ಯಾದಗಿರಿ: ಜಿಲ್ಲೆಯಲ್ಲಿ ಮಂಗಳವಾರ 10 ವರ್ಷದೊಳಗಿನ 10 ಮಕ್ಕಳು ಸೇರಿ 61 ಜನರಿಗೆ ಕೋವಿಡ್–19 ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ. ಮಂಗಳವಾರ9 ಮಂದಿ ಗುಣಮುಖರಾಗಿದ್ದು, ಮಂಗಳವಾರದವರೆಗೆ 113 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಜಿಲ್ಲೆಯ ಕಬ್ಬರ ಕೊಲಿ ಬಿ.ದೊಡ್ಡಿಯ 33 ವರ್ಷದ ಪುರುಷ, ಸುರಪುರದ 28 ವರ್ಷದ ಪುರುಷ, 20 ವರ್ಷದ ಮಹಿಳೆ, 52 ವರ್ಷದ ಪುರುಷ, ಗುರುಮಠಕಲ್ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮದ 60 ವರ್ಷದ ಪುರುಷ, ಧರ್ಮಾಪುರ ತಾಂಡಾದ 21 ವರ್ಷದ ಪುರುಷ, 18 ವರ್ಷದ ಯುವಕ, 52 ವರ್ಷದ ಪುರುಷ, ಚಿಂತನಳ್ಳಿ ಗ್ರಾಮದ 16 ವರ್ಷದ ಯುವತಿ, ಚಂಡ್ರಿಕಿ ಗ್ರಾಮದ 25 ವರ್ಷದ ಪುರುಷ, ಕೇಶ್ವಾರ ಗ್ರಾಮದ 50 ವರ್ಷದ ಪುರುಷ, 43 ವರ್ಷದ ಮಹಿಳೆ, 13 ವರ್ಷದ ಬಾಲಕ, ಶಹಾಪುರ ತಾಲ್ಲೂಕಿನ ಹತ್ತಿಗುಡೂರು ಗ್ರಾಮದ 15 ವರ್ಷದ ಬಾಲಕನಿಗೆ ಕೋವಿಡ್ ದೃಢಪಟ್ಟಿದೆ.

ಗುರುಮಠಕಲ್ ತಾಲ್ಲೂಕಿನಲ್ಲಿ ಮಂಗಳವಾರ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಯಾದಗಿರಿ ತಾಲ್ಲೂಕಿನಲ್ಲಿ 6, ಸುರಪುರ ತಾಲ್ಲೂಕಿನಲ್ಲಿ 3, ಶಹಾಪುರ ತಾಲ್ಲೂಕಿನಲ್ಲಿ 1 ಕೋವಿಡ್ ಪ್ರಕರಗಳು ಕಂಡು ಬಂದಿವೆ.

61 ಜನ ಸೋಂಕಿತರಲ್ಲಿ 26 ಮಹಿಳೆಯರು, 35 ಪುರುಷರಿದ್ದಾರೆ. ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಪ್ರಕರಣ ಸಂಖ್ಯೆ ಪಿ–5840, ಪಿ–5841, ಪಿ–5842ರ ವ್ಯಕ್ತಿಗಳು ಗುಜರಾತ್ನ ಅಹ್ಮದಾಬಾದ್ನಿಂದ ಮತ್ತು ಉಳಿದ 58 ಜನ ಮಹಾರಾಷ್ಟ್ರದ ಮುಂಬೈ, ಚಂಬೂರ, ಕಾಂದೂಳಿ, ಅಂಧೇರಿ ಸ್ಥಳಗಳಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿದ್ದಾರೆ.ಜಿಲ್ಲೆಯಲ್ಲಿ ಪತ್ತೆಯಾದ ಬಹುತೇಕ ಪ್ರಕರಣಗಳಲ್ಲಿ ಮಹಾರಾಷ್ಟ್ರದಿಂದ ಹಿಂತಿರುಗಿ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.