ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ: ರೈತನ ಬದುಕರಳಿಸಿದ ಗುಲಾಬಿ

ಕೋವಿಡ್ ವೇಳೆ ಚಾಲಕ ವೃತ್ತಿ ಬಿಟ್ಟು ಗ್ರಾಮಕ್ಕೆ ಮರಳಿದ್ದ ಮುಕ್ತಾರ್ ಪಟೇಲ್
Published 9 ಜನವರಿ 2024, 5:57 IST
Last Updated 9 ಜನವರಿ 2024, 5:57 IST
ಅಕ್ಷರ ಗಾತ್ರ

ಯರಗೋಳ: ಕೋವಿಡ್ ವೇಳೆ ಚಾಲಕ ವೃತ್ತಿಯನ್ನು ಬಿಟ್ಟು ಗ್ರಾಮಕ್ಕೆ ಮರಳಿ ತುಂಡು ಭೂಮಿಯಲ್ಲಿ ಗುಲಾಬಿ ಕೃಷಿ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಸ್.ಹೊಸಳ್ಳಿ ಗ್ರಾಮದ ರೈತ ಮುಕ್ತಾರ್ ಪಟೇಲ್.

ಹನಿ ನೀರಾವರಿ ಮೂಲಕ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಹಾಗೂ ನರೇಗಾ ಯೋಜನೆಯ ನೆರವಿನಿಂದ ರೈತ ಮುಕ್ತಾರ್ ಪಟೇಲ್ ‘ಬುಲೆಟ್’ ತಳಿಯ ಗುಲಾಬಿ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

2022ರ ಅಕ್ಟೋಬರ್‌ನಲ್ಲಿ ₹16ಕ್ಕೆ ಒಂದರಂತೆ 1000 ಗುಲಾಬಿ ಸಸಿಗಳನ್ನು ತಂದು ಅರ್ಧ ಎಕರೆ ಹೊಲದಲ್ಲಿ 2-3 ಅಡಿಗಳ ಅಂತರದಲ್ಲಿ ನಾಟಿ ಮಾಡಿದ್ದರು. ಎರಡು ದಿನಗಳಿಗೊಮ್ಮೆ ನೀರುಣಿಸಿದ್ದಾರೆ. ನಾಲ್ಕು ತಿಂಗಳುಗಳ ನಂತರ ಗುಲಾಬಿ ಹೂವು ಬಿಡಲು ಆರಂಭಿಸಿದೆ. ಪ್ರತಿನಿತ್ಯ ಬೆಳಗಿನ ಸಮಯ ಕಟಾವು ಮಾಡಿ ಯಾದಗಿರಿ ನಗರದ ಮಾರುಕಟ್ಟೆಯಲ್ಲಿ ₹100ಕ್ಕೆ ಕೆಜಿ ಮಾರಾಟ ಮಾಡುತ್ತಾರೆ.

ಪ್ರತಿನಿತ್ಯ 10–15 ಕೆ.ಜಿ ಗುಲಾಬಿ ಹೂ ಕಟಾವು ಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ 2 ತಿಂಗಳಿಗೊಮ್ಮೆ ಗೊಬ್ಬರ ಹಾಗೂ ವಾರಕ್ಕೆ ಎರಡು ಸಲ ಕೀಟನಾಶಕ ಸಿಂಪಡಣೆ ಮಾಡಲಾಗಿದೆ. ಕೀಟಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಬಲೆ ಅಳವಡಿಸಲಾಗಿದೆ ಎನ್ನುತ್ತಾರೆ ರೈತ ಮುಕ್ತಾರ್ ಪಟೇಲ್.

ಗುಲಾಬಿ ಕೃಷಿಯ ಜೊತೆ ನುಗ್ಗೆಕಾಯಿ, ರೇಷ್ಮೆ ವ್ಯವಸಾಯ ಮಾಡಲು ಆರಂಭಿಸಿದ್ದೇನೆ. ಇದರಲ್ಲಿಯೂ ಲಾಭಗಳಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ರೈತ ಮುಕ್ತಾರ್ ಪಟೇಲ್.

5yargole12.jpg
5yargole12.jpg
ಗುಲಾಬಿ ಕೃಷಿಗೆ ಇಲ್ಲಿಯವರೆಗೆ ಗೊಬ್ಬರ ಕೀಟನಾಶಕ ಸಾರಿಗೆ ವೆಚ್ಚ ಕೂಲಿ ಸೇರಿ ₹1.50 ಲಕ್ಷ ಖರ್ಚಾಗಿದೆ. ನರೇಗಾ ಯೋಜನೆಯಡಿ ಸೌಲಭ್ಯ ಪಡೆದಿದ್ದೇನೆ. ಸರ್ಕಾರದ ಯೋಜನೆಗಳನ್ನು ರೈತರು ಬಳಸಿಕೊಳ್ಳಬೇಕು
ಮುಕ್ತಾರ್ ಪಟೇಲ್ ರೈತ
ನರೇಗಾ ಯೋಜನೆ ಅಡಿ ಮುಕ್ತಾರ್ ಪಟೇಲ್ ಅವರ ಹೊಲದಲ್ಲಿ 228 ಮಾನವ ದಿನ ಕೆಲಸ ಮಾಡಲಾಗಿದೆ. ₹70452 ಕೂಲಿ ಪಾವತಿಸಲಾಗಿದೆ
ಸುಂದರೇಶ್ ಕುಲಾಲ್ ಸಹಾಯಕ ತೋಟಗಾರಿಕೆ ಅಧಿಕಾರಿ ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT