ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಮನೆಯಲ್ಲಿ‌ ಊಟ, ಉಪಾಹಾರ ಸೇವಿಸಿದ ಕಂದಾಯ ಸಚಿವ ಆರ್. ಅಶೋಕ

Last Updated 20 ಮಾರ್ಚ್ 2022, 7:43 IST
ಅಕ್ಷರ ಗಾತ್ರ

ದೇವತ್ಕಲ್ (ಯಾದಗಿರಿ): ಜಿಲ್ಲೆಯ ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರು ಗ್ರಾಮ ವಾಸ್ತವ್ಯ ಅಂಗವಾಗಿ ಪರಿಶಿಷ್ಟರ ಕಾಲೊನಿಯಲ್ಲಿ‌ ಉಪಾಹಾರ ಸೇವಿಸಿದರು.‌

ಗ್ರಾಮದ ಬಸಪ್ಪ ಕಟ್ಟಿಮನಿ, ಬಸವರಾಜ, ಮಲ್ಲಮ್ಮ,‌ ರಾಯಮ್ಮ, ಮೈತ್ರಮ್ಮ, ಭೀಮಬಾಯಿ‌ ಮನೆಯವರು ಸಚಿವರನ್ನು ಆರತಿ ಬೆಳಗಿ ಮನೆಗೆ ಸ್ವಾಗತಿಸಿದರು.

ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಖಡಕ್ ಜೋಳದ ರೊಟ್ಟಿ, ಬಿಸಿ ಜೋಳದ ರೊಟ್ಟಿ, ಎರಡು ತರದ ಕಾಳು, ಮೊಳಕೆ ಕಾಳು, ಚಿತ್ರಾನ್ನ, ಹೀರೇಕಾಯಿ ಪಲ್ಯೆ, ಉಪ್ಪಿಟ್ಟು, ಮೊಸರನ್ನ, ಶೇಂಗಾ ಪುಡಿ, ಉಪ್ಪಿನಕಾಯಿ, ಮಜ್ಜಿಗೆ ಸೇವಿಸಿದರು.

'ಪ್ರತಿದಿನ ಕೂಲಿ ಕೆಲಸಕ್ಕೆ ತೆರಳುತ್ತಿದ್ದೀವಿ. ಸಚಿವರು ನಮ್ಮ ಮನೆಗೆ ಬಂದಿರುವುದು ಸಂತಸ ತಂದಿದೆ.‌ ಸಚಿವರಿಗಾಗಿ ಉಪಾಹಾರ, ಊಟ ತಯಾರಿಸಿದ್ದೀವಿ' ಎಂದು ಮಲ್ಲಮ್ಮ, ರಾಯಮ್ಮ,‌‌ ಮೈತ್ರಮ್ಮ, ಭೀಮಬಾಯಿ ಹೇಳಿದರು.

ಸುರಪುರ ಶಾಸಕ ನರಸಿಂಹ ನಾಯಕ (ರಾಜೂಗೌಡ), ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. , ಜಿಲ್ಲಾ ಪಂಚಾಯಿತಿ ಸಿಇಒ ಅಮರೇಶ ನಾಯಕ್, ಉದ್ಯಮಿ ದಯಾನಂದ್ ಸಾಥ್ ನೀಡಿದರು.

ಶಾಲೆ, ದೇಗುಲ‌ ಸುತ್ತಾಡಿದ ಕಂದಾಯ ಸಚಿವ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಗ್ರಾಮ ವಾಸ್ತವ್ಯದಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರು ದೇವತ್ಕಲ್ ಗ್ರಾಮದಲ್ಲಿರುವ ದೇವಸ್ಥಾನ, ಶಾಲೆಗಳಿಗೆ ಭಾನುವಾರ ಭೇಟಿ ನೀಡಿದರು.

ದೇವತ್ಕಲ್‌ನಲ್ಲಿ ಶ್ರೀ ಸಿದ್ಧ ಬೀರಲಿಂಗೇಶ್ವರ ದೇವಸ್ಥಾನ ಬಬಲಾದಿ ದೇವರ ದರ್ಶನ ಪಡೆದರು. ನಂತರ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಸಚಿವರು‌,‌ ಶಾಲಾ ಸೌಲಭ್ಯಗಳನ್ನು ವಿಕ್ಷೀಸಿದರು.

ದೇವತ್ಕಲ್ ಗ್ರಾಮದಲ್ಲಿರುವ ಶಾಲೆಗೆ ತೆರಳಿದ ಸಚಿವರು
ದೇವತ್ಕಲ್ ಗ್ರಾಮದಲ್ಲಿರುವ ಶಾಲೆಗೆ ತೆರಳಿದ ಸಚಿವರು
ದೇವತ್ಕಲ್ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ತೆರಳಿದ ಸಚಿವರು
ದೇವತ್ಕಲ್ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ತೆರಳಿದ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT