ಸುರಪುರ: ತಾಲ್ಲೂಕಿನ ಆಲ್ದಾಳ ಗ್ರಾಮದ ಅನಧಿಕೃತ ಆಸ್ಪತ್ರೆ ಮೇಲೆ ಗುರುವಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ, ಸಿಬ್ಬಂದಿಗಳಾದ ರಾಜಶೇಖರ, ಮಲ್ಲಪ್ಪ ಗೋಗಿ, ಹಣಮಂತ ಅನವಾರ, ಶಾಂತಪ್ಪ ದಾಳಿ ಮಾಡಿದ್ದಾರೆ.
‘ಆಸ್ಪತ್ರೆ ಶಾಹಿದ್ ಪಟೇಲ ಗುದನಾಳ ಅವರಿಗೆ ಸೇರಿದ್ದು ಅವರು ಪರಾರಿಯಾಗಿದ್ದಾರೆ. ಆಸ್ಪತ್ರೆಯಲ್ಲಿದ್ದ ಸ್ಟೆತೋಸ್ಕೋಪ್, ನೆಬಿಲೈಜರ್ ಮತ್ತು ಔಷಧಿಗಳನ್ನು ವಶಕ್ಕೆ ಪಡೆದು ಆಸ್ಪತ್ರೆಯನ್ನು ಮುಚ್ಚಿಸಿ, ನೋಟಿಸ್ ಅಂಟಿಸಲಾಗಿದೆ’ ಎಂದು ಡಾ. ರಾಜಾ ವೆಂಕಪ್ಪನಾಯಕ ತಿಳಿಸಿದ್ದಾರೆ.