ಯಾದಗಿರಿ: ಸಣ್ಣ ಕೆರೆ ಭರ್ತಿ; ಮನೆಗಳಿಗೆ ನುಗ್ಗಿದ ನೀರು

ನಾಯ್ಕಲ್ (ಯಾದಗಿರಿ): ಜಿಲ್ಲೆಯ ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದ ಸಣ್ಣ ಕೆರೆ ಭರ್ತಿಯಾಗಿ ದಲಿತ ಕೇರಿಗೆ ನೀರು ನುಗ್ಗಿದು, ಇದರಿಂದ ಸುಮಾರು 250ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
ಗ್ರಾಮದಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ನಸುಕಿನ ಜಾವ ಸುರಿದ ಧಾರಾಕಾರ ಮಳೆಗೆ ಅಂಬೇಡ್ಕರ್ ನಗರದ ಸಮೀಪ ಇರುವ ಸಣ್ಣ ಕೆರೆ ಭರ್ತಿಯಾಗಿ ದಲಿತರ ಸುಮಾರು 60ಕ್ಕೂ ಮನೆಗಳಿಗೆ ನೀರು ನುಗ್ಗಿವೆ. ಆಶ್ರಯ ಕಾಲೊನಿಯ 5 ಮನೆಗಳು, ಮೆಥೋಡಿಸ್ಟ್ ಚರ್ಚ್ ಬಳಿಯ ಸುತ್ತಮುತ್ತಲಿನ 15 ಮನೆಗಳು, ನವಗ್ರಾಮದ 6 ಮನೆಗಳು, ವಡ್ಡರ ಓಣಿಯ 10 ಮನೆಗಳು ಹೀಗೆ ಗ್ರಾಮದ ಸುಮಾರು 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.
ಮನೆಯಲ್ಲಿದ್ದ ದವಸ– ಧಾನ್ಯ, ಬಟ್ಟೆ ನೀರು ಪಾಲಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಛಾಯಾ ಮಲ್ಲಿಕಾರ್ಜುನ ಅನಸುಗೂರ, ಕಂದಾಯ ನಿರೀಕ್ಷಕ ಸಿದ್ದನಗೌಡ, ಗ್ರಾಮ ಲೆಕ್ಕಿಗ ಸಿದ್ದಿಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಿರಾಶ್ರಿತರಿಗೆ ಅಂಬೇಡ್ಕರ್ ನಗರದ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.