ಹುಣಸಗಿ: ತಾಲ್ಲೂಕಿನ ತೆಗ್ಗೇಳ್ಳಿ ಗ್ರಾಮದ ಗ್ರಾಮಸ್ಥರು ತಾವೇ ಹಣ ಸಂಗ್ರಹಿಸಿ ಗ್ರಾಮದ ರಸ್ತೆಯನ್ನು ದುರಸ್ತಿಗೊಳಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಈ ಗ್ರಾಮದ ರಸ್ತೆಯನ್ನು ನಿರ್ಮಿಸಲಾಗಿತ್ತು. ಆ ಬಳಿಕ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿರಲಿಲ್ಲ. ಇದರಿಂದಾಗಿ ನಿತ್ಯ ಸಂಚಾರಕ್ಕೆ ಸಾಕಷ್ಟು ಪರದಾಡುವಂತಾಗಿತ್ತು. ಸುಮಾರು ಮೂರು ಕಿ.ಮೀಟರ್ ರಸ್ತೆಯನ್ನು ಕ್ರಮಿಸಲು ಹರಸಾಹಸ ಪಡುವಂತಾಗಿತ್ತು.

ಹದೆಗೆಟ್ಟ ರಸ್ತೆಯಲ್ಲಿ ಒಂದು ಬಾರಿ ಹೆರಿಗೆ ಕೂಡಾ ಆಗಿತ್ತು. ಆದ್ದರಿಂದ ಗ್ರಾಮಸ್ಥರು ಕೂಡಿಕೊಂಡು ಮನೆಗೆ ಐದು ಸಾವಿರದಂತೆ ಸಂಗ್ರಹಿಸಿ ಸುಮಾರು ₹1.50 ಲಕ್ಷ ವೆಚ್ಚದಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಶಿವಪುತ್ರಪ್ಪ ಮುಕ್ಕಣ್ಣರ, ಬಸನಗೌಡ ಮೇಟಿ, ಅಮರೇಶ ಮುಕ್ಕಣ್ಣರ, ಭೀಮರಾಯ ದೊಡ್ಡಮನಿ ತಿಳಿಸಿದರು.

ಗ್ರಾಮದ ಭಗಿರಥ ವೃತ್ತದಿಂದ ಬೈಚಬಾಳ ಗ್ರಾಮದವರೆಗೆ ಅಗತೀರ್ಥ ಬೈಚಬಾಳ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ದುರಸ್ತಿ ಮಾಡಿ ಮುರಮ್ ಹಾಕಲಾಗಿದೆ ಎಂದು ಭೀಮರಾಯ ಸಾಧೂ, ಮಹಾದೇವಪ್ಪ ಕಾಚಾಪುರ, ಹಳ್ಳೇಪ್ಪ ಹಾಗೂ ಗ್ರಾಮಸ್ಥರು ಹೇಳಿದರು.

ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.