ಮಂಗಳವಾರ, ಜುಲೈ 27, 2021
27 °C
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,539ಕ್ಕೆ ಏರಿಕೆ

4 ಜನರಿಗೆ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 4 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 1,539ಕ್ಕೆ ಏರಿಕೆಯಾಗಿದೆ. 

ಯಾದಗಿರಿ ನಗರದ 45 ವರ್ಷದ ಪುರುಷ,  ಶಹಾಪುರ ಜಿಜಿಎಚ್‌ನ 28 ವರ್ಷದ ಪುರುಷ, ತಾಲ್ಲೂಕಿನ ಸಗರ ಎಸ್‍ಬಿಐ ಬ್ಯಾಂಕ್‍ನ 16 ವರ್ಷದ ಯುವತಿ, ಸುರಪುರ ಪೊಲೀಸ್ ಠಾಣೆಯ 28 ವರ್ಷದ ಪುರುಷ, ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಸುರಪುರ ಪೊಲೀಸ್ ಠಾಣೆ ವ್ಯಕ್ತಿಯ ಸಂಪರ್ಕದ ಹಿನ್ನೆಲೆ ಪತ್ತೆ ಹಚ್ಚಲಾಗುತ್ತಿದ್ದು, ಯಾದಗಿರಿ ವ್ಯಕ್ತಿಯ ವರದಿ ಐಎಲ್‍ಐ ಪ್ರಕರಣವಾಗಿದೆ. ಉಳಿದ ಇಬ್ಬರು ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.

1,297 ಜನ ಗುಣಮುಖ:

ಜಿಲ್ಲೆಯಲ್ಲಿ ಕೋವಿಡ್-19 ಖಚಿತಪಟ್ಟ 1,539 ವ್ಯಕ್ತಿಗಳ ಪೈಕಿ ಶುಕ್ರವಾರ ಮತ್ತೆ 138 ಜನ ಗುಣಮುಖರಾಗಿದ್ದಾರೆ. ಜುಲೈ 17ರವರೆಗೆ 1,297 ಜನ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ.241 ಪ್ರಕರಣಗಳು ಸಕ್ರಿಯವಾಗಿವೆ.

188 ವರದಿ ಬಾಕಿ: ಕೊರೊನಾ ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳ ಪೈಕಿ ಶುಕ್ರವಾರದ 150 ನೆಗೆಟಿವ್ ವರದಿ ಸೇರಿ ಈವರೆಗೆ 28,829 ಮಾದರಿಗಳ ವರದಿ ನೆಗೆಟಿವ್ ಬಂದಿವೆ. 188 ಮಾದರಿಗಳ ವರದಿ ಬರಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 3,279 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 4,938 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 122 ಕಂಟೇನ್‍ಮೆಂಟ್ ಝೋನ್‍ಗಳನ್ನು ರಚಿಸಲಾಗಿದ್ದು, ಇದರಲ್ಲಿ 41 ಕಂಟೇನ್‍ಮೆಂಟ್ ಝೋನ್‍ಗಳನ್ನು ತೆರವುಗೊಳಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 123 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಸುರಪುರ ಕೊರೊನಾ ಕೇರ್ ಸೆಂಟರ್‌ನಲ್ಲಿ 55 ಜನರನ್ನು ಮತ್ತು ಬಂದಳ್ಳಿ ಏಕಲವ್ಯ ಕೊರೊನಾ ಕೇರ್ ಸೆಂಟರ್‌ನಲ್ಲಿ 65 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 1 ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್ ಸೆಂಟರ್‌ನಲ್ಲಿ 10 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು