರಿ, ದಬ್ಬಾಳಿಗೆಯಲ್ಲಿ ತೊಡಗಿಕೊಂಡು ಈ ಗ್ರಾಮದ ಕುರುಬ ಸಮಾಜದವರ ಮೇಲೆ ನಿರಂತರ ದೌರ್ಜನ್ಯ ಮಾಡಿ, ಕೊಲೆಗೆ ಯತ್ನಿಸಿ ಕುರುಬ ಸಮಾಜದ  ಗುರುಗಳಿಗೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸಮಾಜದವರಿಗೆ ಜೀವ ಬೆದರಿಕೆ ಹಾಕಿದ್ದಾರೆ’ ಎಂದರು.

ಅಗತೀರ್ಥ ಗ್ರಾಮದಲ್ಲಿ ಭಯದ ವಾತಾವರಣ ಹುಟ್ಟಿಸಿದ್ದಾರೆ. ಇದರಿಂದ ಗ್ರಾಮದಲ್ಲಿನ ಮಹಿಳೆಯರು ಈತನಿಂದ ಬೆಚ್ಚಿ ಬಿದ್ದಿದ್ದಾರೆ. ಇದೇ ಗ್ರಾಮದ ಮಲ್ಲಣ್ಣಗೌಡ ಅಗತೀರ್ಥ ಮತ್ತು ಚಿದಾನಂದ ಇವರ ಕುಟುಂಬದ ಮೇಲೆ ಹಲ್ಲೆ ಮಾಡಿದಲ್ಲದೇ ಬೆದರಿಕೆ ಹಾಕಿ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ’ ಎಂದು ಆಪಾದಿಸಿದರು.

ಈಗಾಗಲೇ ಆರೋಪಿಯನ್ನು ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಕೂಡಲೇ ಬಾಬುಗೌಡ ಅಗತೀರ್ಥ ಅವರನ್ನು ಗಡಿಪಾರು ಮಾಡಿ, ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಿ ಗ್ರಾಮದ ಜನರಿಗೆ ಶಾಂತಿ ನೆಲೆಸುವಂತ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಸಿದ್ದಣ್ಣಗೌಡ ಕಾಡಮನೋರ, ಗಿರೆಪ್ಪಗೌಡ ಬಾಣತಿಹಾಳ, ಯಲ್ಲಪ್ಪ ಕುರಕುಂದಿ ಸುರಪುರ, ಬಸವರಾಜಪ್ಪಗೌಡ ವಿಭೂತಿಹಳ್ಳಿ, ಸಾಯಬಣ್ಣ ವನಕೇರಿ, ಮಲ್ಲಿಕಾರ್ಜುನ ಕರಕಳ್ಳಿ, ಮಲ್ಲಣ್ಣ ಐಕೂರ, ಚನ್ನಕೇಶವಗೌಡ ಬಾಣತಿಹಾಳ, ಮಲ್ಲು ದಂಡೀನ್, ಹೊನ್ನಪ್ಪ ಮುಷ್ಟೂರ, ರವಿಕುಮಾರ ಆಲ್ದಾಳ, ಪರಶುರಾಮ ಚೌದ್ರಿ, ಕಾಳಪ್ಪ ಕೌತಿ, ಭೀಮರಾಯ ಜಂಗಳಿ, ಶರಣಗೌಡ ಕ್ಯಾತ್ನಾಳ, ರವಿಕುಮಾರ ವರ್ತೂರ, ಬೀರಲಿಂಗ ವಗ್ಗರ, ದೇವು ಜಡಿ ವಡಗೇರಾ, ಬಿರೇಶ ಚಿರತೆನೋರ, ಹಣಮಂತ್ರಾಯಗೌಡ ತೇಕರಾಳ, ಯಲ್ಲಾಲಿಂಗ ಕ್ಯಾತ್ನಾಳ, ವಿಜಯಕುಮಾರ ಕ್ಯಾತ್ನಾಳ, ನಿಂಗು ಐಕೂರ, ಭೀಮು ಪಿ. ಪೂಜಾರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು