ಶಹಾಪುರ: ಶಹಾಪುರ-ವಿಜಯಪುರ ರಾಜ್ಯ ಹೆದ್ದಾರಿ ಮೇಲೆ ಭೀಮರಾಯನಗುಡಿ ರಸ್ತೆಗೆ ಹೊಂದಿಕೊಂಡಿರುವ ಪ್ರಾಚೀನ ನೆಲೆ ಒತ್ತುವರಿಯಾಗಿದೆ, ಅಲ್ಲಿನ ಪ್ರದೇಶದಲ್ಲಿ ಅರಣ್ಯ ಇಲಾಖೆಯು ವಸತಿಗೃಹಗಳನ್ನು ನಿರ್ಮಿಸಿದೆ, ಅವನತಿಯ ಅಂಚಿನಲ್ಲಿ ಇರುವ ಬೂದಿ ದಿನ್ನೆಯನ್ನು ಸಂರಕ್ಷಣೆ ಮಾಡಬೇಕು ಎಂದು ಇತಿಹಾಸ ಆಸಕ್ತರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಇಂತಹ ಐತಿಹಾಸಿಕ ಮಹತ್ವ ಸಾರುವ ಸ್ಥಳದಲ್ಲಿ ಅರಣ್ಯ ಇಲಾಖೆಯ ಎರಡು ವಸತಿಗೃಹವನ್ನು ನಿರ್ಮಿಸಿದೆ. ಅಲ್ಲದೆ ಅದರ ಸುತ್ತಮುತ್ತಲಿಪ್ರದೇಶದಲ್ಲಿ ಜಾಲಿ ಗಿಡ ಬೆಳೆದು ನಿಂತಿವೆ. ರಸ್ತೆಯನ್ನು ನಿರ್ಮಿಸಿದ್ದಾರೆ. ಪ್ರಾಚ್ಯವಸ್ತು ಇಲಾಖೆಯು ಬೂದಿ ದಿನ್ನೆ ಸ್ಥಳವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಅಲ್ಲಿ ಇತಿಹಾಸ ಸಾರುವ ನಾಮಫಲಕವನ್ನು ಅಳವಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಉಪನ್ಯಾಸಕ ರಾಜಗೋಪಾಲ ವಿಭೂತೆ ಮನವಿ ಮಾಡಿದ್ದಾರೆ.

ಹಿನ್ನೆಲೆ: 19ನೇ ಶತಮಾನದಲ್ಲಿ ಟೇಲರ್ ಶೋಧಿಸಿ ಪ್ರಕಟಿಸಿ ಪುರಾತನ ನೆಲೆಯ ಐದು ಸಾವಿರಕ್ಕೂ ಹೆಚ್ಚು ಹಳೆಯದಾಗಿದೆ. ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಳ್ಳಲು ದೊಡ್ಡಪ್ರಮಾಣ ಉತ್ಖನ ಕಾರ್ಯವನ್ನು ಕೈಗೊಂಡಾಗ ಪುರಾತನ ನೆಲೆಯು ದ್ವಿ-ಸಂಸ್ಕೃತಿ ಸ್ಥಳವಾಗಿದ್ದು, ಐದು ಸಾವಿರ ವರ್ಷ ಪುರಾತನದ ನೂತನ ಶಿಲಾಯುಗ ಬೂದಿ ದಿನ್ನೆ ಇಲ್ಲಿದೆ. ನಂತರದ ಕಬ್ಬಿಣದ ಯುಗದ ಬೃಹತ ಶಿಲಾ ಸಮಾಧಿ ಸಂಸ್ಕೃತಿ ಜನರು ಸಮಾಧಿ ಸ್ಥಳವನ್ನಾಗಿ ಮಾಡಿಕೊಂಡಿದ್ದರು. ಮಿಶ್ರ ಸಂಸ್ಕೃತಿಯ ನೆಲೆ ಇದಾಗಿದ್ದರಿಂದ ಟೇಲರ್ ಕೈಕೊಂಡ ಉತ್ಖನದಲ್ಲಿ ಕೇವಲ ಬೂದಿ, ಸುಟ್ಟು ಕರಕಲಾದ ಮಡಿಕೆ, ಪ್ರಾಣಿಗಳ ಮೂಳೆ ದೊರಕಿದ ಅವಶೇಷಗಳನ್ನು ಟೇಲರ್ ದಾಖಲಿಸಿದ್ದಾರೆ. ಇದರ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲು ವಿಫಲ ಅವಕಾಶವಿದೆ ಎಂದು ಉಪನ್ಯಾಸಕ ರಾಜಗೋಪಾಲ ವಿಭೂತೆ ತಿಳಿಸಿದರು.

ಬೂದಿ ದಿನ್ನೆ ಪ್ರದೇಶದಲ್ಲಿ ಜಾಲಿಗಿಡ ಬೆಳೆದಿವೆ ಪ್ರಾಚೀನ ವಸ್ತು ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಲಿ ನೂತನ ಶಿಲಾಯುವ, ಕಬ್ಬಿಣದ ಯುಗ ಪತ್ತೆ ಉಲ್ಲೇಖ

ಅರಣ್ಯ ಇಲಾಖೆಯು ಎರಡು ವಸತಿಗೃಹ ನಿರ್ಮಿಸಿದೆ. ಇಲಾಖೆಯ ಸಿಬ್ಬಂದಿ ವಾಸವಾಗಿದ್ದೇವೆ. ನಿಗಮದ ಜಾಗ ಇದಾಗಿದೆ. ರಸ್ತೆ ನಿರ್ಮಿಸಿಲ್ಲ. ಪ್ರಾಚೀನ ಇತಿಹಾಸದ ಬಗ್ಗೆ ನಮಗೆ ಗೊತ್ತಿಲ್ಲ

–ಕಾಶಪ್ಪ ಶಹಾಪುರ ಉಪವಲಯ ಅರಣ್ಯ ಅಧಿಕಾರಿ

ಸುರಪುರ ಸಂಸ್ಥಾನದಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಟೇಲರ್ ಪುರಾತತ್ವಶಾಸ್ತ್ರದಲ್ಲಿ ಪರಿಣಿತನಾಗಿದ್ದರಿಂದ ಭೀಮರಾಯನಗುಡಿ (ಅಮ್ಲಾಪುರ) ಬಯಲು ಪ್ರದೇಶದಲ್ಲಿ ಉತ್ಖನ ಮಾಡಿದಾಗ ಪ್ರಾಚೀನ ನೆಲೆ ಬೂದಿ ದಿನ್ನೆ ಪತ್ತೆಯಾಗಿದೆ

–ರಾಜಗೋಪಾಲ ವಿಭೂತೆ ಉಪನ್ಯಾಸಕ

ಯಾರು ಈ ಟೇಲರ್?

ಸುರಪುರ ಸಂಸ್ಥಾನದಲ್ಲಿ ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ಕರ್ನಲ್ ಮೆಡೋಸ್ ಟೇಲರ್ ಅವರು ನಮ್ಮ ದೇಶದ ಸಂಸ್ಕೃತಿಯನ್ನು ಇಡೀ ಜಗಕ್ಕೆ ಪರಿಚಯಿಸಿದ. ಮಾನವೀಯ ನೆಲೆಯಲ್ಲಿ ಸಮಸ್ಯೆ ಹಾಗೂ ಸವಾಲುಗಳನ್ನು ಬಗೆಹರಿಸಲು ಯತ್ನಿಸಿದ. ಇವೆಲ್ಲ ಕಾರಣದಿಂದ ಭಿನ್ನ ಅಧಿಕಾರಿಯಾಗಿ ಕಾಣುತ್ತಾರೆ. ಅಲ್ಲದೆ ಸಮಸ್ಯೆಗಿಂತ ಅದನ್ನು ಅನುಭವಿಸಿದ ವ್ಯಕ್ತಿಯ ಕಡೆ ಕಾಳಜಿ ಇತ್ತು. ಅವರೊಬ್ಬ ಎಂಜಿನಿಯರ್ಪುರಾತತ್ವಶಾಸ್ತ್ರದಲ್ಲಿ ಪರಿಣಿತನಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.