ಬುಧವಾರ ಮಧ್ಯಾಹ್ನದಿಂದ ಆರಂಭವಾದ ಮಳೆ ಸಂಜೆ ಆಗುತ್ತಿದ್ದಂತೆ ಬಿರುಸು ಪಡೆಯಿತು. ಕೂಲಿ ಕೆಲಸಕ್ಕೆ ತೆರಳಿದ್ದ ಮಹಿಳೆಯರು ನೆನೆಯುತ್ತಾ ಮನೆ ತಲುಪಿಸಿದರು. ಈಗಾಗಲೇ ಬಿತ್ತನೆ ಮಾಡಿರುವ ಹತ್ತಿ ಬೆಳೆಗೆ ಉತ್ತಮ ಮಳೆ ಹೆಚ್ಚು ಆಸರೆಯಾಗಲಿದೆ ಎನ್ನುತ್ತಾರೆ ರೈತ ಶಿವಪ್ಪ.
ಕಾಲುವೆ ನೀರು ನಿರಂತರವಾಗಿ ಹರಿಯುತ್ತಿದೆ. ನಿಷೇಧಿತ ಬೆಳೆ ಭತ್ತ ನಾಟಿ ಮಾಡುವ ಕಾರ್ಯ ಭರದಿಂದ ಸಾಗಿದೆ. ಭತ್ತ ನಾಟಿ ಮಾಡಲು ನೆರೆಯ ಮಹಾರಾಷ್ಟ್ರ, ತೆಲಂಗಾಣ ಮುಂತಾದ ನೆರೆ ಜಿಲ್ಲೆಯಿಂದ ಕೂಲಿ ಕಾರ್ಮಿಕರು ಬಂದಿದ್ದಾರೆ. ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಭತ್ತ ನಾಟಿ ಹಾಗೂ ನೀರು ಕಾಣಿಸುತ್ತಲಿದೆ.