ಭಾನುವಾರ, ಮಾರ್ಚ್ 26, 2023
24 °C
ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಕಾರ್ಯಾಗಾರ

ಸ್ವಯಂ ರಕ್ಷಣೆ ಕಲೆ ತಿಳಿದುಕೊಳ್ಳಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮಹಿಳೆಯರ ರಕ್ಷಣೆ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದ್ದು, ಅದರ ಜತೆಗೆ ಅವರು ಸ್ವಯಂ ರಕ್ಷಣೆಯ ಕಲೆಗಳನ್ನು ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯುವತಿಯರ ಸ್ವ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕರಾಟೆ ತರಬೇತಿ ಕಾರ್ಯಾಗಾರದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸ್‌ ಸೇರಿದಂತೆ ತಮ್ಮ ಗ್ರಾಮಗಳಿಗೆ ತೆರಳುವ ವೇಳೆ ಪುಂಡ ಪೋಕರಿಗಳು ತೊಂದರೆ ಕೊಟ್ಟರೆ ವಿದ್ಯಾರ್ಥಿನಿಯರು ತಮ್ಮ ಬ್ಯಾಗಿನಲ್ಲಿ ಪೆಪ್ಪರ್‌ ಪೌಡರ್‌, ಖಾರದ ಪುಡಿ ಇಟ್ಟುಕೊಳ್ಳಬೇಕು. ಆಗ ಸ್ವಯಂ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಎಲ್ಲ ಬಳಿಯೂ ದುಬಾರಿ ಬೆಲೆಯ ಮೊಬೈಲ್‌ಗಳಿಗೆ ಆದರೆ ಸ್ವಯಂ ರಕ್ಷಣೆಗೆ ಖಾರದಿ ಪುಡಿ ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಿ ಎಂದು ಅವರು ಮಾಹಿತಿ ನೀಡಿದರು.

ನನಗೇನೂ ಆಗುವುದಿಲ್ಲ ಎನ್ನುವ ಭಾವನೆ ಬಿಟ್ಟು ಎಲ್ಲರೂ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು. ಗೃಹ ರಕ್ಷಣೆ ಆ್ಯಪ್‌ ಬಳಸಿ ಕಳ್ಳತನ ಆಗುವುದನ್ನು ತಡೆಗಟ್ಟಬೇಕು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆಗೆ ಕರೆ ಮಾಡಬೇಕು. ಅಸ್ಪೃಶ್ಯತೆ ಆಚರಣೆ ಮಾಡುವುದು ಸಲ್ಲದು ಎಂದರು.

ಅಲ್ಲದೇ ಮಹಿಳಾ ಮಕ್ಕಳ ಮೇಲಿನ ದೌರ್ಜನ್ಯ, ಸಂಚಾರ ನಿಯಮ ಪಾಲನೆ ಬಗ್ಗೆ ಮಾಹಿತಿ ನೀಡಲಾಯಿತು.ನಂತರ ಕರಾಟೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ಕಾಲೇಜು ಮತ್ತು ಹೈಸ್ಕೂಲಿನಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಯಿತು.

ಈ ವೇಳೆ ಯಾದಗಿರಿ ಡಿವೈಎಸ್‌ಪಿ ಸಂತೋಷ ಬನ್ನಟ್ಟಿ, ಸಿಪಿಐ ದೀಪಕ್‌, ಸಂಚಾರ ಪಿಎಸ್‌ಐ ಮಹೆಬೂಬ್‌ ಅಲಿ, ಬಾಲಕಿಯರ ಕಾಲೇಜು ಪ್ರಾಶುಂಪಾಲ ಚನ್ನಬಸಪ್ಪ ಕುಳಗೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು