ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರೌಢ ಶಾಲೆ ವಿದ್ಯಾರ್ಥಿಗಳ ಪ್ರಮುಖ ಘಟ್ಟ’

ಐಕೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾಥಿಗಳಿಗೆ ಬೀಳ್ಕೊಡುಗೆ
Published 30 ಮಾರ್ಚ್ 2024, 14:32 IST
Last Updated 30 ಮಾರ್ಚ್ 2024, 14:32 IST
ಅಕ್ಷರ ಗಾತ್ರ

ವಡಗೇರಾ: ‘ಪ್ರತಿ ವಿದ್ಯಾರ್ಥಿ ಜೀವನದಲ್ಲಿ ಪ್ರೌಢ ಶಾಲೆಯು ಪ್ರಮುಖ ಘಟ್ಟವಾಗಿದೆ. ಈ ಸಮಯ ಮರಳಿ ಸಿಗಲಾರದು. ಈ ಹಂತದ ಶ್ರಮ ವಿದ್ಯಾರ್ಥಿಯ ಬದುಕನ್ನೇ ರೂಪಿಸಬಲ್ಲದು’ ಎಂದು ಹೈಯಾಳ (ಬಿ) ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆನಂದ ಎಸ್ ಗೊಬ್ಬಿ ಹೇಳಿದರು.

ತಾಲ್ಲೂಕಿನ ಐಕೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ 10ನೇ ತರಗತಿ ವಿದ್ಯಾಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ನೇಮಕಾತಿ ಹೊಂದಿದ ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಿಡಬ್ಲ್ಯೂಡಿ ನಿವೃತ್ತ ಅಧಿಕಾರಿ ಹಣಮಂತ್ರಾಯ ಕುಲಕರ್ಣಿ ಮಾತನಾಡಿ, ಪ್ರೌಢಶಾಲೆ ಅನುಭವದ ಕುರಿತು ಮಕ್ಕಳಿಂದ ಕವನ ಬರೆಸಿ ಮಕ್ಕಳ ಕವಿಗೋಷ್ಠಿಯಲ್ಲಿ ಮಕ್ಕಳು ಕವನ ವಾಚನ ಮಾಡಿಸಿ, ಮಕ್ಕಳ ಕಥೆ ಕವನ ಸಂಪಾದನೆ ಮಾಡಿದ ಪುಸ್ತಕ ವೇದಿಕೆಯ ಮೇಲೆ ಬಿಡುಗಡೆಗೊಳಿಸಿದ್ದು, ವಿನೂತನ ಹೆಜ್ಜೆಗೆ ಸಾಕ್ಷಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ನೂತನವಾಗಿ ನೇಮಕಾತಿ ಹೊಂದಿದ ಶಿಕ್ಷಕರಿಗೆ ಸ್ವಾಗತ ಮಾಡುವುದರ ಜತೆಗೆ ಹಲವಾರು ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಪ್ರಭುಗೌಡ ಮಾಲಿ ಪಾಟೀಲ, ಎಸ್‌ಡಿಎಂಸಿ ಉಪಾಧ್ಯಕ್ಷ ನಿಂಗಪ್ಪ ನಾಯ್ಕೋಡಿ, ಶರಣು ನಾಟೇಕಾರ್, ಮುಖ್ಯಶಿಕ್ಷಕ ಬಸವರಾಜ, ರುದ್ರಪ್ಪ ಕುಂಬಾರ್, ಸೈಯದ್ ಅಲಿ, ಮರೆಪ್ಪ ನಾಯ್ಕೋಡಿ, ಶರಣು ಬಿಆರ್, ಸಂತೋಷ, ಶರಣಪ್ಪ ಸಜ್ಜನ, ಜಯಶ್ರೀ, ಪಾರ್ವತಿ ಸಹ ಶಿಕ್ಷಕರು ಮತ್ತು ಇತರ ಗ್ರಾಮಸ್ಥರು ಭಾಗವಹಿಸಿದ್ದರು.

ಗುರಪ್ಪ ವಾರದ್ ನಿರೂಪಿಸಿದರು, ನೀಲಮ್ಮ ಸ್ವಾಗತಿಸಿದರು. ವೆಂಕಟಲಕ್ಷ್ಮೀ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT