ಶನಿವಾರ, ಜುಲೈ 2, 2022
26 °C

ಸುರಪುರ: ರಾಜೂಗೌಡ ಜನ್ಮದಿನ; ಹೋಮ, ಕ್ಷೀರಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಶಾಸಕ ರಾಜೂಗೌಡ ಅವರ 43ನೇ ಜನ್ಮದಿನದ ಪ್ರಯುಕ್ತ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಅವರ ಅಭಿಮಾನಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಹೋಮ ಹವನ ಸೇರಿದಂತೆ ವಿವಿಧ ಪೂಜೆ ಸಲ್ಲಿಸಲಾಯಿತು.

ಜಿ.ಪಂ ಮಾಜಿ ಅಧ್ಯಕ್ಷ ರಾಜಾಹನು ಮಪ್ಪನಾಯಕ ಮತ್ತು ನಗರ ಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ ನೇತೃತ್ವದಲ್ಲಿ ರಾಜೂಗೌಡ ಅವರ ಆಯುರಾರೋಗ್ಯ ಕರುಣಿಸುವಂತೆ ಪ್ರಾರ್ಥಿಸಿ ಆಯುಷ್ಯ ಹೋಮ, ಮಹಾವಿಷ್ಣು ಸುರ್ದಶನ ಹೋಮ ನಡೆಯಿತು.

ಬಳಿಕ ವೆಂಕಟೇಶ್ವರನಿಗೆ ಪಂಚಾ ಮೃತ ಅಭಿಷೇಕ, ತುಳಸಿ ಅರ್ಚನೆ, ಪುಷ್ಪಾಲಂಕಾರ, ವಿಷ್ಣು ಸಹಸ್ರನಾಮ, ಮಂಗಳಾರುತಿ, ಮಂತ್ರ ಪುಷ್ಪ ನೆರವೇರಿತು. ನಂತರ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ದೇವಸ್ಥಾನ ಆವರಣದಲ್ಲಿ ಶಾಸಕ ರಾಜುಗೌಡ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದರು. ಮಹಾತ್ಮಾಗಾಂಧಿ ವೃತ್ತ, ಗೌರಮ್ಮ ದೇವಸ್ಥಾನದ ಬಳಿ, ಕುಂಬಾರಪೇಟೆಯ ಸಂಗೊಳ್ಳಿ ರಾಯಣ್ಣ ಮೂರ್ತಿಯ ಬಳಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡ ರಾದ ಜ್ಞಾನಚಂದ್ ಜೈನ್, ಬಲಭೀಮ ನಾಯಕ, ಭೀಮಣ್ಣ ಬೇವಿನಾಳ, ವಿಷ್ಣು ಗುತ್ತೇದಾರ, ಈಶ್ವರ ನಾಯಕ ಇದ್ದರು.

43 ಅಡಿ ಭಾವಚಿತ್ರ: ತಿಮ್ಮಾಪುರ ದಲ್ಲಿ ರಾಜೂಗೌಡ ಅಭಿಮಾನಿಗಳು, ಕಾರ್ಯಕರ್ತರು ಸೇರಿ 43 ಅಡಿ ಎತ್ತರದ ರಾಜೂಗೌಡರ ಭಾವಚಿತ್ರ ಹಾಕಿ, ಕ್ರೇನ್‌ ಮೂಲಕ ಭಾವಚಿತ್ರಕ್ಕೆ ಹಾರ ಹಾಕಿ ಸಂಭ್ರಮಿಸಿದರು.ರಂಗಂಪೇಟ -ತಿಮ್ಮಾಪುರದ ಗಾಳಿ ಮರಗಮ್ಮ ದೇವಿಯ ದೇವಸ್ಥಾನದಲ್ಲಿ ಕಾರ್ಯಕರ್ತರಿಂದ ಮತ್ತು ಅಂಭಾಭವಾನಿ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರೀಯ ಸಮಾಜದಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಂತರ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು