ಯಾದಗಿರಿ: ‘ದೇಹದ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಔಷಧ ಇದ್ದಂತೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಇರುವ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಔಷಧಿಯಾಗಿದ್ದು, ಅದರಲ್ಲೂ ದೇಶಿ ಆಟಗಳು ದೈಹಿಕವಾಗಿ ಸದೃಢಗೊಳಿಸುತ್ತವೆ. ನಿತ್ಯದ ಕೆಲಸದ ನಡುವೆಯೂ ಕ್ರೀಡೆಗಳಿಗೆ ಸಮಯ ಮೀಸಲಿಡಬೇಕು’ ಎಂದರು.

‘ದೇಶದಲ್ಲಿ ಕ್ರೀಡಾ ಕ್ಷೇತ್ರ ಅಗಾಧವಾಗಿದೆ ಬೆಳೆದಿದೆ. ಕ್ರೀಡಾಪಟುಗಳ ತಮ್ಮ ಪ್ರತಿಭೆ, ಉತ್ತಮ ಪ್ರದರ್ಶನ ತೋರಿ ಪದಕಗಳನ್ನು ಗೆದ್ದು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಹುದು. ನಮ್ಮ ಜಿಲ್ಲೆಯ ಸರ್ಕಾರಿ ನೌಕರರೂ ಉತ್ತಮದ ಸಾಧನೆ ಮಾಡುವಂತೆ ಆಗಲಿ’ ಎಂದು ಹೇಳಿದರು.

‘ದೇಶಿ ಆಟಗಳಾದ ಕಬಡ್ಡಿ, ಕೊಕ್ಕೊ ಆಟಗಳಿಗೆ ಹೆಚ್ಚಿನ ಆಸ್ತಕಿ ನೀಡಬೇಕು. ಮಾನಸಿಕ ಹಾಗೂ ದೈಹಿಕವಾಗಿ ಆರಾಮವಾಗಿ ಇರಲು ನೌಕರರು ನಿತ್ಯವೂ ವಾಕಿಂಗ್, ರನ್ನಿಂಗ್, ಯೋಗ ಮತ್ತು ಧ್ಯಾನ ಮಾಡಬೇಕು’ ಎಂದು ಹೇಳಿದರು.

ಸಂಘದ ಜಿಲ್ಲಾ ಅಧ್ಯಕ್ಷ ರಾಯಪ್ಪಗೌಡ ಹುಡೇದ ಮಾತನಾಡಿ, ‘ಕೆಲಸದ ಒತ್ತಡದಲ್ಲಿದ್ದು, ಸಾರ್ವಜನಿಕ ಸೇವೆಯಲ್ಲಿ ನಿರತವಾಗಿರುವ ಸರ್ಕಾರಿ ನೌಕರರಿಗೆ ಉತ್ಸಾಹ ತುಂಬಲು ಈ ಕ್ರೀಡಾಕೂಟ ಸಹಕಾರಿಯಾಗಲಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ‘ಯುಡಾ’ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಜಿ.ಪಂ ಉಪಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಜಿ.ಪಂ. ಯೋಜನಾಧಿಕಾರಿ ಕುಂಬಳಯ್ಯ, ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ, ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕಕುಮಾರ ಕಲಾಲ್, ಗೌರವ ಅಧ್ಯಕ್ಷ ಯಾಮರೆಡ್ಡಿ ಮುಂಡಾಸ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಬಂಗಾರಪ್ಪ, ಪದಾಧಿಕಾರಿಗಳಾದ ರಂಗನಾಥ ನಾಯಕ, ಸಾಯಪ್ಪ ಚಂಡ್ರಕಿ, ಬಸನಗೌಡ ಪಾಟೀಲ, ಬಿಇಒ ವೀರಪ್ಪ ಸೇರಿ ಇತರರು ಉಪಸ್ಥಿತರಿದ್ದರು.

- ಕೆಲಸದ ಒತ್ತಡದ ನಡುವೆ ನೌಕರರಿಗೆ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಚಟುವಟಿಕೆಯಿಂದ ಇರಲು ಕ್ರೀಡಾಕೂಟ ಆಯೋಜಿಸಿದ್ದು ಶ್ಲಾಘನೀಯ. ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ
ಚನ್ನಾರೆಡ್ಡಿ ಪಾಟೀಲ ತುನ್ನೂರು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.