ವಡಗೇರಾ ಸೀಮಾಂತರ ಪ್ರದೇಶದಲ್ಲಿ ಮುಂಗಾರು ಬಿತ್ತನೆಗಾಗಿ ಜಮೀನನ್ನು ಹದ ಮಾಡಿರುವುದು
ಸುರಪುರ ತಾಲ್ಲೂಕಿನ ಹಾವಿನಾಳ ಸೀಮಾಂತರದಲ್ಲಿ ಹೊಲ ಹದಗೊಳಿಸುತ್ತಿರುವ ರೈತ
ಜಿಲ್ಲೆಯಲ್ಲಿ 80–100 ಎಂಎಂ ಮಳೆ ಬಂದರೆ ಬಿತ್ತನೆಗೆ ಸೂಕ್ತ. ಜೂನ್ 5ರ ನಂತರ ಬಿತ್ತನೆ ಮಾಡಿದರೆ ಮಳೆ ಕೊರತೆಯಾಗದು. 4.16 ಲಕ್ಷ ಹೆಕ್ಟೇರ್ ಗುರಿ ಹೊಂದಲಾಗಿದೆ
ರತೇಂದ್ರನಾಥ ಸೂಗುರು ಜಂಟಿ ಕೃಷಿ ನಿರ್ದೇಶಕ
ಕಳೆದ ವರ್ಷ ತಾಲ್ಲೂಕಿನಲ್ಲಿ ಬಿತ್ತನೆ ಗುರಿ ಪೂರೈಸಲಾಗಿತ್ತು. ಈ ವರ್ಷ ಗುರಿ ತಲುಪುವ ಆಶಾಭಾವನೆ ಹೊಂದಲಾಗಿದೆ. ಹೆಚ್ಚಿನ ರೈತರು 26799 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆ ಮಾಡುವ ಗುರಿ ಹೊಂದಿದ್ದಾರೆ
ಗಣಪತಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ವಡಗೇರಾ
ಕಳೆದ ವರ್ಷ ಹತ್ತಿಗೆ ಸರಿಯಾದ ಬೆಲೆ ಇಲ್ಲದಿರುವುದರಿಂದ ನಷ್ಟ ಅನುಭವಿಸಬೇಕಾಯಿತು. ಈ ವರ್ಷ ಹತ್ತಿ ಬಿತ್ತನೆ ಮಾಡಲು ಜಮೀನನ್ನು ಹದ ಮಾಡಿಕೊಂಡು ಮಳೆಗಾಗಿ ಮುಗಿಲು ನೋಡುತ್ತಿದ್ದೇನೆ
ಶರಣಪ್ಪ ಜಡಿ ಪ್ರಗತಿಪರ ರೈತ ವಡಗೇರಾ
ರೈತರು ಅಧಿಕೃತ ಮಾರಾಟಗಾರರ ಹತ್ತಿರ ಬಿತ್ತನೆ ಬೀಜ ರಸಗೊಬ್ಬರ ಖರೀದಿಸಬೇಕು. ಅಸಲಿ ಬಿಲ್ ಕೇಳಿ ಪಡೆದುಕೊಳ್ಳಬೇಕು
ರಾಮನಗೌಡ ಪಾಟೀಲ ಎಡಿಎ ಸುರಪುರ
ಬೇಸಿಗೆ ಹಂಗಾಮಿನ ಭತ್ತದ ಫಸಲು ಪಡೆದುಕೊಳ್ಳಲು ಅನ್ನದಾತ ಕಣ್ಣೀರು ಸುರಿಸುವಂತಾಯಿತು. ಅಧಿಕಾರಿಗಳು ಜನಪ್ರತಿನಿಧಿಗಳು ರೈತರ ಹಿತ ಕಾಪಾಡಬೇಕು