ಸೋಮವಾರ, ಮೇ 17, 2021
21 °C
ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಕುಟುಂಬಕ್ಕೆ ನೆರವು

ಯಾದಗಿರಿ | ಆಹಾರ ಸಾಮಗ್ರಿ ತಲುಪಿಸಿದ ನಟ ಸೋನು ಸೂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ತಾಲ್ಲೂಕಿನ ರಾಮಸಮುದ್ರ ಗ್ರಾಮದ ಪದ್ಮಮ್ಮ ನಾಗರಾಜ ದಂಪತಿಗೆ ನಟ ಸೋನು ಸೂದ್‌ ಅವರು ನೀಡಿದ ಭರವಸೆಯಂತೆ ಎರಡು ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನು ಆಮೆಜಾನ್ ಪಾರ್ಸಲ್ ಮೂಲಕ ಕಳುಹಿಸಿದ್ದಾರೆ.

6 ದಿನಗಳ ಹಿಂದೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಪದ್ಮಮ್ಮ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಅವರ ಕುಟುಂಬ ಸಂಕಷ್ಟದಲ್ಲಿದ್ದು, ನೆರವು ನೀಡುವಂತೆ ಸ್ಥಳೀಯರೊಬ್ಬರು ನಟ ಸೋನು ಸೂದ್ ಅವರನ್ನು ಕೋರಿದ್ದರು.

ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಹಾಗೂ ಅಗತ್ಯಬಿದ್ದರೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವುದಾಗಿ  ಸೋನು ಸೂದ್‌ ಭರವಸೆ ನೀಡಿದ್ದರು.

ಗುರುವಾರ ಆಹಾರ ಸಾಮಗ್ರಿ ಸ್ವೀಕರಿಸಿದ ನಾಗರಾಜ, ‘ನಟ ಸೋನು ಸೂದ್ ಅವರು ನಮ್ಮ ಕುಟುಂಬಕ್ಕೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕಳುಹಿಸಿದ್ದಾರೆ. ಅವರ ಮುಖ ನಾನು ನೋಡಿಲ್ಲ. ಅವರಿಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ಎಂಬುದು ಅರ್ಥವಾಗುತ್ತಿಲ್ಲ’ ಎಂದು ಭಾವುಕರಾದರು.

ವಿಡಿಯೊ ಸಂದೇಶ ಕಳುಹಿಸಿ ಅಭಿಪ್ರಾಯ ಹಂಚಿಕೊಂಡಿರುವ ನಟ ಸೋನು ಸೂದ್, ‘ನಾನು ನಾಗರಾಜನ ಕುಟುಂಬಕ್ಕೆ ಸಣ್ಣ ಸಹಾಯ ಮಾಡಿದ್ದೇನೆ. ಸಮಾಜದಲ್ಲಿರುವ ಸ್ಥಿತಿವಂತರು  ಇಂಥ ಕುಟುಂಬಗಳಿಗೆ ಸಹಾಯ ಮಾಡಬೇಕು. ಆ ಭಗವಂತನ ದಯೆಯಿಂದ ತಾಯಿ, ಮಕ್ಕಳು ಆ ಕುಟುಂಬ ಆರೋಗ್ಯದಿಂದ ಜೀವನ ನಡೆಸಲಿ’ ಎಂದು ಹಾರೈಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು