ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ | ಮಳೆಯಿಂದ ಹತ್ತಿ ಬೆಳೆಗೆ ರೋಗ?

Published : 6 ಸೆಪ್ಟೆಂಬರ್ 2023, 16:40 IST
Last Updated : 6 ಸೆಪ್ಟೆಂಬರ್ 2023, 16:40 IST
ಫಾಲೋ ಮಾಡಿ
Comments

ಶಹಾಪುರ: ತಾಲ್ಲೂಕಿನ ಶಿರವಾಳ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಬೆಳೆದು ನಿಂತಿರುವ ಹತ್ತಿ ಬೆಳೆಗೆ ರೋ ಗ ಕಾಣಿಸಿಕೊಂಡಿದೆ. ಹೆಚ್ಚಿನ ಮಳೆಯಿಂದ ಇಂತಹ ರೋಗ ಕಾಣಿಸಿಕೊಂಡಿರುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಹತ್ತಿ ಬೆಳೆ ಹೂ, ಕಾಯಿ ಬಿಡುವ ಹಂತದಲ್ಲಿವೆ. ಆದರೆ, ಏಕಾಏಕಿ ಹತ್ತಿ ಗಿಡದ ಎಲೆಗಳು ಬಾಡಿ, ಗಿಡವೇ ಒಣಗಲಾರಂಭಿಸಿದೆ. ಇದು ಜಮೀನಿನ ಮಧ್ಯದಲ್ಲಿಯೇ ಕಾಣಿಸಿಕೊಂಡಿದೆ. ಯಾವ ರೋಗದ ಹಾವಳಿ ಉಂಟಾಗಿದೆ ಎಂಬುವುದು ತಿಳಿಯುತ್ತಿಲ್ಲ ಎಂದು ರೈತ ಮರೆಪ್ಪ ಪ್ಯಾಟಿ ಶಿರವಾಳ ಅಳಲು ತೋಡಿಕೊಂಡರು.

ಹತ್ತಿ ಬೆಳೆಯ ಜಮೀನುಗಳಿಗೆ ಭೀಮರಾಯನಗುಡಿ ಕೃಷಿ ವಿಜ್ಞಾನಿಗಳು ತಕ್ಷಣ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದರು.

‘ವಾತಾವರಣದಲ್ಲಿ ಏರುಪೇರು ಆಗಿ ಏಕಾಏಕಿ ಹೆಚ್ಚಿನ ಮಳೆ ಸುರಿದ ಕಾರಣ ಬೆಳೆಗೆ ಹಾನಿಯಾಗುತ್ತಿದೆ. ಇದು ರೋಗವಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತರಿಗೆ ಸೂಕ್ತ ಮಾರ್ಗದರ್ಶನ ಮಾಡಲಾಗುವುದು’ ಎಂದು ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಕೃಷಿ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT