ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಬೇಸಿಗೆ ಧಗೆ: ಗೃಹಜ್ಯೋತಿಗೆ ಬಿಲ್‌ ಬಿಸಿ

Published 17 ಮೇ 2024, 5:12 IST
Last Updated 17 ಮೇ 2024, 5:12 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಆದರೆ ಬಿಸಿಲಿನ ಧಗೆ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ಜನರು ಎಸಿ, ಕೂಲರ್‌, ಫ್ಯಾನ್‌ಗಳ ಬಳಕೆ ನಿಂತಿಲ್ಲ. ಇದರಿಂದ ಗೃಹಜ್ಯೋತಿ ಬಳಕೆದಾರರಿಗೆ ವಿದ್ಯುತ್‌ ಬಿಲ್‌ ಶಾಕ್‌ ನೀಡಿದೆ.

ಜಿಲ್ಲೆಯಲ್ಲಿ 1,21,692 ಗೃಹಜ್ಯೋತಿ ಗ್ರಾಹಕರಿದ್ದು, 200 ಯೂನಿಟ್‌ ಒಳಗೆ ಬಳಕೆ ಮಾಡಿದವರಿಗೆ ಮಾತ್ರ ಶೂನ್ಯ ಬಿಲ್ ಬಂದಿದೆ. ಇದಕ್ಕಿಂತ ಹೆಚ್ಚು ಬಳಕೆ ಮಾಡಿದ್ದರಿಂದ ಸಾವಿರಾರು ಗ್ರಾಹಕರಿಗೆ ಹೆಚ್ಚುವರಿ ಬಿಲ್‌ ಬಂದಿದೆ. ಇದುವರೆಗೂ ‘ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್‌ ಸೌಲಭ್ಯ ಪಡೆಯುತ್ತಿದ್ದ ಎಷ್ಟೋ ಕುಟುಂಬಗಳು, ಮಿತಿಯನ್ನು ಮೀರಿ ವಿದ್ಯುತ್‌ ಬಳಸುತ್ತಿರುವುದರಿಂದ ಇದೀಗ ವಿದ್ಯುತ್‌ ಬಿಲ್‌ ಕಟ್ಟಬೇಕಾಗಿವೆ. ಶೂನ್ಯ ಬಿಲ್‌ ಪಡೆಯುತ್ತಿದ್ದವರಿಗೆ ಈಗ ‘ಬಿಸಿಲಿನ ಬ(ಹೊ)ರೆ’ ಬಿದ್ದಿದೆ.

ಹಗಲಿನಲ್ಲೂ ಫ್ಯಾನ್‌, ಕೂಲರ್‌ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿರುವುದರಿಂದ ವಿದ್ಯುತ್‌ ಬಿಲ್‌ ಶಾಕ್‌ ನೀಡುವಷ್ಟು ಹೆಚ್ಚು ಬರುತ್ತಿವೆ.

ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಯಾದಗಿರಿ ವಿಭಾಗದ ಕಾರ್ಯ ಮತ್ತು ಪಾಲನಾ ವಿಭಾಗದಲ್ಲಿ ಯಾದಗಿರಿ, ಗುರುಮಠಕಲ್, ಶಹಾಪುರ, ಸುರಪುರ, ಹುಣಸಗಿ ವಿಭಾಗಗಳನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಗೃಹ ಬಳಕೆಗೆ ಮಾತ್ರ 200 ಯುನಿಟ್‌ ಉಚಿತ ವಿದ್ಯುತ್‌ ಇದ್ದು,ನಂತರ ಬಳಕೆ ಮಾಡುವ ಯೂನಿಟ್‌ಗೆ ಅಷ್ಟು ಶುಲ್ಕವನ್ನು ಗ್ರಾಹಕರು ಪಾವತಿಸಬೇಕಾಗಿದೆ. ಈ ವ್ಯಾಪ್ತಿಯಲ್ಲಿ 1,50,726 ವಿದ್ಯುತ್‌ ಗ್ರಾಹಕರಿದ್ದಾರೆ. ಅದರಲ್ಲಿ 1,21,639 ಗೃಹಜ್ಯೋತಿ ಗ್ರಾಹಕರಿದ್ದು, 200 ಯೂನಿಟ್‌ ಬಳಕೆ ಮಾಡಿದ 6,493 ಗ್ರಾಹಕರಿದ್ದಾರೆ. ಕಳೆದ ಎರಡು ತಿಂಗಳಲ್ಲಿ ವಿದ್ಯುತ್‌ ಬಿಲ್‌ ಪಾವತಿಸುವವರ ಸಂಖ್ಯೆ ಎಷ್ಟು ಹೆಚ್ಚಾಗಿದೆ.

ಹಿಂದಿನ ವರ್ಷಗಳಲ್ಲಿ ಬಳಸಿದ ಸರಾಸರಿ ಆಧರಿಸಿ ಕೆಲವರಿಗೆ ಇಂತಿಷ್ಟು ಯೂನಿಟ್‌ಗಳೆಂದು ನಿಗದಿಪಡಿಸಿ ಅದರ ಆಧಾರದ ಮೇಲೆ ಉಈನಿಟ್‌ ಬಳಸಲು ಅವಕಾಶವಿದೆ. ಆದರೆ ಈ ಬಾರಿ ಬಿಸಿಗಾಳಿ ಸಹಿತ ಬಿಸಿಲಿನ ಧಗೆ ಹೆಚ್ಚೆದರಿಂದ ಹಗಲು ರಾತ್ರಿ ವಿದ್ಯುತ್ ಬಳಕೆ ಹೆಚ್ಚಾಗಿತ್ತು. ಹೀಗಾಗಿ ಗೃಹಜ್ಯೋತಿ ಬಳಕೆದಾರರು ಪೂರ್ಣ ಶುಲ್ಕ ಪಾವತಿಸುವ ಸಂದಿಗ್ಧತೆ ಎದುರಾಗಿದೆ. ಅಲ್ಲದೇ ವಿದ್ಯುತ್ ಸ್ಲ್ಯಾಬ್‌ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT