ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಮೂಲಕ ರಾಜಾ ವೆಂಕಟಪ್ಪ ನಾಯಕ ಚಿರಸ್ಥಾಯಿ: ಶರಣಕುಮಾರ ಸೋಲಾಪುರ

Published 26 ಫೆಬ್ರುವರಿ 2024, 7:11 IST
Last Updated 26 ಫೆಬ್ರುವರಿ 2024, 7:11 IST
ಅಕ್ಷರ ಗಾತ್ರ

ಕಕ್ಕೇರಾ: ‘ಸ್ವಾರ್ಥಕ್ಕಾಗಿ ರಾಜಕೀಯ ವ್ಯಕ್ತಿಯಲ್ಲ, ಅಭಿವೃದ್ಧಿಗಾಗಿ ಪಣತೊಟ್ಟಿದ್ದ ಶಾಸಕ ರಾಜಾ ವೆಂಕಟಪ್ಪನಾಯಕರ ನಿಧನ ತಾಲ್ಲೂಕಿಗೆ ಬರಸಿಡಿಲು ಬಡಿದಂತಾಗಿದೆ’ ಎಂದು ಪುರಸಭೆ ಮಾಜಿ ಸದಸ್ಯ ಶರಣಕುಮಾರ ಸೋಲಾಪುರ ಹೇಳಿದರು.

‘ರಾಜಾ ವೆಂಕಟಪ್ಪನಾಯಕ ನೇರನುಡಿ, ಸರಳ ವ್ಯಕ್ತಿತ್ವ ಹೊಂದಿದ ಸಜ್ಜನ ವ್ಯಕ್ತಿಯಾಗಿದ್ದರು. ಕೋವಿಡ್, ಪ್ರವಾಹ ಬಂದಾಗ ಗೂಳೆ ಹೋದ ಸಾವಿರಾರು ಜನರಿಗೆ ಸ್ವಂತ ಖರ್ಚಿನಲ್ಲಿ ಸಹಾಯ ಮಾಡಿದ್ದ’ ಜನರು ಎಂದೂ ಮರೆಯುವುದಿಲ್ಲ ಎಂದು ತಿಳಿಸಿದರು.

‘ಪುರಸಭೆ ವ್ಯಾಪ್ತಿಯ ಕಕ್ಕೇರಾ ತಾಂಡ, ಅಂಬಾನಗರ, ಹೊಸೂರ, ಗೊಲಪಲ್ಲೇರದೊಡ್ಡಿ, ಬಂದೊಡ್ಡಿ, ಗುಗಲಗಟ್ಟಿ, ಎಂಎಂದೊಡ್ಡಿ, ಪೀರಗಾರದೊಡ್ಡಿ, ಕಾನಗುಂಡೇರದೊಡ್ಡಿ, ಬೂದಗುಂಪೇರದೊಡ್ಡಿ, ಯುಕೆಪಿ ಕ್ಯಾಂಪ್, ಜಂಪಾರದೊಡ್ಡಿ, ಶಾಲಾ ಕಟ್ಟಡಗಳು, ಕುಡಿಯುವ ನೀರು, ವಿದ್ಯುತ್ ಮುಖ್ಯವಾಗಿ ನೀಲಕಂಠರಾಯನ ಗಡ್ಡಿ ಬ್ರಿಜ್ ಸೇರಿದಂತೆ ನೀರಾವರಿ ಯೋಜನೆಗಳನ್ನು ಮಾಡಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ’ ಎಂದು ಹೇಳಿದರು.

‘ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿ, ಈಚೆಗೆ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. ಸದಾ ಕ್ರಿಯಾಶೀಲ ವ್ಯಕ್ತಿಯಾದ್ದವರು, ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದರು, ಅಕಾಲಿಕ ನಿಧನದಿಂದ ತಾಲ್ಲೂಕಿಗೆ ತುಂಬಲಾರದ ನಷ್ಟವಾಗಿದೆ’ ಎಂದು ಚಂದ್ರಶೇಖರ ವಜ್ಜಲ್ ಹೇಳಿದರು.

ಹಣಮಂತ್ರಾಯ ಜಾಹಗೀರದಾರ, ಗುಂಡಪ್ಪ ಸೋಲಾಪುರ, ಬಸಯ್ಯಸ್ವಾಮಿ, ಪರಮಣ್ಣ ಕಮತಗಿ, ಬುಚ್ಚಪ್ಪನಾಯಕ, ಮುದ್ದಣ್ಣ ಅಮ್ಮಾಪುರ, ಪರಮಣ್ಣ ಗುತ್ತೇದಾರ, ವೀರಸಂಗಪ್ಪ ಸಾಹುಕಾರ, ಮಹಿಬೂಬ್ ಸುರಪುರ, ಹಣಮಂತ್ರಾಯಗೌಡ, ಅಯುಬ್, ಗುಡದಪ್ಪ ಬಿಳೇಭಾವಿ, ಚಿಡ್ಡು ಗುರಿಕಾರ, ಸೇರಿದಂತೆ ಪುರಸಭೆ ಸದಸ್ಯರು, ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

25ಕೆಕೆಆರ್01: ಕಕ್ಕೇರಾ ಪಟ್ಟಣದ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೆಂಕಟಪ್ಪನಾಯಕರ ಜೊತೆ ಸಚಿವರು ಶಾಸಕರು ಹಾಜರಿದ್ದರು.
25ಕೆಕೆಆರ್01: ಕಕ್ಕೇರಾ ಪಟ್ಟಣದ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೆಂಕಟಪ್ಪನಾಯಕರ ಜೊತೆ ಸಚಿವರು ಶಾಸಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT