ಶನಿವಾರ, ಜೂನ್ 19, 2021
21 °C

ಗುರುಮಠಕಲ್, ಶಹಾಪುರದಲ್ಲಿ ಇಳೆಗೆ ತಂಪೆರೆದ ತುಂತುರು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಪಟ್ಟಣ, ಪುಟಪಾಕ, ಚಪೆಟ್ಲಾ, ಗಾಜರಕೋಟ, ಕೇಶ್ವಾರ, ದಂತಾಪುರ, ಚಂಡರಕಿ, ಕಾಕಲವಾರ, ಎಂಟಿಪಲ್ಲಿ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಗಾಳಿ ಸಹಿತ 30 ನಿಮಿಷಗಳ ಕಾಲಮಳೆ ಸುರಿದಿದ್ದು, ಕಾದ ಕಾವಲಿಯಂತಿದ್ದ ಭೂಮಿಗೆ ಸ್ವಲ್ಪ ತಂಪುಂಟುಮಾಡಿದೆ.

ಸಂಜೆ ಏಕಾಏಕಿ ಮೋಡ ಕವಿದಿದ್ದು ಗಾಳಿ ಬೀಸಲು ಆರಂಭವಾಗಿತ್ತು, ಧೋ ಎಂದು ಮಳೆ ಸುರಿಯಲು ಆರಂಭವಾಗಿ ಗುಡುಗಿನ ಸದ್ದಿಗೆ ಸಿಡಿಲೇ ಬಡಿದಂತಾವಾತಾವರಣ ಕಂಡುಬಂದಿದ್ದು, ಸುಮಾರು 20 ನಿಮಿಷಗಳು ಮಳೆ ಸುರಿದ ನಂತರ ಕೊಂಚ ನೀಮತಿತ್ತು ಮತ್ತೆ ನಂತರ 20 ನಿಮಿಷಗಳ ಕಾಲ ತುಂತುರು ಹನಿಗಳನ್ನು ಸುರಿಸಿದ ಮಳೆರಾಯ ವಾತಾವರಣವನ್ನು ತಂಪಾಗಿಸಿದೆ.

ಪಟ್ಟಣದಿಂದ ನಾರಾಯಣಪೇಟಕ್ಕೆ ಹೋಗುವ ರಸ್ತೆಗೆ ಕಾಡು ಹಂದಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಹಾಕಿಕೊಂಡಿದ್ದ ಮುಳ್ಳಿನ ಬೇಲಿ ಗಾಳಿಯಿಂದಾಗಿ ಕಿತ್ತು, ರಸ್ತೆಗೆ ಅಡ್ಡಲಾಗಿ ಬಿದ್ದ ದೃಶ್ಯಗಳು ಕಂಡುಬಂದವು.

ಉತ್ತಮ ಮಳೆ
ಶಹಾಪುರ:
ನಗರದಲ್ಲಿ ಬುಧವಾರ ಸಂಜೆ ಸುಮಾರು 20 ನಿಮಿಷ ಉತ್ತಮ ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟ ಜನತೆ ತುಸು ನಿಟ್ಟುಸಿರು ಬಿಡುವಂತೆ ಆಗಿದೆ. ಕಾದ ಕಬ್ಬಿಣದಂತೆ ಆದ ಭೂಮಿಗೆ ತಂಪು ನೀಡಿದೆ. ಅಕಾಲಿಕ ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.